ನಿರ್ದೇಶಕ ರಾಮ್ ಗೋಪಾಲ್ ವರ್ಮಾರ ಮೊದಲ ಲವರ್ ಇವರೆಯಂತೆ !
Team Udayavani, Aug 29, 2021, 7:00 PM IST
ಹೈದರಾಬಾದ್ : ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ವಿಶಿಷ್ಟ, ವಿಭಿನ್ನ ಮ್ಯಾನರಿಸಂನಿಂದಲೇ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ವಿವಾದಾತ್ಮಕ ಟ್ವೀಟ್ ಗಳು, ತಲೆ-ಬುಡ ಇಲ್ಲದ ಕಾಮೆಂಟ್ ಗಳಿಂದ ಆಗಾಗ ಗಮನ ಸೆಳೆಯುವ ಆರ್.ಜಿ.ವಿ ಇದೀಗ ಇವಳೇ ನನ್ನ ಮೊದಲ ಲವರ್ ಎಂದು ಟ್ವೀಟ್ ಮಾಡಿದ್ದಾರೆ. ಜೊತಗೆ ತನ್ನ ಫಸ್ಟ್ ಕ್ರಷ್ ನ ಫೋಟೊ ಕೂಡ ಹಂಚಿಕೊಂಡಿದ್ದಾರೆ.
ವರ್ಮಾ ಹಂಚಿಕೊಂಡಿರುವ ಮಹಿಳೆಯ ಹೆಸರು ಪೋಲವಾರಪು ಸತ್ಯಾ ಎಂದು ಹೇಳಿದ್ದಾರೆ. ನಾನು ಕಾಲೇಜು ದಿನಗಳಲ್ಲಿ ಈಕೆಯನ್ನು ಪ್ರೀತಿ ಮಾಡುತ್ತಿದ್ದೆ. ನನ್ನ ಕ್ಷಣ ಕ್ಷಣಂ ಮತ್ತು ರಂಗೀಲಾ ಸಿನಿಮಾಗೆ ಸತ್ಯಾ ಅವರೇ ಸ್ಪೂರ್ತಿ ಎಂದು ಬರೆದುಕೊಂಡಿದ್ದಾರೆ.
Is she @AshuReddi ? If anyone knows who took this photo, can they contact me please? ??? pic.twitter.com/Vffi8dl1MX
— Ram Gopal Varma (@RGVzoomin) August 27, 2021
ಪ್ರಸ್ತುತ ಸತ್ಯಾ ಅವರು ಅಮೆರಿಕದಲ್ಲಿ ನೆಲೆಸಿದ್ದು ಅವರೇ ಈ ಫೋಟೊಗಳನ್ನು ನನಗೆ ಕಳುಹಿಸಿಕೊಟ್ಟಿದ್ದಾರೆ ಎಂದು ವರ್ಮಾ ಹೇಳಿದ್ದಾರೆ. ನಾನು ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುವಾಗ ಸತ್ಯಾ ಅವರನ್ನು ಪ್ರೀತಿ ಮಾಡುತ್ತಿದೆ. 90ರ ದಶಕದಲ್ಲಿ ನಿರ್ದೇಶನ ಮಾಡಿದ್ದ ಸತ್ಯಾ ಸಿನಿಮಾಗೆ ನನ್ನ ಲವರ್ ಹೆಸರು ಇಡಲಾಗಿತ್ತು ಎಂದು ಹೇಳಿದ್ದಾರೆ.
The woman in blue swim suit is SATYA ..She was my 1st ever Love in my college days at Siddhardha engineering college Vijayawada.. @polavarapusatya is currently in the US practising Maternal Fetal medicine specialist and OB Gyn pic.twitter.com/UjsnhEGhwY
— Ram Gopal Varma (@RGVzoomin) August 25, 2021
ಪೋಲವಾರಪು ಸತ್ಯಾ ಅವರ ಹಲವು ಬಗೆಯ ಫೋಟೊಗಳನ್ನು ಟ್ವೀಟರಿನಲ್ಲಿ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆದರೆ, ವರ್ಮಾ ಹೇಳಿರುವ ಮಾತು ಎಷ್ಟು ಸತ್ಯ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ.
ಇನ್ನು ಕಳೆದ ವಾರ ವರ್ಮಾ, ನಟಿ ಹಾಗೂ ಮಾಡೆಲ್ ಇನಾಯಾ ಸುಲ್ತಾನ ಜತೆ ಮನಬಂದಂತೆ ನೃತ್ಯ ಮಾಡಿ ಬಳಿಕ ಅವರ ಕಾಲಿಗೆ ಬಿದ್ದು ವಿಚಿತ್ರವಾಗಿ ವರ್ತಿಸಿದ್ದರು. ಈ ವಿಡಿಯೊವನ್ನು ಅವರೇ ಹಂಚಿಕೊಂಡಿದ್ದರು. ಆದರೆ ಆ ವಿಡಿಯೊದಲ್ಲಿ ಇರುವ ವ್ಯಕ್ತಿ ನಾನಲ್ಲ, ಅದು ಅಮೆರಿಕ ಅಧ್ಯಕ್ಷ ಬೈಡನ್ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.