Ramayan; ನಿತೇಶ್ ತಿವಾರಿ ಚಿತ್ರದಿಂದ ಆಲಿಯಾ ಔಟ್: ಸೀತೆ ಪಾತ್ರದಲ್ಲಿ ಯಾರು?
ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಾರೆಯೇ?
Team Udayavani, Aug 24, 2023, 7:38 PM IST
ಮುಂಬಯಿ: ಬಾಲಿವುಡ್ ಮತ್ತೊಂದು ಬಹುಕೋಟಿ ನಿರ್ಮಾಣ ವೆಚ್ಚದ ಸಿನಿಮಾಕ್ಕೆ ತಯಾರಾಗಿದ್ದು, ಸೆಟ್ಟೇರುವ ಮುನ್ನವೇ ನಿತೇಶ್ ತಿವಾರಿ ಅವರ ಪೌರಾಣಿಕ ಕಥಾ ಹಂದರದ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಬಾಲಿವುಡ್ ಈ ವರ್ಷ ಪ್ರಭಾಸ್ , ಸೈಫ್ ಅಲಿಖಾನ್ ನಟಿಸಿದ್ದ ʼಆದಿಪುರುಷ್ʼ ಸಿನಿಮಾ ತೆರೆ ಕಂಡಿತ್ತು. ʼರಾಮಯಣʼ ಕುರಿತಾದ ಬಹುಕೋಟಿ ನಿರ್ಮಾಣದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರೀ ನಿರಾಶೆ ಮೂಡಿಸಿತ್ತು ಮಾತ್ರವಲ್ಲದೆ ಋಣಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿ ಟೀಕೆಗೆ ಆಹಾರವಾಗಿತ್ತು. ಈ ಕಾರಣದಿಂದ ಈಗ ನಿತೇಶ್ ತಿವಾರಿ ಅವರ ʼರಾಮಾಯಣʼ ಎಂಬ ಟೈಟಲ್ ನ ಸಿನಿಮಾದ ಮೇಲೆ ಅತೀ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಸಿನಿಮಾ ವೈಭವೋಪೇತವಾಗಿ ಕಾಣಿಸಿಕೊಳ್ಳುವ ನಿಟ್ಟಿನಲ್ಲಿ ಸೆಟ್ ವಿನ್ಯಾಸಗಳು, ವಿಎಫ್ ಎಕ್ಸ್, ನಿರೂಪಣೆ ಸೇರಿದಂತೆ ಇತರ ಕೆಲಸಗಳಿಗೆ ಸಾಕಷ್ಟು ತಯಾರಿಯ ಅಗತ್ಯವಿದೆ. ಈ ಕಾರಣದಿಂದ ಸಿನಿಮಾ ತಂಡ ನಿಧಾನವಾಗಿಯೇ ತಯಾರಿಯಲ್ಲಿ ನಿರತವಾಗಿದೆ.
ರಣ್ ಬೀರ್ ಕಪೂರ್ ಅವರು ರಾಮನಾಗಿ, ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರತಿಭಾ ಸಂಪನ್ನ ಬಹು ತಾರಾಗಣ ಸಿನಿಮಾದಲ್ಲಿ ಇರಲಿದೆ ಎನ್ನಲಾಗಿತ್ತು. ಆದರೆ ಇದೀಗ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾದ ಆಲಿಯಾ ಭಟ್ ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಸಾಯಿ ಪಲ್ಲವಿ ಅವರು ಆಲಿಯಾ ಅವರ ಬದಲಿಗೆ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹಲವರು ಅಭಿಪ್ರಾಯ ಹೊರ ಹಾಕಿದ್ದು, ಅವರು ಬಾಲಿವುಡ್ ಚಿತ್ರದಲ್ಲೂ ನಟಿಸುವುದಿಲ್ಲ ಎನ್ನಲಾಗಿದೆ. ಆದರೆ ಯಶ್ ಆಗಲಿ ರಾಮಾಯಣದ ನಿರ್ಮಾಪಕರಾಗಲಿ ಯಾವುದನ್ನೂ ನಿರಾಕರಿಸಿಲ್ಲ ಅಥವಾ ಖಚಿತಪಡಿಸಿಲ್ಲ.
ಯಶ್ ಅವರು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಬಿಗ್ ಬಜೆಟ್ ಆಕ್ಷನ್ ಥ್ರಿಲ್ಲರ್ ನಲ್ಲಿ ನಟಿಸಲು ಬದ್ಧರಾಗಿದ್ದಾರೆ, ಆದ್ದರಿಂದ ರಾಮಾಯಣದಲ್ಲಿ ಅವರ ಪಾತ್ರ ಅವರು ಆದ್ಯತೆ ನೀಡುವುದರ ಮೇಲೆ ಅವಲಂಬಿತವಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೊಂದು ಬೆದರಿಕೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.