ನವದಾಂಪತ್ಯಕ್ಕೆ ಕಾಲಿಟ್ಟ ರಾಣಾ-ಮಿಹಿಕಾ: ವಿವಾಹ ಸಂಭ್ರಮದ ಲೇಟೆಸ್ಟ್ ಫೋಟೋಗಳು ಇಲ್ಲಿವೆ…!
Team Udayavani, Aug 9, 2020, 8:09 AM IST
ಹೈದರಾಬಾದ್: ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ನವದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಕೋವಿಡ್ ಭೀತಿಯಿಂದಾಗಿ ಹೈದರಬಾದ್ ನ ರಾಮನಾಯ್ಡು ಸ್ಟುಡಿಯೋ ದಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನಡೆಯಿತು. ವಿವಾಹದಲ್ಲಿ ಕೆಲವೇ ಮಂದಿ ಮಾತ್ರ ಭಾಗಿಯಾಗಿದ್ದು ಸಮಂತಾ, ನಾಗಚೈತನ್ಯ, ಅಲ್ಲು ಅರ್ಜುನ್, ವೆಂಕಟೇಶ್ ಪ್ರಮುಖರು.
ತೆಲುಗು ಮತ್ತು ಮಾರ್ವಾರಿ ಪದ್ಧತಿಗಳ ಪ್ರಕಾರ ಮದುವೆ ನಡೆದಿದ್ದು, ಸ್ನೇಹಿತರು ಮತ್ತು ಕುಟುಂಬ ಸದಸ್ಯರು ವರ್ಚುವಲ್ ರಿಯಾಲಿಟಿ (ವಿಆರ್) ಮೂಲಕ ಮದುವೆಯನ್ನು ವೀಕ್ಷಿಸಿದರು. ಮಾತ್ರವಲ್ಲದೆ ಕೆಲವು ನಿಮಿಷಗಳವರೆಗೆ ವಿವಾಹದ ಲೈವ್ ಸ್ಟ್ರೀಮ್ ಲಿಂಕ್ ಸಾರ್ವಜನಿಕರಿಗೆ ಮುಕ್ತವಾಗಿತ್ತು
ರಾಣಾ ದಗ್ಗುಬಾಟಿ ಆಫ್-ವೈಟ್ ಶೆರ್ವಾನಿ ಯಲ್ಲಿ ಮಿಂಚಿದರೆ, ಮಿಹೀಕಾ ಬಜಾಜ್ ಗೋಲ್ಡ್ ಮತ್ತು ಕ್ರೀಮ್ ಲೆಹಂಗಾದ ಜೊತೆ ಕೆಂಪು ಶಾಲುವಿನೊಂದಿಗೆ ಸುಂದರವಾಗಿ ಕಾಣಿಸುತ್ತಿದ್ದರು.
ಈ ಸೆಲೆಬ್ರಿಟಿ ಜೋಡಿಯ ವಿವಾಹದ ಫೋಟೋಗಳು ಇಲ್ಲಿವೆ.
ಮಿಹಿಕಾ ಮೂಲತಃ ಹೈದರಾಬಾದ್‌ನ ಉದ್ಯಮಿ. ಲಂಡನ್‌ನ ಚೆಲ್ಸಾ ವಿವಿಯಿಂದ ಇಂಟೀರಿಯರ್ ಡಿಸೈನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಮುತ್ತಿನ ನಗರಿಯಲ್ಲಿ ಇಂಟೀರಿಯರ್ ಡೆಕೊರೇಷನ್ ಹಾಗೂ ಇವೆಂಟ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ “ಡ್ನೂ ಡ್ರಾಪ್ ಡಿಸೈನ್ ಸ್ಟುಡಿಯೋ’ ಎಂಬ ಕಂಪೆನಿ ಹೊಂದಿದ್ದಾರೆ.
ವಿವಾಹದ ನಂತರ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ರಾಣಾ ದಗ್ಗುಬಾಟಿ, ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ಮನೆಯಿಂದ ಮಿಹೀಕಾ ಬಜಾಜ್ ಮನೆ ಕೇವಲ 3 ಕಿ.ಮೀ ದೂರದಲ್ಲಿತ್ತು. ಈ ನಡುವೆ ಇಬ್ಬರ ನಡುವೆ ಪ್ರೀತಿ ಮೂಡಿತು ಎಂದು ಬಹಿರಂಗಪಡಿಸಿದ್ದಾರೆ.
ಇದು ಮದುವೆಯಾಗಲು ಸೂಕ್ತ ಸಮಯ ಎಂದೆನಿಸಿತು. ನಮ್ಮಿಬ್ಬರ ನಡುವೆ ಉತ್ತಮ ಭಾಂಧವ್ಯವಿದ್ದು ಮಿಹೀಕಾಳನ್ನು ಮದುವೆಯಾಗುತ್ತಿರುವುದು ನನ್ನ ಜೀವನದ ಅತ್ಯುತ್ತಮ ಸಮಯವಾಗಿದೆ ಎಂದು ದಗ್ಗುಭಾಟಿ ತಿಳಿಸಿದ್ದಾರೆ.
ಅಕ್ಷಯ್ ಕುಮಾರ್, ಸಮಂತಾ ಅಕ್ಕಿನೇನಿ, ಕಾಜಲ್ ಅಗರ್ವಾಲ್, ಶ್ರುತಿ ಹಾಸನ್, ಖುಷ್ಬು ಸೇರಿದಂತೆ ಅನೇಕ ಗಣ್ಯರು ನವದಂಪತಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
Raj Kapoor: ಪಾಕಿಸ್ತಾನದಲ್ಲಿ ಬಾಲಿವುಡ್ ನಟ ದಿ. ರಾಜ್ ಕಪೂರ್100ನೇ ಜನ್ಮದಿನ ಆಚರಣೆ
UI Movie: ಉಪ್ಪಿ ʼಯುಐʼ ಟ್ರೇಲರ್ ನೋಡಿ ಬಾಲಿವುಡ್ ನಟ ಆಮಿರ್ ಖಾನ್ ಶಾಕ್.!
Year Ender: 10 ಗೆಲುವು.., ಒಂದಷ್ಟು ಸೋಲು..: ಇಲ್ಲಿದೆ ಬಾಲಿವುಡ್ ಬಾಕ್ಸಾಫೀಸ್ ರಿಪೋರ್ಟ್
Mushtaq Khan: ಕಾರ್ಯಕ್ರಮಕ್ಕೆ ಆಹ್ವಾನಿಸಿ ಖ್ಯಾತ ನಟನ ಅಪಹರಣ.. 12 ಗಂಟೆ ಚಿತ್ರಹಿಂಸೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.