ಏಪ್ರಿಲ್ ತಿಂಗಳಲ್ಲೇ ನಡೆಯಲಿದೆ ರಣಬೀರ್ ಕಪೂರ್- ಆಲಿಯಾ ಭಟ್ ವಿವಾಹ
Team Udayavani, Apr 3, 2022, 11:53 AM IST
ಬಾಲಿವುಡ್ ನ ಬಹು ನಿರೀಕ್ಷಿತ ಮದುವೆಯೊಂದು ಶೀಘ್ರದಲ್ಲೇ ನಡೆಯಲಿದೆ. ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಶೀಘ್ರದಲ್ಲೇ ಪತಿ-ಪತ್ನಿಯಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ಒಂದು ಮೂಲದ ಪ್ರಕಾರ, ರಣಬೀರ್ ಮತ್ತು ಆಲಿಯಾ ಏಪ್ರಿಲ್ ತಿಂಗಳಲ್ಲೇ ವಿವಾಹವಾಗಲಿದ್ದಾರೆ. ಖಾಸಗಿ ವಿವಾಹ ಸಮಾರಂಭದಲ್ಲಿ ಕೆಲವು ಅತಿಥಿಗಳು ಹಾಗೂ ನಿಕಟ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿ ತಿಳಿಸಿದೆ.
ಈ ಹಿಂದೆ, ರಣಬೀರ್ ಮತ್ತು ಆಲಿಯಾ ಮದುವೆಯ ದಿನಾಂಕವನ್ನು ಅಂತಿಮಗೊಳಿಸಿದ್ದಾರೆ ಎಂದು ಅವರ ನಿಕಟ ಮೂಲವೊಂದು ಬಹಿರಂಗಪಡಿಸಿತ್ತು.
ಇದನ್ನೂ ಓದಿ:ಬಾಲಿವುಡ್ ನಲ್ಲಿ ಫುಲ್ ಬ್ಯುಸಿಯಾದ ಕೊಡಗಿನ ಕುವರಿ: ರಣಬೀರ್ ಗೆ ಜೋಡಿ
“ರಣಬೀರ್ ಮತ್ತು ಆಲಿಯಾ ಏಪ್ರಿಲ್ ನಲ್ಲಿ ಮದುವೆಯಾಗುತ್ತಾರೆ ಎಂದು ಬಲವಾದ ಸುದ್ದಿಯಿದೆ. ಇತ್ತೀಚೆಗೆ, ರಣಬೀರ್ ಅವರ ತಾಯಿ ನೀತು ಕಪೂರ್, ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ಮನೀಶ್ ಅವರು ನೀತು ಕಪೂರ್ ನಿವಾಸಲ್ಲಿ ಕಾಣಿಸಿಕೊಂಡರು. ಅಲ್ಲದೆ ರಣಬೀರ್ ಮತ್ತು ಆಲಿಯಾ ಚಿತ್ರೀಕರಣದಿಂದ ಬಿಡುವು ಕೇಳಿದ್ದಾರೆ” ಎಂದು ಮೂಲಗಳನ್ನು ಉದ್ದೇಶಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಮೂಲಗಳ ಪ್ರಕಾರ, ವಿವಾಹ ಸಮಾರಂಭವು ಮುಂಬೈನ ಚೆಂಬೂರಿನಲ್ಲಿರುವ ರಣಬೀರ್ ಕಪೂರ್ ಮನೆಯಲ್ಲಿ ನಡೆಯಲಿದೆ. ರಾಜಸ್ಥಾನದ ಉದಯಪುರದಲ್ಲಿ ಸಮಾರಂಭ ನಡೆಯಲಿದೆ ಎಂದು ಈ ಹಿಂದೆ ವರದಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.