![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 11, 2017, 12:36 PM IST
ಹೊಸದಿಲ್ಲಿ : ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿಯೇ ಉಳಿದಿರುವ ಮುದ್ದು ಮುಖದ ರಣಬೀರ್ ಕಪೂರ್ ಈಗಿನ್ನು ಸದ್ಯದಲ್ಲೇ ವಿವಾಹವಾಗಲಿದ್ದಾರೆಯೇ ? ಹೌದು ಎನ್ನುತ್ತದೆ ಡಿಎನ್‌ಎ ವರದಿ.
ವರದಿ ಪ್ರಕಾರ ರಣಬೀರ್ ಮದುವೆಯಾಗಲಿರುವ ಹುಡುಗಿ ಲಂಡನ್ ನವಳು. ಆಕೆಯ ತಂದೆ ಭಾರೀ ದೊಡ್ಡ ಉದ್ಯಮಿ.
ಈ ಹುಡುಗಿಯನ್ನು ನೋಡಲು ರಣಬೀರ್ ಕಪೂರ್ ಮತ್ತು ಆತನ ತಾಯಿ, ಮಾಜಿ ಬಾಲಿವುಡ್ ನಟಿ ನೀತೂ ಈಚೆಗೆ ಲಂಡನ್ ಹೋಗಿದ್ದರು. ಮಾತ್ರವಲ್ಲ ಹುಡುಗಿಯ ಮನೆಯವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದರು; ಈ ಭೇಟಿಯನ್ನು ನೀತೂ ಅವರ ಅತ್ಯಂತ ನಿಕಟ ಸ್ನೇಹಿತರೊಬ್ಬರು ವ್ಯವಸ್ಥೆಮಾಡಿದ್ದರು ಎಂದು ವರದಿ ತಿಳಿಸಿದೆ.
ರಣಬೀರ್‌ನ ಈ ಹಿಂದಿನ ಗರ್ಲ್ ಫ್ರೆಂಡ್‌ಗಳಾಗಿದ್ದ ದೀಪಿಕಾ ಪಡುಕೋಣೆ ಮತ್ತು ಕತ್ರೀನಾ ಕೈಫ್, ರಣಬೀರ್ ಅಮ್ಮ ನೀತೂ ಕಪೂರ್ ಗೆ ಒಂದಿನಿತೂ ಇಷ್ಟವಿರಲಿಲ್ಲವಂತೆ. ರಣಬೀರ್ ಮದುವೆಯಾಗುವ ಹುಡುಗಿ ಬಾಲಿವುಡ್‌ಗೆ ಸೇರಿದವಳಾಗಿರಲೇಬಾರದು ಎಂಬುದು ನೀತೂ ಹಠವಂತೆ !
ಅಂತೂ ರಣಬೀರ್ ಮತ್ತು ಆತನ ತಾಯಿ ನೀತೂ ಕಪೂರ್, ಲಂಡನ್‌ನಲ್ಲಿ ಹುಡುಗಿಯನ್ನು ನೋಡಿದ್ದಾರೆ. ಮಾತುಕತೆಯನ್ನೂ ನಡೆಸಿದ್ದಾರೆ. ಅಂತಿರುವಾಗ ರಣಬೀರ್ ಮದುವೆ ಇನ್ನು ಬೇಗನೆ ನಡೆಯುವುದನ್ನು ನಿರೀಕ್ಷಿಸಲಾಗಿದೆಯಂತೆ !
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.