ರಣವೀರ್ ಸಿಂಗ್‌ಗೂ ಕೊಂಕಣಿ ಕಲಿಸಿದ ದೀಪಿಕಾ ಪಡುಕೋಣೆ
Team Udayavani, Jul 4, 2022, 9:27 PM IST
ವಾಷಿಂಗ್ಟನ್: ಮಂಗಳೂರಿನಲ್ಲಿ ಹುಟ್ಟಿ ಈಗ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆ ಅವರು ಪತಿ ರಣವೀರ್ ಸಿಂಗ್‌ಗೂ ಕೊಂಕಣಿ ಕಲಿಸಿದ್ದಾರೆ. ಈ ವಿಚಾರವು ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿದುಬಂದಿದೆ.
ಅಮೆರಿಕದಲ್ಲಿನ ಕೊಂಕಣಿ ಸಮುದಾಯವು ಕಾರ್ಯಕ್ರಮವನ್ನು ಆಯೋಜಿಸಿದ್ದು, ಅದಕ್ಕೆ ದೀಪಿಕಾ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಅದರಲ್ಲಿ ರಣವೀರ್ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ರಣವೀರ್, ಕೊಂಕಣಿಯಲ್ಲಿ “ನಾನು ತುಂಬಾ ಖುಷಿಯಾಗಿದ್ದೇನೆ’ ಎಂದಿದ್ದಾರೆ.
ಹಾಗೆಯೇ “ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ’ ಎಂದಿದ್ದಾರೆ. ಅತ್ಯಂತ ಸುಲಲಿತವಾಗಿ ಕೊಂಕಣಿ ಮಾತನಾಡಿದ ರಣವೀರ್‌ಗೆ ಚಪ್ಪಾಳೆಯ ಸುರಿಮಳೆಯೇ ಸಿಕ್ಕಿದೆ. ದೀಪಿಕಾ ಕೂಡ ಚಪ್ಪಾಳೆ ಹೊಡೆದು ಪತಿಗೆ ಪ್ರೋತ್ಸಾಹಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಹಾಗೆಯೇ ಅಮೆರಿಕದಲ್ಲಿ ನಡೆದ ಶಂಕರ್ ಮಹದೇವನ್ ಕನ್ಸ್‌ರ್ಟ್‌ನಲ್ಲೂ ಜೋಡಿ ಭಾಗವಹಿಸಿ, ಹೆಜ್ಜೆ ಹಾಕಿದ್ದಾರೆ.
Ranveer speaking in Konkani?#deepveer
Deepika is so proud. She’s laughing and clapping???#DeepikaPadukone #ranveersingh pic.twitter.com/mmUilxQ5HZ
— Anisha? (@anisha_xox) July 4, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.