![Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು](https://www.udayavani.com/wp-content/uploads/2025/02/tankar-415x221.jpg)
![Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು](https://www.udayavani.com/wp-content/uploads/2025/02/tankar-415x221.jpg)
Team Udayavani, Jan 30, 2025, 12:26 PM IST
ಮುಂಬಯಿ: ಕಿಂಗ್ ಖಾನ್ ಶಾರುಖ್ (Shah Rukh Khan) ಜತೆ ʼಜವಾನ್ʼ ಸಿನಿಮಾ ಮಾಡಿ ಸೌತ್ ನಿರ್ದೇಶಕ ಅಟ್ಲಿ ಕುಮಾರ್ (Atlee Kumar) ಬಾಲಿವುಡ್‌ನಲ್ಲಿ ಮೋಡಿ ಮಾಡಿದ್ದರು.
ಬಿಟೌನ್‌ನ ಮತ್ತೊಬ್ಬ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಜತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಈ ಹಿಂದೆಯೇ ಹರಿದಾಡಿತ್ತು. ಇದೀಗ ಈ ಚಿತ್ರದ ಬಗ್ಗೆ ಅಪ್ಡೇಟ್ ವೊಂದು ಹೊರಬಿದ್ದಿದೆ.
ಇದನ್ನೂ ಓದಿ: Kiccha Sudeep: ಅಧಿಕ ಪ್ರಸಂಗ ಬೇಡ.. ಪತ್ರಕರ್ತನ ಪ್ರಶ್ನೆಗೆ ಗರಂ ಆದದ್ದೇಕೆ ಕಿಚ್ಚ?
ʼಜವಾನ್ʼ ಹಿಟ್ ಆದ ಬಳಿಕ ಅಟ್ಲಿ ಕುಮಾರ್ ಬಾಲಿವುಡ್ ʼಖಾನ್ಸ್ʼ ಗಳ ಜತೆ ತಾವು ಸಿನಿಮಾ ಮಾಡಬೇಕೆಂದು ವೇದಿಕೆವೊಂದರಲ್ಲಿ ಹೇಳಿಕೊಂಡಿದ್ದರು. ಅದರಂತೆ ಅಟ್ಲಿ ಸಲ್ಮಾನ್ ಜತೆ ಸಿನಿಮಾ ಮಾಡಲಿದ್ದು, ಈ ಸುದ್ದಿ ಹಬ್ಬಿದ ದಿನದಂದಲೇ ಬಣ್ಣದ ಲೋಕದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿತ್ತು.
ಸಲ್ಮಾನ್ ಜತೆ ಅಟ್ಲಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಯಾರು ನಾಯಕಿ ಆಗಿರಲಿದ್ದಾರೆ ಎನ್ನುವ ಬಗೆಗಿನ ಪ್ರಶ್ನೆಗೆ ಉತ್ತರ ಹೊರಬಿದ್ದಿದೆ.
ಕನ್ನಡದ ʼಕಿರಿಕ್ ಪಾರ್ಟಿʼಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟು, ʼಪುಷ್ಪʼದಂತಹ ದೊಡ್ಡ ಸಿನಿಮಾಗಳಲ್ಲಿ ನಟಿಸಿ ಬಹುಬೇಡಿಕೆಯ ನಟಿಯಾಗಿ ಬೆಳದಿರುವ ರಶ್ಮಿಕಾ ಮಂದಣ್ಣ (Rashmika Mandanna) ಸಲ್ಮಾನ್ ಖಾನ್ – ಅಟ್ಲಿ ಕುಮಾರ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ʼಫಿಲ್ಮ್ ಫೇರ್ʼ ವರದಿ ಮಾಡಿದೆ.
ಶೀಘ್ರದಲ್ಲಿ ರಶ್ಮಿಕಾ ಅಟ್ಲಿ ಸಿನಿಮಾಕ್ಕೆ ಸಹಿ ಹಾಕಲಿದ್ದಾರೆ ಎಂದು ವರದಿ ತಿಳಿಸಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ಜೊತೆ ರಜನಿಕಾಂತ್ ಅಥವಾ ಕಮಲ್ ಹಾಸನ್ ಅವರು ನಟಿಸಲಿದ್ದಾರೆ ಎನ್ನುವ ಮಾತುಗಳು ಈ ಹಿಂದೆ ಹರಿದಾಡಿತ್ತು.
ಅಂದಹಾಗೆ ಈಗಾಗಲೇ ರಶ್ಮಿಕಾ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ʼಸಿಕಂದರ್ʼ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಅವರು ಸಲ್ಮಾನ್ ಜತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
Bollywood Movie: ಕರಣ್ ಜೋಹರ್ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ
Kollywood: ರಜಿನಿಕಾಂತ್ ʼಕೂಲಿʼಯಲ್ಲಿ ಡ್ಯಾನ್ಸ್ ನಂಬರ್; ಸೊಂಟ ಬಳುಕಿಸಲಿದ್ದಾರೆ ಈ ನಟಿ?
Kollywood: ಮತ್ತೆ ರಜಿನಿ ಜತೆ ಶಿವಣ್ಣ.. ʼಜೈಲರ್ -2ʼಗೆ 14 ದಿನದ ಕಾಲ್ ಶೀಟ್
ತೆಲುಗು ಗೊತ್ತಿಲ್ಲದ ನಾಯಕಿಯರನ್ನು ಬೆಂಬಲಿಸುತ್ತೇವೆ – ವಿವಾದ ಎಬ್ಬಿಸಿದ ನಿರ್ಮಾಪಕನ ಹೇಳಿಕೆ
Tollywood: ಅಲ್ಲು ಅರ್ಜುನ್ಗೆ ಅಟ್ಲಿ ಆ್ಯಕ್ಷನ್ ಕಟ್: ಶ್ರೀದೇವಿ ಪುತ್ರಿ ನಾಯಕಿ?
Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು
Bollywood Movie: ಕರಣ್ ಜೋಹರ್ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ
Belekeri: ಬೇಲೆಕೇರಿ ಅದಿರು ನಾಪತ್ತೆ; ಶೀಘ್ರ ತೀರ್ಪು ಪ್ರಕಟ ಸಾಧ್ಯತೆ-ಆರೋಪಿಗಳಿಗೆ ಸಂಕಷ್ಟ
ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ
Push-Up: ಮೈ ಕೊಡವಿಕೊಂಡು ಎದ್ದು ನಿಲ್ಲಿಸುವ ಪುಶ್
You seem to have an Ad Blocker on.
To continue reading, please turn it off or whitelist Udayavani.