ಸೌತ್ ಆಯ್ತು ,ಈಗ ಬಿ ಟೌನ್ ಪಯಣ ಬೆಳೆಸಿದ ರಶ್ಮಿಕಾ : ಬಾಲಿವುಡ್ ನಲ್ಲಿ ಕಿರಿಕ್ ಬೆಡಗಿ ಮಿಂಚು
Team Udayavani, Dec 24, 2020, 8:10 PM IST
ಮುಂಬಯಿ : ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಸೌತ್ ಸಿನಿ ದುನಿಯಾದಲ್ಲಿ ಮೋಡಿ ಮಾಡುತ್ತಿದ್ದಾರೆ. ತನ್ನ ನಟನಾ ಕೌಶಲ್ಯದಿಂದ ಹೆಸರು ಮಾಡುತ್ತಿರುವ ರಶ್ಮಿಕಾಗೆ ಬಿ ಟೌನ್ ಅವಕಾಶದ ಬಾಗಿಲು ತೆರೆದಿದೆ.
ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರ ನಟಿಸುತ್ತಿರುವ ‘ಮಿಷನ್ ಮಜ್ನು’ ಚಿತ್ರದಲ್ಲಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂಭ್ರಮವನ್ನು ನಟಿ ರಶ್ಮಿಕಾ ಚಿತ್ರದ ಪೋಸ್ಟರ್ ಒಂದನ್ನು ಹಾಕಿ ಬಾಲಿವುಡ್ ಜರ್ನಿಯ ಮೊದಲ ಹೆಜ್ಜೆಯ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ಗೆ ಕಾಲಿಡುತ್ತಿರುವ ರಶ್ಮಿಕಾ ಮಂದಣ್ಣನ ಕುರಿತು ಚಿತ್ರದ ನಾಯಕ ಸಿದ್ದಾರ್ಥ್ ಮಲ್ಹೋತ್ರ ಟ್ವೀಟ್ ಮೂಲಕ “ಸ್ವಾಗತ ರಶ್ಮಿಕಾ, ಮಿಷನ್ ಮಜ್ನು ಚಿತ್ರ ತಂಡದೊಟ್ಟಿಗೆ ನಿಮ್ಮನ್ನು ನೋಡಲು ಖುಷಿಯಾಗುತ್ತದೆ, ಆದಷ್ಟು ಬೇಗ ಸಿಗೋಣ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಲು ಬಂದ ALL OK CRAZY ಹಾಡು
ಇನ್ನು ‘ಮಿಷನ್ ಮಜ್ನು’ ನೈಜ ಕಥಾ ಹಂದರವನ್ನು ಹೊಂದಿದ್ದು, ಇದರಲ್ಲಿ ಸಿದ್ದಾರ್ಥ್ ರಾ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಶಾಂತನು ಬಾಗ್ಚಿ ಅವರ ಮೊದಲ ಚಿತ್ರ ಇದಾಗಿದ್ದು, ‘ಉರಿ’ ಚಿತ್ರವನ್ನು ನಿರ್ಮಾಣ ಮಾಡಿದ್ದ, ರೋನಿ ಸ್ಕ್ರೂವಾಲಾ ಮಿಷನ್ ಮಜ್ನು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಸಿನಿ ಮಂದಿಯ ಗಮನ ಸೆಳೆಯುತ್ತಿದೆ.
ರಶ್ಮಿಕಾ ಮಂದಣ್ಣ ಬಾಲಿವುಡ್ ರ್ಯಾಪರ್ ಬಾದ್ ಷಾ ಅವರ ಆಲ್ಬಂ ಸಾಂಗ್ ನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಆಲ್ಬಂ ಸಾಂಗ್ ನ ಚಿತ್ರೀಕರಣ ಭರದಿಂದ ಸಾಗುತ್ತಿದೆ.
Hey welcome, excited to have you onboard #MissionMajnu team, see you soon ✌️@iamRashmika https://t.co/Ri9LY445jn
— Sidharth Malhotra (@SidMalhotra) December 23, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.