Video: ಬಾಲಿವುಡ್ ನಟ ರಣ್ಬೀರ್ ಕಪೂರ್‌ಗೆ ಕನ್ನಡ ಕಲಿಸಿದ ರಶ್ಮಿಕಾ ಮಂದಣ್ಣ
Team Udayavani, Nov 22, 2023, 1:26 PM IST
ಮುಂಬಯಿ: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರ ಬಹು ನಿರೀಕ್ಷಿತ ಬಾಲಿವುಡ್ ಸಿನಿಮಾ ʼಅನಿಮಲ್ʼ ರಿಲೀಸ್ ಗೆ ರೆಡಿಯಾಗಿದೆ. ರಿಲೀಸ್ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ.
ಈಗಾಗಲೇ ಟೀಸರ್ ಹಾಗೂ ಹಾಡುಗಳಿಂದ ಗಮನ ಸೆಳೆದಿರುವ ಸಂದೀಪ್ ವಂಗಾ ಅವರ ʼಅನಿಮಲ್ʼ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಡೊಂದರಲ್ಲಿ ಅವರು ರಣ್ಭೀರ್ ಜೊತೆ ಲಿಪ್ ಲಾಕ್ ಮಾಡಿಕೊಂಡಿರುವುದು ಬಿಟೌನ್ ವಲಯದ ಇತ್ತೀಚೆಗಿನ ವೈರಲ್ ಟಾಪಿಕ್ ಆಗಿದೆ.
ಗುರುವಾರ(ನ.23 ರಂದು) ʼಅನಿಮಲ್ʼ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಟಿವಿ ಕಾರ್ಯಕ್ರಮವೊಂದಕ್ಕೆ ಸಿನಿಮಾ ಪ್ರಚಾರ ಮಾಡಲು ತೆರಳಿದೆ. ರಣ್ಬೀರ್ ಹಾಗೂ ರಶ್ಮಿಕಾ ಅವರು ʼಇಂಡಿಯನ್ ಐಡಲ್ -14ʼ ಶೋಗೆ ಸಿನಿಮಾ ಪ್ರಚಾರ ಮಾಡಲು ತೆರಳಿದ ವೇಳೆ ಪಾಪರಾಜಿ( ಬಿಟೌನ್ ಸಿನಿ ಮೀಡಿಯಾ) ಎದುರಿಗೆ ಸಿಕ್ಕಿದ್ದಾರೆ.
“ಏನು ನಮ್ಮ ಡಾಕ್ಯುಮೆಂಟರಿ ಮಾಡ್ತಾ ಇದ್ದೀರಾ” ಎಂದು ರಣ್ಬೀರ್ ಹೇಳಿದ್ದಾರೆ. ಇದಾದ ಬಳಿಕ ಪಾಪರಾಜಿಯೊಬ್ಬರು ಕನ್ನಡದಲ್ಲಿ ಏನಾದ್ರು ಮಾತನಾಡಿ ಎಂದಿದ್ದಾರೆ. ಇದಕ್ಕೆ ರಶ್ಮಿಕಾ “ಎಲ್ಲರಿಗೂ ನಮಸ್ಕಾರ” ಎಂದಿದ್ದಾರೆ. ಇದಾದ ನಂತರ “ಹೇಗಿದ್ದೀರಾ, ಎಲ್ಲರಿಗೂ ನಮಸ್ಕಾರ” ಎಂದು ರಶ್ಮಿಕಾ ರಣ್ಬೀರ್ ಅವರಿಗೆ ಕನ್ನಡ ಕಲಿಸಿದ್ದಾರೆ. ರಣ್ಬೀರ್ ಕೂಡ ಕನ್ನಡದಲ್ಲೇ ಮಾತನಾಡಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ʼಅನಿಮಲ್ʼ ಡಿ.1 ರಂದು ಪ್ಯಾನ್ ಇಂಡಿಯಾ ಭಾಷೆಯಲ್ಲಿ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ರಣ್ಬೀರ್, ರಶ್ಮಿಕಾ ಜೊತೆ ಬಾಬಿ ಡಿಯೋಲ್, ಅನಿಲ್ ಕಪೂರ್ ಮುಂತಾದವರು ನಟಿಸಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.