Ratan Tata: ಟಾಟಾ ನಿರ್ಮಾಣ ಮಾಡಿದ್ದ ಏಕೈಕ ಸಿನಿಮಾ ಯಾವುದು? ಆ ಸಿನಿಮಾ ಗಳಿಸಿದ್ದೆಷ್ಟು?

ಎಲ್ಲದರಲ್ಲೂ ಗೆದ್ದು ಆ ಒಂದು ಸಿನಿಮಾ ನಿರ್ಮಾಣದಲ್ಲಿ ಸೋತಿದ್ದ ಟಾಟಾ

Team Udayavani, Oct 10, 2024, 2:57 PM IST

7

ಮುಂಬಯಿ: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್ ಟಾಟಾ (86) (Ratan Tata) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ (ಅ.9ರಂದು) ತಡರಾತ್ರಿ ನಗರದ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಉದ್ಯಮಿಯಾಗಿ ಮಾತ್ರ ಗುರುತಿಸಿಕೊಳ್ಳದೆ ಸಮಾಜಮುಖಿ ಕೆಲಸಗಳಿಂದಲೂ ಟಾಟಾ ಗುರುತಿಸಿಕೊಂಡಿದ್ದರು. ಶ್ರೀಮಂತ ಉದ್ಯಮಿ ಆಗಿದ್ದರೂ ತನ್ನ ಸರಳ ವ್ಯಕ್ತಿತ್ವದಿಂದಲೇ  ಗೌರವಾನ್ವಿತ ಸ್ಥಾನಮಾನವನ್ನು ಹೊಂದಿದ್ದರು.

ಟಾಟಾ ಅವರು ಮುಟ್ಟದೆ ಇರುವ ಉದ್ಯಮ ಕ್ಷೇತ್ರಗಳಿಲ್ಲ. ವಿಮಾನ ಉದ್ಯಮ, ಆಟೋಮೋಟಿವ್, ಪವರ್, ಸ್ಟೀಲ್, ಹೋಟೆಲ್‌ಗಳು, ಐಟಿ, ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ರತನ್‌ ಟಾಟಾ ಯಶಸ್ಸಿನ ಉತ್ತುಂಗಕ್ಕೇರಿದ್ದರು.

ದೊಡ್ಡ ದೊಡ್ಡ ಉದ್ಯಮದಲ್ಲಿ ಸೋಲಿಲ್ಲದ ಸರದಾರನಾಗಿ ಬೆಳೆದ ಟಾಟಾ ಅವರು ಸಿನಿಮಾರಂಗದಲ್ಲಿ ಮಾತ್ರ ಸೋಲು ಕಂಡಿದ್ದರು.

ಹೌದು ರತನ್‌ ಟಾಟಾ ಸಿನಿಮಾವಲಯದಲ್ಲೂ ಬಂಡವಾಳ ಸುರಿದಿದ್ದರು. ಆದರೆ ಅಲ್ಲಿ ಅವರು ಯಶಸ್ಸು ಸಾಧಿಸಿಲ್ಲ.

ಆ ಸಿನಿಮಾಕ್ಕೆ ನಿರ್ಮಾಪಕರಾಗಿದ್ದ ಟಾಟಾ..: ರತನ್‌ ಅವರು ಬಾಲಿವುಡ್‌ನ ಒಂದು ಸಿನಿಮಾಕ್ಕೆ ಬಂಡವಾಳ ಹಾಕಿದ್ದರು. ಆದರೆ ಆ ಸಿನಿಮಾ ಹೀನಾಯವಾಗಿ ಸೋಲು ಕಂಡ ಬಳಿಕ ಮತ್ತೆಂದೂ ಅವರು ಸಿನಿಮಾರಂಗದತ್ತ ಮುಖ ಮಾಡಿಲ್ಲ.

2004ರಲ್ಲಿ ಬಂದಿದ್ದ ಅಮಿತಾಭ್ ಬಚ್ಚನ್, ಬಿಪಾಶಾ ಬಾಸು ಹಾಗೂ ಜಾನ್ ಅಬ್ರಹಾಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ಏತ್ಬಾರ್’ ಎನ್ನುವ ಸಿನಿಮಾವನ್ನು ರತನ್‌ ಅವರು ಜಿತಿನ್ ಕುಮಾರ್ ಎಂಬುವವರೊಂದಿಗೆ ಸೇರಿ ನಿರ್ಮಾಣ ಮಾಡಿದ್ದರು.

ಸಿನಿಮಾ ಗಳಿಸಿದ್ದೆಷ್ಟು?:

1996ರಲ್ಲಿ ಹಾಲಿವುಡ್‌ನಲ್ಲಿ ಬಂದ ʼಫಿಯರ್ʼ ಎನ್ನುವ ಸಿನಿಮಾದಿಂದ ಪ್ರೇರಣೆ ಪಡೆದು ಈ ಸಿನಿಮಾವನ್ನು ವಿಕ್ರಮ್‌ ಭಟ್‌ ಅವರು ನಿರ್ದೇಶನ ಮಾಡಿದ್ದರು.

ಈ ಸಿನಿಮಾ ರೊಮ್ಯಾಂಟಿಕ್ ಸೈಕಾಲಜಿಕಲ್ ಥ್ರಿಲ್ಲರ್ ಕಥೆಯನ್ನು ಒಳಗೊಂಡಿತ್ತು. ಅಂದು ಸಿನಿಮಾದ ಬಜೆಟ್‌ 9.50 ಕೋಟಿ ರೂಪಾಯಿ ದಾಟಿತ್ತು. ಆದರೆ ರಿಲೀಸ್‌ ಆದ ಬಳಿಕ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಹೀನಾಯವಾಗಿ ಸೋಲು ಕಂಡಿತ್ತು. 8 ಕೋಟಿ ರೂಪಾಯಿಯನ್ನಷ್ಟೇ ಗಳಿಸಿತು.

ಬಂಡವಾಳ ಹಾಕಿದ ಮೊದಲ ಸಿನಿಮಾವೇ ಸೋಲು ಕಂಡ ಬಳಿಕ ರತನ್‌ ಟಾಟಾ ಮತ್ತೆಂದೂ ಸಿನಿಮಾ ಸಂಬಂಧಿತ ಕೆಲಸದಲ್ಲಿ ಕಾಣಿಸಿಕೊಂಡಿಲ್ಲ. ಬಹುಶಃ ಅಂದು ʼಏತ್ಬಾರ್‌ʼ ಸಿನಿಮಾ ಹಿಟ್‌ ಆಗಿದ್ದರೆ ಇಂದು ರತನ್‌ ಅವರು ಸಿನಿಮಾರಂಗದಲ್ಲೂ ಯಶಸ್ವಿ ನಿರ್ಮಾಣ ಸಂಸ್ಥೆಯನ್ನು ಹೊಂದಿರುತ್ತಿದ್ದರೇನೋ.

ಟಾಪ್ ನ್ಯೂಸ್

1-ewweqwe

San Francisco; ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರಿಗೆ ​​​​ಐಸಿಯುನಲ್ಲಿ ಚಿಕಿತ್ಸೆ

Aditya

Kaup: ಯುವ ಕ್ರಿಕೆಟಿಗ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

1-maha

Maharashtra: ಫಡ್ನವೀಸ್ ಸಂಪುಟಕ್ಕೆ 39 ಮಂದಿ ಸಚಿವರ ಸೇರ್ಪಡೆ

DVG-Duggamma

Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ

vijayendra-3

Waqf: ಅನ್ವರ್‌ ಮಾಣಿಪ್ಪಾಡಿಗೆ ಲಂಚ ನೀಡಲು ಯತ್ನ: ಆರೋಪ ತಳ್ಳಿ ಹಾಕಿದ ವಿಜಯೇಂದ್ರ

1-reeee

‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2

1-yogi

Sambhal; ಮತ್ತೆ ತೆರೆದ ದೇವಾಲಯ ಇತಿಹಾಸದ ಸತ್ಯವನ್ನು ಪ್ರತಿನಿಧಿಸುತ್ತದೆ: ಸಿಎಂ ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UI Movie: ಉಪ್ಪಿ ʼಯುಐʼ ಟ್ರೇಲರ್‌ ನೋಡಿ ಬಾಲಿವುಡ್‌ ನಟ ಆಮಿರ್‌ ಖಾನ್‌ ಶಾಕ್.!

UI Movie: ಉಪ್ಪಿ ʼಯುಐʼ ಟ್ರೇಲರ್‌ ನೋಡಿ ಬಾಲಿವುಡ್‌ ನಟ ಆಮಿರ್‌ ಖಾನ್‌ ಶಾಕ್.!

Year Ender: 10 ಗೆಲುವು.., ಒಂದಷ್ಟು ಸೋಲು..: ಇಲ್ಲಿದೆ ಬಾಲಿವುಡ್‌ ಬಾಕ್ಸಾಫೀಸ್‌ ರಿಪೋರ್ಟ್

Year Ender: 10 ಗೆಲುವು.., ಒಂದಷ್ಟು ಸೋಲು..: ಇಲ್ಲಿದೆ ಬಾಲಿವುಡ್‌ ಬಾಕ್ಸಾಫೀಸ್‌ ರಿಪೋರ್ಟ್

Mushtaq Khan: ಕಾರ್ಯಕ್ರಮಕ್ಕೆ ಆಹ್ವಾನಿಸಿ ಖ್ಯಾತ ನಟನ ಅಪಹರಣ.. 12 ಗಂಟೆ ಚಿತ್ರಹಿಂಸೆ 

Mushtaq Khan: ಕಾರ್ಯಕ್ರಮಕ್ಕೆ ಆಹ್ವಾನಿಸಿ ಖ್ಯಾತ ನಟನ ಅಪಹರಣ.. 12 ಗಂಟೆ ಚಿತ್ರಹಿಂಸೆ 

1-modi-aaaa

Kapoor’s ; ರಾಜ್ ಕಪೂರ್ ಕುಟುಂಬದಿಂದ ಪ್ರಧಾನಿ ಮೋದಿ ಭೇಟಿ: ಕರೀನಾ ಧನ್ಯವಾದ

3

Most Searched Movies‌& Shows:ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ಸಿನಿಮಾ ‍ಹಾಗೂ ಶೋಗಳಿವು

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

1-ewweqwe

San Francisco; ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರಿಗೆ ​​​​ಐಸಿಯುನಲ್ಲಿ ಚಿಕಿತ್ಸೆ

Aditya

Kaup: ಯುವ ಕ್ರಿಕೆಟಿಗ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

1-maha

Maharashtra: ಫಡ್ನವೀಸ್ ಸಂಪುಟಕ್ಕೆ 39 ಮಂದಿ ಸಚಿವರ ಸೇರ್ಪಡೆ

5

Udupi: ಹಿರಿಯ ಮಾತೆ ಭಾಗ್ಯ ಸತ್ಯನಾರಾಯಣ್‌ಗೆ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ ಪ್ರದಾನ

DVG-Duggamma

Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.