ಕೋವಿಡ್ ಬಳಿಕ ಬಿಟೌನ್ ಬಾಕ್ಸ್ ಆಫೀಸ್‌ನಲ್ಲಿ ಮೋಡಿ ಮಾಡಿದ ರೊಮ್ಯಾಂಟಿಕ್ ಸಿನಿಮಾಗಳು
Team Udayavani, Aug 5, 2023, 4:10 PM IST
ಮುಂಬಯಿ: ಬಾಲಿವುಡ್ ಮತ್ತೆ ವಿನ್ನಿಂಗ್ ಟ್ರ್ಯಾಕ್ ಗೆ ಮರಳಿದೆ. ಬಿಟೌನ್ ನಲ್ಲಿ ತೆರೆಗೆ ಬಂದ ಕಳೆದ ಕೆಲ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಾಣುವುದರ ಜೊತೆಗೆ ಪ್ರೇಕ್ಷಕರನ್ನೂ ರಂಜಿಸಿದೆ.
2022 ರಲ್ಲಿ ಕಂಡ ಯಶಸ್ಸು, ಈ ವರ್ಷ ದುಪ್ಟಟ್ಟಾಗಿದೆ. ಈ ವರ್ಷ ಬಂದ ʼಪಠಾಣ್ʼ ಸಿನಿಮಾ ಆ್ಯಕ್ಷನ್ ಜಾನರ್ ನಲ್ಲಿ ದೊಡ್ಡ ಹಿಟ್ ಆಗಿತ್ತು. ಆ ಬಳಿಕ ಬಂದ ಸಿನಿಮಾಗಳೂ ಬಾಕ್ಸ್ ಆಫೀಸ್ ನಲ್ಲಿ ಲಾಸ್ ಆಗದ ಬ್ಯುಸಿನೆಸ್ ಮಾಡಿದೆ. ಈ ಎಲ್ಲಾ ಸಿನಿಮಾಗಳು ರೊಮ್ಯಾಂಟಿಕ್ ಜಾನರ್ , ರೊಮ್ಯಾಂಟಿಕ್ ಕಾಮಿಡಿ ಅಥವಾ ಫ್ಯಾಮಿಲಿ ಡ್ರಾಮಾ ಸಿನಿಮಾಗಳೆನ್ನುವುದು ವಿಶೇಷ.
ಇದಕ್ಕೆ ಇತ್ತೀಚೆಗಿನ ಹೊಸ ಉದಾಹರಣೆ ಎಂದರೆ ಕರಣ್ ಜೋಹರ್ ಅವರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’. ಸಿನಿಮಾ ರಿಲೀಸ್ ಆದ 8 ದಿನದಲ್ಲಿ ಬಾಕ್ಸ್ ಆಫೀಸ್ ನಲ್ಲಿ 76.75 ಕೋಟಿ ರೂಪಾಯಿಯ ಗಳಿಕೆ ಕಂಡಿದೆ. ಒಂದು ಲೆಕ್ಕಚಾರದ ಪ್ರಕಾರ ಸಿನಿಮಾಕ್ಕೆ ಎದುರಾಳಿಯಾಗಿ ಯಾವ ಸಿನಿಮಾದ ಪೈಪೋಟಿ ನೀಡದೇ ಇದರುವುದರಿಂದ ಮುಂದಿನ ವಾರದ ಅಂತ್ಯಕ್ಕೆ ʼ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ 100 ಕೋಟಿ ಕ್ಲಬ್ ದಾಟುವ ಸಾಧ್ಯತೆಯಿದೆ.
130 -135 ಕೋಟಿಯವರೆಗೂ ಸಿನಿಮಾ ಕಮಾಯಿ ಮಾಡಬಹುದು ಎನ್ನಲಾಗುತ್ತಿದೆ. ಮತ್ತೊಂದು ವಿಶೇಷ ಕಳೆದ ಕೆಲ ಸಮಯದಿಂದ ಬಾಲಿವುಡ್ ನಲ್ಲಿ ಬಂದ ರೊಮ್ಯಾಂಟಿಕ್ ಕಥಾಹಂದರದ ಸಿನಿಮಾದಗಳ ಪೈಕಿ ʼ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಪ್ರೇಮ್ ಕಹಾನಿ 5ನೇ ಸಕ್ಸಸ್ ಸಿನಿಮವಾಗಿದೆ.
ಕೋವಿಡ್ ಬಳಿಕ ಹಿಟ್ ಸಾಲಿಗೆ ಸೇರಿದ ರೊಮ್ಯಾಂಟಿಕ್ ಸಿನಿಮಾಗಳು:
ಬಿಟೌನ್ ಸಿನಿಮಾಗಳಲ್ಲಿ ಗಮನಿಸಬೇಕಾದ ಇನ್ನೊಂದು ವಿಶೇಷ ಅಂಶವೆಂದರೆ. ಕೋವಿಡ್ ಬಳಿಕ ಅಂದರೆ ʼಜುಗ್ ಜುಗ್ ಜೀಯೋʼ ದಿಂದ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼವರೆಗಿನ ರೊಮ್ಯಾಂಟಿಕ್ ಕಥಾವುಳ್ಳ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಿದೆ. ಯೂತ್ ಮೆಚ್ಚುವ ರೊಮ್ಯಾಂಟಿಕ್ ಕಥಾ ಪ್ರಯೋಗಗಳು ಬಾಲಿವುಡ್ ನಲ್ಲಿ ಈ ವರ್ಷ ವರ್ಕೌಟ್ ಆಗಿದೆ.
ಜುಗ್ ಜುಗ್ ಜೀಯೋ: – 79 ಕೋಟಿ ರೂ.
ತು ಜೂಟಿ ಮೇ ಮಕ್ಕರ್: – 130 ಕೋಟಿ ರೂ.
ಜರಾ ಹಟ್ಕೆ ಜರಾ ಬಚ್ಕೆ: – 83 ಕೋಟಿ ರೂ.
ಸತ್ಯಪ್ರೇಮ್ ಕಿ ಕಥಾ: – 75 ಕೋಟಿ ರೂ.
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ: – (130 ಕೋಟಿ ಗಳಿಸುವ ಪ್ಲಸ್ ನಿರೀಕ್ಷೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.