
ಗಾಲ್ವಾನ್ ಕುರಿತು ಟ್ವೀಟ್ ; ವ್ಯಾಪಕ ಆಕ್ರೋಶದ ಬೆನ್ನಲ್ಲೇ ಕ್ಷಮೆ ಕೇಳಿದ ನಟಿ
'ದೇಶದ್ರೋಹದ ಟ್ವೀಟ್' ನಟಿಯನ್ನು ಬಂಧಿಸಲು ಒತ್ತಾಯ
Team Udayavani, Nov 24, 2022, 2:55 PM IST

ಮುಂಬಯಿ: ಗಾಲ್ವಾನ್ ಕುರಿತು ಬಾಲಿವುಡ್ ನಟಿ ರಿಚಾ ಚಡ್ಡಾ ಅವರ ಪ್ರತಿಕ್ರಿಯೆ ಗಾಗಿ ಸಾಮಾಜಿಕ ತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ, ಬೆನ್ನಲ್ಲೇ ಆಕೆ ಸೈನಿಕರು ಮತ್ತು ದೇಶದ ಕ್ಷಮೆ ಯಾಚಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರ ಟ್ವೀಟ್ ಗೆ, ರಿಚಾ ಬುಧವಾರ ಪ್ರತಿಕ್ರಿಯಿಸಿ, “ಗಾಲ್ವಾನ್ ಹಾಯ್ ಹೇಳುತ್ತಿದೆ” ಎಂದು ಬರೆದುಕೊಂಡು ಪೋಸ್ಟ್ ಅನ್ನು ಹಂಚಿಕೊಂಡಿದ್ದರು.ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
“ಇದು ಎಂದಿಗೂ ನನ್ನ ಉದ್ದೇಶವಾಗಿರದಿದ್ದರೂ, ವಿವಾದಕ್ಕೆ ಕಾರಣವಾಗುತ್ತಿರುವ 3 ಪದಗಳಿಂದ ಯಾರಿಗಾದರೂ ಮನನೊಂದಿದ್ದರೆ ಅಥವಾ ನೋಯಿಸಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ. ಉದ್ದೇಶಪೂರ್ವಕವಾಗಿ ನನ್ನ ಮಾತುಗಳು ಈ ಭಾವನೆಯನ್ನು ಪ್ರಚೋದಿಸಿದರೆ ಅದು ನನಗೆ ದುಃಖವನ್ನು ತರುತ್ತದೆ. ಸೇನೆಯಲ್ಲಿ ನನ್ನ ಸಹೋದರರು, ಅದರಲ್ಲಿ ನನ್ನ ಸ್ವಂತ ಅಜ್ಜ ಪ್ರಮುಖ ಪಾತ್ರ ವಹಿಸಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಆಗಿ, ಅವರು 1960 ರ ದಶಕದಲ್ಲಿ ಇಂಡೋ-ಚೀನಾ ಸಮರದಲ್ಲಿ ಕಾಲಿಗೆ ಬುಲೆಟ್ ತಾಗಿಸಿಕೊಂಡಿದ್ದರು. ನನ್ನ ಮಾಮಾಜಿ ಪ್ಯಾರಾಟ್ರೂಪರ್ ಆಗಿದ್ದರು. ಅದು ನನ್ನ ರಕ್ತದಲ್ಲಿದೆ”ಎಂದು ಟ್ವೀಟ್ ಮಾಡಿದ್ದಾರೆ.
“ಹವಾನಿಯಂತ್ರಣ ಕೊಠಡಿಯಲ್ಲಿ ಕುಳಿತು, ಈ ಮನಸ್ಥಿತಿಯನ್ನು ಹೊಂದಿರುವ ಈ ನಟಿ ಸೈನಿಕರ ಸಮರ್ಪಣೆಯನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ. ಅವರು ಇಡೀ ರಾಷ್ಟ್ರ ಮತ್ತು ನಮ್ಮ ದೇಶದ ಸೈನಿಕರಲ್ಲಿ ಕ್ಷಮೆಯಾಚಿಸಬೇಕೆಂದು ಹಲವಾರು ಮಂದಿ ಕಿಡಿ ಕಾರಿದ್ದರು.
ಟ್ವೀಟ್ ಮಾಡಿದ ತಕ್ಷಣ, ಸಾಮಾಜಿಕ ಮಾಧ್ಯಮದಲ್ಲಿ ಭಾರತ ಮತ್ತು ಚೀನಾ ನಡುವಿನ 2020 ಘರ್ಷಣೆಯ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಸೇನೆಯನ್ನು ಅವಮಾನಿಸಿದ ಆರೋಪದ ಮೇಲೆ ನಟಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದರು.
ಏತನ್ಮಧ್ಯೆ, ರಕ್ಷಣಾ ಸಚಿವರ ಹಿಂದಿನ ಭಾಷಣವನ್ನು ಉಲ್ಲೇಖಿಸಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರ ಹೇಳಿಕೆಯನ್ನು ಅವರು ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯುವ ಸಂಕಲ್ಪವನ್ನು ಪುನರುಚ್ಚರಿಸಿದ್ದರು, ಎಲ್ಲಾ ನಿರಾಶ್ರಿತರು ತಮ್ಮ ಭೂಮಿ ಮತ್ತು ಮನೆಗಳನ್ನು ಮರಳಿ ಪಡೆಯುತ್ತಾರೆ ಎಂದು ಹೇಳಿದ್ದಾರೆ.
ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, “ಭಾರತೀಯ ಸೇನೆಗೆ ಸಂಬಂಧಿಸಿದಂತೆ, ಭಾರತ ಸರ್ಕಾರ ನೀಡುವ ಯಾವುದೇ ಆದೇಶವನ್ನು ಅದು ನಿರ್ವಹಿಸುತ್ತದೆ. ಅಂತಹ ಆದೇಶಗಳನ್ನು ನೀಡಿದಾಗ, ನಾವು ಯಾವಾಗಲೂ ಅದಕ್ಕೆ ಸಿದ್ಧರಾಗಿರುತ್ತೇವೆ ಎಂದು ಹೇಳಿದ್ದರು.
2020 ರ ಗಾಲ್ವಾನ್ ಹೋರಾಟದಲ್ಲಿ ಹಲವಾರು ಭಾರತೀಯ ಸೇನಾ ಯೋಧರು ಹುತಾತ್ಮರಾಗಿದ್ದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?

Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ

Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ

Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.