ವಂಶಾಡಳಿತ : ರಾಹುಲ್ ಗಾಂಧಿ ಹೇಳಿಕೆಗೆ ರಿಷಿ ಕಪೂರ್ ತರಾಟೆ
Team Udayavani, Sep 13, 2017, 3:27 PM IST
ಮುಂಬಯಿ : ”ಭಾರತದಲ್ಲಿ ರಾಜಕೀಯ ರಂಗದಿಂದ ಹಿಡಿದು ಸಿನೇಮಾದಿಂದ ಉದ್ಯಮ ರಂಗದ ವರೆಗೂ ವಂಶಾಡಳಿತ ಸರ್ವಸಾಮಾನ್ಯ ಸಂಗತಿ; ಆದುದರಿಂದ ವಂಶಾಡಳಿತದ ವಿಷಯದಲ್ಲಿ ಯಾರೂ ನನ್ನನ್ನು ದೂರುವ ಅಗತ್ಯವಿಲ್ಲ” ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಮೆರಿಕದ ಬರ್‌ಕ್ಲೇ ಯಲ್ಲಿನ ಕ್ಯಾಲಿಫೋರ್ನಿಯ ವಿವಿಯಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಸಂವಾದ ಕಾರ್ಯಕ್ರಮದಲ್ಲಿ ಹೇಳಿರುವುದಕ್ಕೆ ಬಾಲಿವುಡ್‌ನ ಹಿರಿಯ ನಟ ರಿಶಿ ಕಪೂರ್, ರಾಹುಲ್ ಅವರನ್ನು ಟ್ವೀಟರ್‌ನಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಿತಾಮಹಾ ಪ್ರಥ್ವೀರಾಜ್ ಕಪೂರ್ ಅವರದ್ದು ಬಾಲಿವುಡ್‌ನ ಪ್ರಥಮ ಕುಟುಂಬವೆಂದು ಪರಿಗಣಿತವಾಗಿದ್ದು ರಿಷಿ ಕಪೂರ್ ಅವರು ಈ ಕುಟುಂಬದ ಮೂರನೇ ತಲೆಮಾರಿನವರಾಗಿದ್ದಾರೆ. ಬಾಲಿವುಡ್‌ನಲ್ಲೀಗ ಕಪೂರ್ ಕುಟುಂಬದ ನಾಲ್ಕನೇ ತಲೆಮಾರಿನವರು ಮಿಂಚುತ್ತಿದ್ದಾರೆ.
ರಿಷಿ ಕಪೂರ್ ಅವರು ಟ್ವಿಟರ್‌ನಲ್ಲಿ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ರೀತಿ ಹೀಗಿದೆ :
ರಾಹುಲ್ ಗಾಂಧಿಯವರೇ, 106 ವರ್ಷಗಳ ಸುದೀರ್ಘ ಇತಿಹಾಸದ ಭಾರತೀಯ ಚಿತ್ರರಂಗಕ್ಕೆ ಕಪೂರ್ ಕುಟುಂಬದವರಿಂದ 90 ವರ್ಷಗಳ ಕೊಡುಗೆ ಇದೆ. ದೇವರ ದಯೆಯಿಂದ ನಾವೀಗ ಕಪೂರ್ ಕುಟುಂಬದ ನಾಲ್ಕನೇ ತಲೆಮಾರನ್ನು ಕಾಣುತ್ತಿದ್ದೇವೆ – ಪ್ರಥ್ವೀರಾಜ್ ಕಪೂರ್, ರಾಜ್ ಕಪೂರ್, ರಣದೀರ್ ಕಪೂರ್, ರಣಬೀರ್ ಕಪೂರ್. ನೀವು ಕಠಿನ ಪರಿಶ್ರಮದಿಂದ ಜನರ ಪ್ರೀತಿ, ವಿಶ್ವಾಸವನ್ನು ಗೆಲ್ಲಬೇಕೇ ಹೊರತು ವಂಶಪಾರಂಪರ್ಯತೆಯಿಂದ ಅಲ್ಲ; ಜಬರ್‌ದಸ್ತಿ, ಗೂಂಡಾಗರ್ದಿಯಿಂದಲೂ ಅಲ್ಲ’.
Rahul Gandhi.In the 106 years of Indian cinema of India, Kapoor’s contribution is 90 years. And each generation is chosen by public on merit
— Rishi Kapoor (@chintskap) September 12, 2017
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.