“ಚಾಕೋಲೇಟ್ ಬಾಯ್”: ನಟ ರಿಷಿ ಕಪೂರ್ ನಟನೆಯ ನೋಡಲೇಬೇಕಾದ ಟಾಪ್ 10 ಸಿನಿಮಾ

ರಿಷಿ ಕಪೂರ್ ಹಿಂದೆ ಬಂಡೆಯಂತೆ ನಿಂತು ಪೋಷಿಸಿದವರು ಪತ್ನಿ ನೀತೂ ಕಪೂರ್

Team Udayavani, Apr 30, 2020, 12:36 PM IST

ಚಾಕೋಲೇಟ್ ಬಾಯ್”: ನಟ ರಿಷಿ ಕಪೂರ್ ನಟನೆಯ ನೋಡಲೇಬೇಕಾದ ಟಾಪ್ 10 ಸಿನಿಮಾ

ಮುಂಬೈ:ಬಾಲಿವುಡ್ ಹಿರಿಯ ನಟ, ಹಿಂದಿ ಸಿನಿಮಾರಂಗದ ಚಾಕೋಲೇಟ್ ಬಾಯ್ “ರಿಷಿ ಕಪೂರ್” ಗುರುವಾರ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಬಾಲಿವುಡ್ ಗೆ ಸತತ ಆಘಾತದ ವಾರವಾಗಿ ಪರಿಣಮಿಸಿದೆ. ನಿನ್ನೆಯಷ್ಟೇ ಇರ್ಫಾನ್ ಖಾನ್ ಇಹಲೋಕ ತ್ಯಜಿಸಿದ ಬೆನ್ನಿಗೆ ಇಂದು ರಿಷಿ ಕಪೂರ್ ಕೂಡಾ ನಿಧನರಾಗಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ರಿಷಿ ಕಪೂರ್ ಪತ್ನಿ ನೀತೂ ಕಪೂರ್ ಮತ್ತು ಮಕ್ಕಳಾದ ರಿಧೀಮಾ ಕಪೂರ್ ಸಾಹ್ನಿ ಮತ್ತು ರಣಬೀರ್ ಕಪೂರ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ರಿಷಿ ಕಪೂರ್ ಹಿಂದೆ ಬಂಡೆಯಂತೆ ನಿಂತು ಪೋಷಿಸಿದವರು ಪತ್ನಿ ನೀತೂ ಕಪೂರ್. ಯಾವಾಗಲೂ ತಮ್ಮ ಭಾವನೆಗಳಿಗೆ ಟ್ವೀಟರ್ ಮೂಲಕ ಕಪೂರ್ ಧ್ವನಿಯಾಗುತ್ತಿದ್ದರು. ಆದರೆ ನಂತರ ಅನಾರೋಗ್ಯದ ಹಿನ್ನೆಲೆಯಲ್ಲಿ ಟ್ವೀಟರ್ ನಿಂದ ದೂರ ಸರಿದಿದ್ದರು.

ಬಾಲಿವುಡ್ ನಲ್ಲಿ ರಿಷಿ ಕಪೂರ್ ಅವರ ನಾಲ್ಕು ದಶಕಗಳ ಸಿನಿ ಪಯಣದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು. ಇವೆಲ್ಲದರ ನಡುವೆಯೂ ರಿಷಿ ಕಪೂರ್ ಅವರು ನಟಿಸಿದ ಹತ್ತು ನೋಡಲೇ ಬೇಕಾದ ಸಿನಿಮಾಗಳ ಪಟ್ಟಿ ಇಲ್ಲಿದೆ.

ಬಾಬ್ಬಿ 1973:
ತಂದೆ, ಬಾಲಿವುಡ್ ದಂತಕತೆಯಾಗಿದ್ದ ರಾಜ್ ಕಪೂರ್ ನಿರ್ಮಾಣ ಹಾಗೂ ನಿರ್ದೇಶನದ ಪ್ರೇಮ ಕಥೆ ಹೊಂದಿದ್ದ ಬಾಬ್ಬಿ ಸಿನಿಮಾದಲ್ಲಿ ರಿಷಿ ಕಪೂರ್ ಬಣ್ಣ ಹಚ್ಚುವ ಮೂಲಕ ಸಿನಿ ಜೀವನಕ್ಕೆ ಕಾಲಿಟ್ಟಿದ್ದರು. ಈ ಸಿನಿಮಾದ ಕಥೆ ಬರೆದವರು ಖ್ವಾಜಾ ಅಹ್ಮದ್ ಅಬ್ಬಾಸ್. ಬಾಬ್ಬಿ ಸಿನಿಮಾದದಲ್ಲಿ ರಿಷಿ ಹೀರೋ ಆಗಿದ್ದು, ಡಿಂಪಲ್ ಕಪಾಡಿಯಾ ಹೀರೋಯಿನ್.

Khel Khel Mein,1975
ಖೇಲ್, ಖೇಲ್ ಮೈನ್ ಸಿನಿಮಾವನ್ನು ನಿರ್ದೇಶಿಸಿದವರು ರವಿ ಟಂಡನ್. 1975ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ರಿಷಿ ಕಪೂರ್ ಹೀರೋ, ನೀತು ಸಿಂ್ ಮತ್ತು ರಾಕೇಶ್ ರೋಷನ್(ಹೃತಿಕ್ ರೋಷನ್ ತಂದೆ) ಕಾಲೇಜು ವಿದ್ಯಾರ್ಥಿಗಳ ಪಾತ್ರದಲ್ಲಿ ನಟಿಸಿದ್ದರು. ಖೇಲ್, ಖೇಲ್ ಮೈನ್ ಸಿನಿಮಾ ಆ ಕಾಲದಲ್ಲಿ ಸೂಪರ್ ಹಿಟ್ ಸಿನಿಮಾ ಆಗಿತ್ತು.

Karz, 1980
ಬಾಲಿವುಡ್ ಶೋಮ್ಯಾನ್ ಸುಭಾಶ್ ಘಾಯ್ 1980ರಲ್ಲಿ ನಿರ್ದೇಶಿಸಿದ್ದ ಮ್ಯೂಸಿಕಲ್ ಥ್ರಿಲ್ಲರ್ ಕರ್ಜ್ ಸಿನಿಮಾ ಅಂದು ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಸಂಗೀತವನ್ನು ಸಿನಿ ಪ್ರಿಯರು ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ರಿಷಿ ಕಪೂರ್, ಟೀನಾ ಮುನಿಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅಲ್ಲದೇ ಸಿಮಿ ಗಾರೆವಾಲ್ ಅವರ ಪ್ರಧಾನ ಪಾತ್ರ ಸಿನಿ ಪ್ರೇಕ್ಷಕರ ಸ್ಮೃತಿ ಪಟಲದಲ್ಲಿ ಇಂದಿಗೂ ಅಚ್ಚಾಗಿ ಉಳಿದಿದೆ.

Kabhi Kabhi, 1976
ಬಾಲಿವುಡ್ ನಲ್ಲಿ ರೋಮ್ಯಾಂಟಿಕ್ ಸಿನಿಮಾದ ಮಾಸ್ಟರ್ ಸ್ಟೋರಿ ಟೆಲ್ಲರ್ ಎಂದೇ ಹೆಸರಾಗಿದ್ದ ಯಶ್ ಚೋಪ್ರಾ ನಿರ್ದೇಶನದ “ಕಭೀ ಕಭೀ” ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ರಾಖೀ, ರಿಷಿ ಕಪೂರ್, ವಹೀದಾ ರೆಹಮಾನ್, ಶಶಿ ಕಪೂರ್ ಮತ್ತು ನೀತು ಸಿಂಗ್ ಒಟ್ಟಾಗಿ ಬಿಗ್ ಸ್ಕ್ರೀನ್ ನಲ್ಲಿ ನಟಿಸಿದ್ದರು.

Laila Majnu, 1976
ಮೂಲ ಕ್ಲಾಸಿಕ್ ಲೈವ್ ಸ್ಟೋರಿ ಕಥೆಯ “ಲೈಲಾ ಮತ್ತು ಮಜ್ನು ಸಿನಿಮಾವನ್ನು 70ರ ದಶಕದಲ್ಲಿ ಜನರು ಸಾಲು, ಸಾಲಾಗಿ ನಿಂತು ಸಿನಿಮಾ ಥಿಯೇಟರಿಗೆ ಆಗಮಿಸಿ ವೀಕ್ಷಿಸಿದ್ದರಂತೆ. ಹರ್ನಾಮ್ ಸಿಂಗ್ ರಾವೈಲ್ ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ರಿಷಿ ಕಪೂರ್, ರಂಜಿತಾ, ಡ್ಯಾನಿ ಡೆಂನ್ ಝೋಗಪಾ, ಅರುಣ್ ಇರಾನಿ, ಅಸ್ರಾನಿ, ಇಫ್ತೆಖಾರ್, ಟೋಮ್ ಅಲ್ಟೆರ್ ಮತ್ತು ರಂಜಿತ್ ಮುಖ್ಯಭೂಮಿಕೆಯಲ್ಲಿದ್ದರು. ಮದನ್ ಮೋಹನ್ ಮತ್ತು ಜೈದೇವ್ ಈ ಸಿನಿಮಾದ ಸಂಗೀತ ಸಂಯೋಜಿಸಿದ್ದರು.

Amar Akbar Anthony, 1977
ಅಮಿತಾಬ್ ಬಚ್ಚನ್, ರಿಷಿ ಕಪೂರ್ ಮತ್ತು ವಿನೋದ್ ಖನ್ನಾ ಎಂಬ ಮೂವರು ಸೂಪರ್ ಸ್ಟಾರ್ ಗಳು ಒಟ್ಟಾಗಿ ನಟಿಸಿದ್ದ ಸಿನಿಮಾ ಅಮರ್ ಅಕ್ಬರ್ ಅಂತೋನಿ. ಅಷ್ಟೇ ಅಲ್ಲ ಆ ಕಾಲದ ಅತ್ಯುತ್ತಮ ಹಾಸ್ಯ ಪ್ರಧಾನ ಮತ್ತು ಸಾಹಸಮಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಸಿನಿಮಾವನ್ನು ಮನಮೋಹನ್ ದೇಸಾಯಿ ನಿರ್ದೇಶಿಸಿದ್ದು, ಖಾದರ್ ಖಾನ್ ಚಿತ್ರಕಥೆ ಬರೆದಿದ್ದರು. ಈ ಸಿನಿಮಾದಲ್ಲಿ ಶಬಾನಾ ಅಜ್ಮಿ, ನೀತು ಸಿಂಗ್, ಪರ್ವೀನ್ ಬಾಬಿ, ನಿರೂಪಾ ರಾಯ್, ಪ್ರಾಣ್, ಜೀವನ್, ನಜೀರ್ ಹುಸೈನ್, ರಂಜಿತ್ ಮತ್ತು ಹೆಲೆನ್ ಹೀಗೆ ಘಟಾನುಘಟಿ ನಟ, ನಟಿಯರು ನಟಿಸಿದ್ದರು.

Prem Rog, 1982
ರಾಜ್ ಕಪೂರ್ ನಿರ್ಮಾಣ, ನಿರ್ದೇಶನದ ಪ್ರೇಮ್ ರೋಗ್ ಸಿನಿಮಾದಲ್ಲಿ ರಿಷಿ ಕಪೂರ್ ಮತ್ತು ಯುವ ನಟಿ ಪದ್ಮಿನಿ ಕೊಲ್ಹಾಪುರೆ ಮುಖ್ಯ ಭೂಮಿಕೆಯಲ್ಲಿದ್ದರು. ಸಾಮಾಜಿಕ ಬದಲಾವಣೆಯ ಮತ್ತು ಸಾಮಾಜಿಕ ಕಳಕಳಿಯ ಕಥಾ ಹಂದರದೊಂದಿಗೆ ರಾಜ್ ಕಪೂರ್ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಸಾಮಾನ್ಯ ಕುಟುಂಬದ ಯುವಕನೊಬ್ಬ ಶ್ರೀಮಂತ ವಿಧವೆಯನ್ನು ಪ್ರೀತಿಸುವ ಕಥೆ ಇದಾಗಿದೆ. ಪ್ರೇಮ್ ರೋಗ್ ಸಿನಿಮಾ ಕಾಸ್ಮೋಪಾಲಿಟಿಯನ್ ಮ್ಯಾಗಜೀನ್ ನಲ್ಲಿ ಟಾಪ್ ಟೆನ್ ರೋಮ್ಯಾಂಟಿಕ್ ಸಿನಿಮಾಗಳಲ್ಲಿ ಒಂದು ಎಂಬುದಾಗಿ ಪರಿಗಣಿಸಲ್ಪಟ್ಟಿತ್ತು.

Nagina,1986
1986ರಲ್ಲಿ ಹರ್ಮೇಶ್ ಮಲ್ಹೋತ್ರಾ ನಿರ್ದೇಶನದ ಕಾಲ್ಪನಿಕ ಕಥಾ ಹಂದರದ “ನಾಗಿನ್” ಸಿನಿಮಾದಲ್ಲಿ ರಿಷಿ ಕಪೂರ್, ಶ್ರೀದೇವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನಾಗ ಮತ್ತು ನಾಗಿಣಿಯ ಕಥೆಯಾಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿತ್ತು. ನಾಗಿನ್ ಸಿನಿಮಾದಲ್ಲಿ ಕೋಮಲ್ ಮಹುವಾಕರ್, ಅಮರೀಶ್ ಪುರಿ, ಪ್ರೇಮ್ ಚೋಪ್ರಾ ಮುಖ್ಯಭೂಮಿಕೆಯಲ್ಲಿದ್ದರು. ಸಿನಿಮಾ ಕಥೆ ಜಗ್ ಮೋಹನ್ ಕಪೂರ್ ಅವರದ್ದು.

Agneepath, 2012
ಕರಣ್ ಮಲ್ಹೋತ್ರಾ ನಿರ್ದೇಶನದ ಅಗ್ನಿಪತ್ ಸಿನಿಮಾದಲ್ಲಿ ರಿಷಿ ಕಪೂರ್ ರೌಫ್ ಲಾಲಾನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಹೃತೀಕ್ ರೋಷನ್ ಲೀಡ್ ರೋಲ್ ನಲ್ಲಿ ಪಾತ್ರ ನಿರ್ವಹಿಸಿದ್ದರು. ಆದರೆ ಅಗ್ನಿಪತ್ ಸಿನಿಮಾದಲ್ಲಿ ಕಪೂರ್ ಅವರ ಖಡಕ್ ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಅಭಿನಯಿಸಿದ್ದನ್ನು ವೀಕ್ಷಿಸಿ ಕಪೂರ್ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದರು. ಯಾಕೆಂದರೆ ಸೌಮ್ಯ ಸ್ವಭಾವದ ನಟನೆಯಲ್ಲಿ ಜನಪ್ರಿಯತೆ ಪಡೆದಿದ್ದ ರಿಷಿ ಕಪೂರ್ ಈ ಪಾತ್ರವನ್ನು ಯಾವತ್ತೂ ಊಹಿಸಿಯೇ ಇರಲಿಲ್ಲವಾಗಿತ್ತು. ಮಾಂಸ ವ್ಯಾಪಾರಿ ಹಾಗೂ ಅದೇ ಸಮಯದಲ್ಲಿ ಡ್ರಗ್ಸ್ ಮತ್ತು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಡಾನ್ ಪಾತ್ರ ರಿಷಿ ಕಪೂರ್ ಅವರದ್ದು!

Kapoor & Sons, 2016
ಕರಣ್ ಜೋಹರ್ ನಿರ್ಮಾಣದ, ಶಕುನ್ ಬಾತ್ರಾ ನಿರ್ದೇಶನದ ಕಪೂರ್ ಆ್ಯಂಡ್ ಸನ್ಸ್ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ, ಫಾವದ್ ಖಾನ್ , ಅಲಿಯಾ ಭಟ್ ನಟಿಸಿದ್ದರು, ಪ್ರಮುಖ ಪಾತ್ರದಲ್ಲಿ ರಿಷಿ ಕಪೂರ್, ರತ್ನಾ ಪಾಠಕ್, ರಜತ್ ಕಪೂರ್ ಅದ್ಭುತ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿನ ರಿಷಿ ಕಪೂರ್ ಅಭಿನಯ ಸಿನಿ ಪ್ರೇಕ್ಷಕರಲ್ಲಿ ರಿಷಿ ಅವರನ್ನು ಮತ್ತೆ, ಮತ್ತೆ ನೆನಪನ್ನು ಮರುಕಳಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಟಾಪ್ ನ್ಯೂಸ್

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rupali

Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?

CELEBRITIES: ಶಾರುಖ್‌ ಟು ಸಲ್ಮಾನ್;‌ ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು

CELEBRITIES: ಶಾರುಖ್‌ ಟು ಸಲ್ಮಾನ್;‌ ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು

Bollywood: ವರುಣ್‌ ಧವನ್ ʼಬೇಬಿ ಜಾನ್‌ʼ ಟೀಸರ್‌ ನೋಡಿ ʼಜವಾನ್‌ʼ ಕಾಪಿ ಎಂದ ನೆಟ್ಟಿಗರು

Bollywood: ವರುಣ್‌ ಧವನ್ ʼಬೇಬಿ ಜಾನ್‌ʼ ಟೀಸರ್‌ ನೋಡಿ ʼಜವಾನ್‌ʼ ಕಾಪಿ ಎಂದ ನೆಟ್ಟಿಗರು

1-ree

Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್‌’

aishwarya rai b

Aishwarya Rai Bachchan ಬರ್ತ್‌ಡೇಗೆ ಶುಭಕೋರದ ಪತಿ, ಮಾವ: ನೆಟ್ಟಿಗರು ಕೆಂಡ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.