1 ಬಿಲಿಯನ್ ವೀಕ್ಷಣೆ ಪಡೆದು ಹೊಸ ದಾಖಲೆ ಸೃಷ್ಟಿಸಿದ “ರೌಡಿ ಬೇಬಿ”
Team Udayavani, Nov 17, 2020, 7:05 PM IST
ಚೆನ್ನೈ : ತಮಿಳು ನಟ ಧನುಶ್ ಹಾಗೂ ಕ್ಯೂಟ್ ಲುಕ್ ನಟಿ ಸಾಯಿ ಪಲ್ಲವಿ ನಟನೆಯ ಮಾರಿ – 2 ಚಿತ್ರದ ‘ರೌಡಿ ಬೇಬಿ’ ಹಾಡು 1 ಬಿಲಿಯನ್ ವೀಕ್ಷಣೆ ಪಡೆದು ಹೊಸ ದಾಖಲೆ ಸೃಷ್ಟಿಸಿದೆ.
2018 ರ ಡಿಸೆಂಬರ್ 21 ರಂದು ಬಿಡುಗಡೆಗೊಂಡಿದ್ದ ಮಾರಿ -2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೇಳಿಕೊಂಡಷ್ಟು ಸದ್ದು ಮಾಡಿಲ್ಲದಿದ್ರು, ಚಿತ್ರದ ಹಾಡೊಂದು ಸಿಕ್ಕಾಪಟ್ಟೆ ಸೌಂಡ್ ಮಾಡಿ ಹಲವು ದಾಖಲೆಗಳನ್ನು ಬ್ರೇಕ್ ಮಾಡಿದೆ. ಚಿತ್ರದ ರೌಡಿ ಬೇಬಿ’ ಎನ್ನುವ ಹಾಡು ಯೂಟ್ಯೂಬ್ ನಲ್ಲಿ 2019 ರ ಜನವರಿ 2 ರಂದು ಬಿಡುಗಡೆಗೊಂಡ, ಕೆಲವೇ ದಿನಗಳಲ್ಲಿ ಸೂಪರ್ ಹಿಟ್ ಆಗಿತ್ತು. ಸದ್ಯ ‘ರೌಡಿ ಬೇಬಿ’ ಹಾಡು 100 ಕೋಟಿ ವೀಕ್ಷಣೆಯನ್ನು ದಾಟಿದ್ದು, ದಾಖಲೆಗಳ ಪ್ರಕಾರ ದಕ್ಷಿಣ ಭಾರತದಲ್ಲಿ ನೂರು ಕೋಟಿ ವೀಕ್ಷಣೆ ಪಡೆದ ಮೊದಲ ಹಾಡೆನ್ನುವ ಹೊಸ ದಾಖಲೆಗೆ ರೌಡಿ ಬೇಬಿ ಹಾಡು ಪಾತ್ರವಾಗಿದೆ.
ಈ ಸಂತಸವನ್ನು ನಟ ಧನುಶ್ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. “ ‘ಕೊಲವೆರಿ ಡಿ’ ಹಾಡಿಗೆ ಒಂಬತ್ತು ವರ್ಷ ತುಂಬಿದ ದಿನವೇ ರೌಡಿ ಬೇಬಿ ಹಾಡು ಒಂದು ಬಿಲಿಯನ್ ವೀಕ್ಷಣೆ ಕಂಡಿದೆ. ಇಡೀ ಚಿತ್ರತಂಡ ಹೃದಯಪೂರ್ವಕವಾಗಿ ಧನ್ಯವಾದ ತಿಳಿಸುತ್ತದೆ. ದಕ್ಷಿಣ ಭಾರತದಲ್ಲಿ ಒಂದು ಬಿಲಿಯನ್ ವೀಕ್ಷಣೆ ಕಂಡ ಮೊದಲ ಹಾಡು ಎನ್ನುವುದಕ್ಕೆ ಹೆಮ್ಮೆ ಎನ್ನಿಸುತ್ತದೆ”. ಎಂದು ಧನುಶ್ ಟ್ವೀಟ್ ಮಾಡಿ ತಮ್ಮ ಹರ್ಷವನ್ನು ಹಂಚಿಕೊಂಡಿದ್ದಾರೆ. ನಟಿ ಸಾಯಿ ಪಲ್ಲವಿ ಸಹ “ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ” ಎಂದು ಟ್ವೀಟ್ ಮಾಡಿದ್ದಾರೆ.
ಯುವನ್ ಶಂಕರ್ ರೌಡಿ ಬೇಬಿ ಹಾಡಿಗೆ ಸಂಗೀತ ನೀಡಿದ್ದಾರೆ, ಹಾಡಿನ ಸಾಹಿತ್ಯವನ್ನು ನಟ ಧನುಶ್ ಬರೆದಿದ್ದು, ಅವರೇ ಸ್ವತಃ ಹಾಡನ್ನು ಹಾಡಿದ್ದಾರೆ.ಧನುಶ್ ಜತೆ ದೀಕ್ಷಿತಾ ದನಿ ಸೇರಿಸಿದ್ದಾರೆ. ಹಾಡನ್ನು ಪ್ರಭುದೇವ ಕೊರಿಯೋಗ್ರಫ್ ಮಾಡಿದ್ದಾರೆ. ಅಂದಹಾಗೆ ಮಾರಿ-2 ಚಿತ್ರವನ್ನು ಬಾಲಾಜಿ ಮೋಹನ್ ನಿರ್ದೇಶಿಸಿದ್ದರು. ಧನುಶ್ ನಿರ್ಮಾಣದ ಹೊಣೆ ಹೊತ್ತಿದ್ದರು.
What a sweet coincidence this is ❤️❤️ Rowdy baby hits 1 billion views on same day of the 9th anniversary of Kolaveri di. We are honoured that this is the first South Indian song to reach 1 billion views. Our whole team thanks you from the heart ❤️❤️
— Dhanush (@dhanushkraja) November 16, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.