ಪುತ್ರ ತೈಮೂರನ ಹೆಸರು ಬದಲಾಯಿಸಲು ಸೈಫ್ ಅಲಿ ಖಾನ್‌ ಬಯಕೆ !


Team Udayavani, Feb 22, 2017, 4:40 PM IST

Kareena baby-700.jpg

ಹೊಸದಿಲ್ಲಿ : ಛೋಟೆ ನವಾಬ್‌ ಸೈಫ್ ಅಲಿ ಖಾನ್‌ ಮತ್ತು ಬೇಗಂ ಕರೀನಾ ಕಪೂರ್‌ ಖಾನ್‌ ದಂಪತಿಗೆ ಕಳೆದ ವರ್ಷ ಡಿಸೆಂಬರ್‌ 20ರಂದು ಮುದ್ದಾದ ಗುಂಡುಗುಂಡು ಗಂಡು ಮಗು ತೈಮೂರ್‌ ಅಲಿ ಖಾನ್‌ ಜನಿಸಿದಂದಿನಿಂದ ಆತ ಮಾಧ್ಯಮದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. 

ಹೊಸ ಸುದ್ದಿ ಏನಪ್ಪ ಅಂದ್ರೆ ಸೈಫ್ ಗೆ ತಾನು ತನ್ನ ಮಗನಿಗೆ ಇಟ್ಟ ಹೆಸರು (ತೈಮೂರ್‌ ಅಲಿ ಖಾನ್‌) ಈಗ ಅದ್ಯಾಕೋ ಇಷ್ಟವಿಲ್ಲ ! ಮಗನ ಹೆಸರಿನೊಂದಿಗೆ ಹುಟ್ಟಿಕೊಂಡ ವಿವಾದದಿಂದ ಬೇಸರ ಪಟ್ಟುಕೊಂಡಿರುವ ಸೈಫ್, ಈಗಿನ್ನು ತಾನು ಆತನ ಹೆಸರನ್ನು ಬದಲಾಯಿಸುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಂತಿದೆ.

ಇತಿಹಾಸ ಓದಿದವರಿಗೆ ಗೊತ್ತಿರುವ ಸಂಗತಿ ಎಂದರೆ ತೈಮೂರ್‌ ಎಂಬಾತ ಟರ್ಕೊ – ಮಂಗೋಲ್‌ ಆಕ್ರಮಣಕಾರಿ ಅರಸ; ತನ್ನ ನಿರ್ದಯ, ನಿಷ್ಕರುಣೆಯ ದುಷ್ಕೃತ್ಯಗಳಿಗೆ ಕುಖ್ಯಾತಿ ಪಡೆದವ. ಹಾಗಿರುವಾಗ ಸೈಫ್ – ಕರೀನಾ ದಂಪತಿ ತಮ್ಮ ನವಜಾತ ಗಂಡು ಮಗುವಿಗೆ ಈ ಕುಖ್ಯಾತ ಆಕ್ರಮಣಕಾರಿ ದೊರೆಯ ಹೆಸರನ್ನು ಇಟ್ಟದ್ದಾದರೂ ಏಕೆ ಎಂಬ ಪ್ರಶ್ನೆ ಅಂದು ಇಂಟರ್‌ನೆಟ್‌ ತುಂಬಾ ವ್ಯಾಪಕವಾಗಿ ಹರಿದಾಡಿತ್ತು. 

“ಕ್ರೂರಿ ಐತಿಹಾಸಿಕ ದೊರೆ ತೈಮೂರನ ವಿಷಯವೆಲ್ಲ ನಮಗೆ ಗೊತ್ತಿಲ್ಲ; ಪರ್ಶಿಯನ್‌ ಭಾಷೆಯಲ್ಲಿ ತೈಮೂರ್‌ ಎಂಬ ಪದದ ಅರ್ಥ ಕಬ್ಬಿಣ. ಹಾಗಾಗಿ ನಮ್ಮ ಮಗು ಮುಂದೆ ದೊಡ್ಡವನಾದಾಗ ಕಬ್ಬಿಣದಷ್ಟು ಗಟ್ಟಿಮುಟ್ಟಾಗಬೇಕು ಎಂಬ ಹಂಬಲದಲ್ಲಿ ನಾವು ಆತನಿಗೆ ಆ ಹೆಸರನ್ನು ಇಟ್ಟಿದ್ದೇವೆ’ ಎಂದು ಸೈಫ್-ಕರೀನಾ ಅಂದು ತಮ್ಮ ಟೀಕಾಕಾರಿಗೆಲ್ಲ ಉತ್ತರ ನೀಡಿದ್ದರು.

ಆದರೆ ಸೈಫ್ ಗೆ ಕ್ರಮೇಣ ತನ್ನ ಮಗನಿಗೆ ತೈಮೂರ್‌ ಎಂದು ಹೆಸರಿಟ್ಟಿರುವುದು ಅದ್ಯಾಕೋ ಸರಿ ಬರಲಿಲ್ಲ. ಮಗುವಿಗೆ ಒಂದು ಅಥವಾ ಎರಡು ವರ್ಷವಾದಾಗ ಅದಕ್ಕೆ ಬೇರೊಂದು ಒಳ್ಳೆಯ, ಎಲ್ಲರಿಗೂ ಖುಷಿ – ಸಮಾಧಾನ ತರುವ ಹೆಸರನ್ನು ಇಡೋಣ ಎಂದು ಈಗ ಸೈಫ್ ಗೆ ಅನ್ನಿಸಿದೆ. ಹಾಗೆಂದು ಸೈಫ್ ಈಚೆಗೆ “ಡೆಲ್ಲಿ ಟೈಮ್ಸ್‌’ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

“ತೈಮೂರ್‌ನ ಹೆಸರು ಬದಲಾಯಿಸುವ ನನ್ನ ಇಂಗಿತವನ್ನು ನಾನು ಇದುವರೆಗೆ ಯಾರಲ್ಲೂ ಹೇಳಿಲ್ಲ; ಕರೀನಾಗೆ ಹೇಳಿದೆ; ಆದರೆ ಹೆಸರು ಬದಲಾಯಿಸುವ ಆಲೋಚನೆ ಆಕೆಗೆ ಇಷ್ಟವಾಗಿಲ್ಲ; ಆದರೂ ಈ ವಿಷಯ ನನ್ನ ಆಂತರ್ಯವನ್ನು ಸೇರಿಕೊಂಡಿದೆ. ನನ್ನ ಮಗ ದೊಡ್ಡವನಾದಾಗ ತನ್ನ ಹೆಸರಿನ ಕಾರಣಕ್ಕೆ ಅಪ್ರಿಯನಾಗುವುದು ನನಗೆ ಇಷ್ಟವಿಲ್ಲ; ಈಗ ಅಲ್ಲದಿದ್ದರೂ ಆತನಿಗೆ ಒಂದು ಅಥವಾ ಎರಡು ವರ್ಷ ಪ್ರಾಯವಾದಾಗ ಆತನ ಹೆಸರು ಬದಲಾಯಿಸಬೇಕು ಎಂದುಕೊಂಡಿದ್ದೇನೆ’ ಎಂದು ಸೈಫ್ ಸಂದರ್ಶನದಲ್ಲಿ ಹೇಳಿದರು. 

ಟಾಪ್ ನ್ಯೂಸ್

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.