ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್‌ ಮಾತು


Team Udayavani, Jan 2, 2025, 1:09 PM IST

ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್‌ ಮಾತು

ಮುಂಬಯಿ:  ಬಣ್ಣದ ಲೋಕದಲ್ಲಿ ಕೆಲ ವರ್ಷಗಳ ಹಿಂದೆ ʼಮೀಟೂʼ (MeToo movement) ಆರೋಪಗಳು ಸಂಚಲನ ಸೃಷ್ಟಿಸಿತ್ತು. ಇದರಿಂದ ಹಲವು ಕಲಾವಿದರು, ನಿರ್ದೇಶಕ, ನಿರ್ಮಾಪಕರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿತ್ತು.

ಬಾಲಿವುಡ್‌ನಲ್ಲಂತೂ ʼಮೀಟೂʼ ಬಿರುಗಾಳಿಯನ್ನೇ ಎಬ್ಬಿಸಿತ್ತು. ಖ್ಯಾತ ನಿರ್ದೇಶಕ ಸಾಜಿದ್‌ ಖಾನ್‌ (Sajid Khan) ಅವರ ಮೇಲೆ 2018ರಲ್ಲಿ  ಹಲವು ಮಹಿಳಾ ಕಲಾವಿದರು ʼಮೀಟೂʼ ಆರೋಪವನ್ನು ಮಾಡಿದ್ದರು. ಇದು ಸಾಜಿದ್ ಖಾನ್‌ ಅವರ ವ್ಯಕ್ತಿತ್ವ ಹಾಗೂ ಕೆರಿಯರ್‌ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು.

ʼಹೌಸ್‌ ಫುಲ್‌ -4ʼ ಚಿತ್ರದ ನಿರ್ದೇಶನದಿಂದ ಅವರು ಕೆಳಗಿಳಿಯುವ ಪರಿಸ್ಥಿತಿ ʼಮೀಟೂʼ ಆರೋಪದಿಂದ ಎದುರಾಯಿತು. ಜನಪ್ರಿಯರಾಗಿದ್ದ ಸಾಜಿದ್‌ ಅವರ ಮೇಲೆ ʼಮೀಟೂʼ ಬಹುದೊಡ್ಡದಾಗಿಯೇ ಪರಿಣಾಮ ಬೀರಿತ್ತು.

ವೃತ್ತಿಗೆ ಹಾಗೂ ವೈಯಕ್ತಿಕವಾಗಿಯೂ ಸಾಜಿದ್‌ಗೆ ʼಮೀಟೂʼ ನುಂಗಲಾರದ ತುತ್ತಾಗಿ ಪರಿಣಮಿಸಿತು. ಈ ಬಗ್ಗೆ ತನಿಖೆ ನಡೆಸಿ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘದ ಸಾಜಿದ್‌ ಅವರನ್ನು ಅಮಾನತು ಮಾಡಲಾಗಿತ್ತು. ಇದಾದ ನಂತರ 2019 ರಲ್ಲಿ ಮತ್ತೆ ಬಣ್ಣದ ಲೋಕಕ್ಕೆ ಸೇರಿಸಲಾಗಿತ್ತು. ಆದರೆ ಇದರ ಹೊರತಾಗಿಯೂ ಸಾಜಿದ್‌ಗೆ ಮೊದಲಿದ್ದ ಜನಪ್ರಿಯತೆ ಮತ್ತೆಂದೂ ಸಿಗಲಿಲ್ಲ.

ಇದನ್ನೂ ಓದಿ: Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್‌ ಲೀಕ್

ಇದೀಗ ಇದೇ ಮೊದಲ ಬಾರಿಗೆ ಸಾಜಿದ್‌ ʼಮೀಟೂʼ ಅವರ ಕೆರಿಯರ್‌ ಹಾಗೂ ವೈಯಕ್ತಿಕ ಬದುಕಿನ ಮೇಲೆ ಬೀರಿದ ಪರಿಣಾಮಗಳ ಬಗ್ಗೆ ʼಹಿಂದೂಸ್ತಾನ್‌ ಟೈಮ್ಸ್‌ʼ ಜತೆ ಮಾತನಾಡಿದ್ದಾರೆ.

#MeToo ಆರೋಪದ ನಂತರ ಕಳೆದ ಆರು ವರ್ಷಗಳಿಂದ ನಿಮ್ಮ ಜೀವನ ಹೇಗಿದೆ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ಕಳೆದ ಆರು ವರ್ಷಗಳಲ್ಲಿ ನನ್ನ ಜೀವನವನ್ನು ಹಲವು ಬಾರಿ ಕೊನೆಗೊಳಿಸಲು ನಾನು ಯೋಚಿಸಿದ್ದೆ. ಈ ಅವಧಿಯು ಅತ್ಯಂತ ಕೆಟ್ಟದಾಗಿತ್ತು” ಎಂದು ಅವರು ಉತ್ತರಿಸಿದ್ದಾರೆ.

ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘ (IFTDA) ಅನುಮತಿ ನೀಡಿದ್ದರೂ ನಾನು ಈಗಲೂ ನನ್ನ ಕಾಲಿನ ಮೇಲೆ ನಿಲ್ಲಲು ಪ್ರಯತ್ನಿಸುತ್ತಿದ್ದೇನೆ. ಯಾವುದೇ ಆದಾಯವಿಲ್ಲದ ಕಾರಣ ನಾನು ನನ್ನ ಮನೆಯನ್ನು ಮಾರಿ ಬಾಡಿಗೆ ಫ್ಲಾಟ್‌ಗೆ ಹೋಗಬೇಕಾಯಿತು. ನನ್ನ ತಂದೆ (ನಟ, ನಿರ್ಮಾಪಕ ಮತ್ತು ನಿರ್ದೇಶಕ, ಕಮ್ರಾನ್ ಖಾನ್) ನಿಧನರಾದ ಬಳಿಕ ನಾನು ದುಡಿಯಲು ಶುರು ಮಾಡಿದೆ. ಆಗ ನನಗೆ 14 ವರ್ಷ ಆಗಿತ್ತು. ಆಗ ನಾನು ಮತ್ತು ನನ್ನ ಸಹೋದರಿ ಫರಾಹ್ ಖಾನ್ ಸಾಲದ ಸುಳಿಯಲ್ಲಿ ಇದ್ದೆವು. ಇಂದು ನನ್ನ ತಾಯಿ ಬದುಕಿದ್ದರೆ (ಮೇನಕಾ ಇರಾನಿ 2024 ರಲ್ಲಿ ನಿಧನರಾದರು) ನಾನು ಕಂಬ್ಯಾಕ್‌ ಮಾಡಲು ಪಡುತ್ತಿರುವ ಪ್ರಯತ್ನವನ್ನು ನೋಡುತ್ತಿದ್ದರು. ನಾನು ಮಗನಿಗಿಂತ ಹೆಚ್ಚಾಗಿ ಅವಳಿಗೆ ಕೇರ್‌ ಟೇಕರ್‌ ಆಗಿದ್ದೆ. ಜೀವನವು ಸಾಕಷ್ಟು ಕಠಿಣವಾಗಿದೆ ಎಂದಿದ್ದಾರೆ.

ನಾನು ಎಂದಿಗೂ ಮಹಿಳೆಯರನ್ನು ಅಗೌರವದಿಂದ ಕಂಡಿಲ್ಲ. ಆ ರೀತಿ ನಾನು ಎಂದಿಗೂ ಮಾಡುವುದಿಲ್ಲ. ನನ್ನ ತಾಯಿ ನನ್ನನ್ನು ಲಿಂಗ ಸಮಾನತೆಯನ್ನು ನಂಬುವಂತೆ ಬೆಳೆಸಿದ್ದಾರೆ. ನನ್ನ ಮಾತುಗಳು ನನಗೆ ಇಷ್ಟು ದೊಡ್ಡ ಬೆಲೆಯನ್ನು ನೀಡುತ್ತವೆ ಎಂದು ನನಗೆ ತಿಳಿದಿರಲಿಲ್ಲ ಎಂದು ಸಾಜಿದ್‌ ಹೇಳಿದ್ದಾರೆ.

ಈ ಬಗ್ಗೆ ಇಷ್ಟು ಸಮಯ ಯಾಕೆ ಸೈಲೆಂಟ್‌ ಆಗಿದ್ದೀರಿ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಮಾತನಾಡಲು ಇಷ್ಟವಿರಲಿಲ್ಲ. ‘ಮೌನವೇ ಬಂಗಾರʼ ಎಂದು ನನ್ನ ತಾಯಿ ನನಗೆ ಹೇಳಿಕೊಟ್ಟಿದ್ದರು ಎಂದು ಸಾಜಿದ್‌ ಹೇಳಿದ್ದಾರೆ.

2022ರಲ್ಲಿ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಸಾಜಿದ್‌ ಭಾಗಿಯಾಗಿದ್ದರು. ಸಾಜಿದ್‌ ʼಹೇ ಬೇಬಿʼ, ʼಡರ್ನಾ ಜರೂರಿ ಹೈʼ , ʼಹಿಮ್ಮತ್ವಾಲಾʼ ಮುಂತಾದ ಸಿನಿಮಾಗಳನ್ನು ಮಾಡಿದ್ದಾರೆ.

 

ಟಾಪ್ ನ್ಯೂಸ್

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

Hunasu-Accident

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

KSRTC

Ticket Price Hike: ನಾಲ್ಕು ನಿಗಮಗಳ ಬಸ್‌ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್‌ ಮಲಿಕ್; ಇಲ್ಲಿದೆ ಫೋಟೋಸ್

Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್‌ ಮಲಿಕ್; ಇಲ್ಲಿದೆ ಫೋಟೋಸ್

1-ram

Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

puttige-6-

Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

1-ksde

CPCRI; ಅಡಿಕೆ ಉತ್ಪನ್ನ ಬಗ್ಗೆ ಸಂಶೋಧನೆ

Vimana 2

Air India Express; ಮಂಗಳೂರು-ಪುಣೆ ನೇರ ವಿಮಾನ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.