![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 10, 2024, 1:36 PM IST
ಮುಂಬಯಿ: ಹಾಡು ಹಾಗೂ ಲವ್ ಸ್ಟೋರಿಯಿಂದ ಪ್ರೇಕ್ಷಕರ ಮನಗೆದ್ದಿದ್ದ ʼಸನಮ್ ತೇರಿ ಕಸಮ್ʼ (Sanam Teri Kasam) ಸೀಕ್ವೆಲ್ ಅಧಿಕೃತವಾಗಿ ಮಂಗಳವಾರ(ಸೆ.10ರಂದು) ಅನೌನ್ಸ್ ಆಗಿದೆ.
ರಾಧಿಕಾ ರಾವ್ ಮತ್ತು ವಿನಯ್ ಸಪ್ರು ಜಂಟಿಯಾಗಿ ನಿರ್ದೇಶನ ಮಾಡಿದ್ದ 2016ರಲ್ಲಿ ತೆರೆಕಂಡಿದ್ದ ʼಸನಮ್ ತೇರಿ ಕಸಮ್ʼ ಭಿನ್ನವಾದ ಲವ್ ಸ್ಟೋರಿಯ ಸಿನಿಮಾವಾಗಿತ್ತು. ಹರ್ಷವರ್ಧನ್ ರಾಣೆ (Harshvardhan Rane) ಹಾಗೂ ಪಾಕ್ ಚೆಲುವೆ ಮಾವ್ರಾ ಹೊಕಾನೆ (Mawra Hocane) ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಾಂಗ್ಸ್ ಹಾಗೂ ಪ್ರಧಾನ ಪಾತ್ರಗಳ ಅಭಿನಯದಿಂದ ಸಿನಿಮಾ ಪ್ರೇಕ್ಷಕರಿಂದ ಅದ್ಭುತವಾದ ಅಭಿಪ್ರಾಯವನ್ನು ಪಡೆದುಕೊಂಡಿತ್ತು.
ಆದರೆ ಉತ್ತಮ ಅಭಿಪ್ರಾಯದ ಹೊರತಾಗಿಯೂ ಸಿನಿಮಾ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ. ʼಸನಮ್ ತೇರಿ ಕಸಮ್-2ʼ ತಯಾರಿ ಆರಂಭಗೊಂಡಿದ್ದು ಮೊದಲ ಹಂತವಾಗಿ ಸಿನಿಮಾವನ್ನು ಅನೌನ್ಸ್ ಮಾಡಲಾಗಿದೆ.
ಹರ್ಷವರ್ಧನ್ ರಾಣೆ ಸೀಕ್ವೆಲ್‌ನಲ್ಲೂ ಹೀರೋ ಆಗಿ ಕಾಣಿಸಿಕೊಳ್ಳಲಿದ್ದು, ನಾಯಕಿ ಹಾಗೂ ಸಿನಿಮಾದ ನಿರ್ದೇಶಕನ ಹುಡುಕಾಟದಲ್ಲಿ ಪ್ರೊಡಕ್ಷನ್ ಹೌಸ್ ನಿರತವಾಗಿದೆ.
ಸೋಹಮ್ ರಾಕ್‌ಸ್ಟಾರ್ ಎಂಟರ್‌ಟೈನ್‌ಮೆಂಟ್ ಸಿನಿಮಾಕ್ಕೆ ಬಂಡವಾಳ ಹಾಕಲಿದೆ.
Sanam Teri Kasam 2 is officially happening! After the epic love story of the first film, we’re back with more! Stay tuned for updates! #SanamTeriKasam2
@deepakmukut @hunarmukut #HarshvardhanRane #SohamRockstarEntertainment #SREMusic #DeepakMukut #SanamTeriKasam2ComingSoon pic.twitter.com/uSDOtMYU8s
— Soham Rockstar Entertainment (@SohamRockstrEnt) September 10, 2024
“ನಾವು ಸನಮ್ ತೇರಿ ಕಸಮ್ 2 ಗಾಗಿ ಅದ್ಭುತ ಕಥೆಯನ್ನು ಲಾಕ್ ಮಾಡಿದ್ದೇವೆ. ಹರ್ಷವರ್ಧನ್ ರಾಣೆ ನಾಯಕನಾಗಿ ಮರಳಿದ್ದಾರೆ” ಎಂದು ಸೋಹಮ್ ರಾಕ್‌ಸ್ಟಾರ್ ಎಂಟರ್‌ಟೈನ್‌ಮೆಂಟ್‌ನ ದೀಪಕ್ ಮುಕುತ್ ಹೇಳಿದ್ದಾರೆ.
ಇದೇ ಅಕ್ಟೋಬರ್‌ನಲ್ಲಿ ʼಸನಮ್ ತೇರಿ ಕಸಮ್ʼ ಸಿನಿಮಾ ರೀ- ರಿಲೀಸ್ ಆಗಲಿದೆ.
ʼಸನಮ್ ತೇರಿ ಕಸಮ್ʼ ಮೊದಲ ಭಾಗವನ್ನು ರಾಧಿಕಾ ರಾವ್ ಮತ್ತು ವಿನಯ್ ಸಪ್ರು, ನಿರ್ದೇಶನ ಮಾಡಿದ್ದರು. ಸದ್ಯ ಇವರು ʼಜನಮ್ ತೇರಿ ಕಸಮ್ʼ ಎಂಬ ಮತ್ತೊಂದು ಪ್ರೇಮಕಥೆಯನ್ನು ನಿರ್ದೇಶನ ಮಾಡುತ್ತಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.