ಕಿರುತೆರೆಯಿಂದ ಹಿರಿತೆರೆಗೆ: ಪ್ರತಿಭಾವಂತ ನಟಿಯ ಎಂಟ್ರಿ


Team Udayavani, Aug 6, 2023, 1:09 PM IST

tdy-16

ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಅನೇಕ ನಟಿಯರು ಈಗ ಸಿನಿಮಾರಂಗದಲ್ಲೂ ಬಿಝಿಯಾಗುತ್ತಿದ್ದಾರೆ. ಒಳ್ಳೆಯ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ರಜಿನಿ. ಈಗಾಗಲೇ ಹಲವು ಧಾರಾವಾಹಿಗಳ ಪ್ರಧಾನ ಪಾತ್ರದಲ್ಲಿ ಗುರುತಿಸಿಕೊಂಡಿರುವ ರಜಿನಿ ಈಗ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಅದು “ಅಂಬುಜ’. ಜು.21ಕ್ಕೆ ತೆರೆ ಕಂಡಿರುವ ಈ ಚಿತ್ರದಲ್ಲಿ ರಜಿನಿ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರ ಟೈಟಲ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಂದಹಾಗೆ, ಇದು ರಜಿನಿ ನಟಿಸಿರುವ ಚೊಚ್ಚಲ ಚಿತ್ರ. ಮೊದಲ ಚಿತ್ರದಲ್ಲೇ ಟೈಟಲ್‌ ರೋಲ್‌ನಲ್ಲಿ ಕಾಣಿಸಿಕೊಂಡಿರುವ ರಜಿನಿ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅವರು, “ಭಾವನಾತ್ಮಕವಾಗಿ ಎಲ್ಲರನ್ನೂ ಕಾಡುವ ಪಾತ್ರ. ಒಂದು ಕಡೆ ಸೆಂಟಿಮೆಂಟ್‌, ಇನ್ನೊಂದು ಕಡೆ ರಗಡ್‌ ಲುಕ್‌ ಇದೆ. ಎಲ್ಲಾ ಪಾತ್ರಗಳ ಮಧ್ಯೆ ಎದ್ದು ಕಾಣುವ ಪಾತ್ರವಿದು. ನಾನಿಲ್ಲಿ ಅಂಬುಜ ಎಂಬ ಟೈಟಲ್‌ ರೋಲ್‌ ಮಾಡಿದ್ದೇನೆ. ಅಂಬುಜ ಪಾತ್ರಕ್ಕೆ ಸಾಕಷ್ಟು ಶೇಡ್ಸ್‌ ಇದೆ. ನಿರ್ದೇಶಕರು ಅದನ್ನು  ಸಿನಿಮಾದುದ್ದಕ್ಕೂ ತೋರಿಸಿದ್ದಾರೆ’ ಎನ್ನುತ್ತಾರೆ ರಜಿನಿ.

ಕಾಸ್ಟ್ಯೂಮ್‌ ಭಾರ

“ಅಂಬುಜ’ ಚಿತ್ರ ಲಂಬಾಣಿ ಜನಾಂಗದ ಮಹಿಳೆಯ ಸುತ್ತ ಸಾಗುವ ಸಿನಿಮಾ. ಹಾಗಾಗಿ, ಸಿನಿಮಾದುದ್ದಕ್ಕೂ ಲಂಬಾಣಿ ಮಹಿಳೆಯರ ಹಾಕುವ ಕಾಸ್ಟ್ಯೂಮ್‌ನಲ್ಲೇ ರಜಿನಿ ಕಾಣಿಸಿಕೊಂಡಿದ್ದಾರೆ. ಆದರೆ, ಆ ಕಾಸ್ಟ್ಯೂಮ್‌ 20ಕೆಜಿಗೂ ಅಧಿಕ ತೂಕದಿಂದ ಕೂಡಿತ್ತಂತೆ. “ಸಿನಿಮಾ ನೈಜವಾಗಿ ಮೂಡಿಬರಬೇಕೆಂಬ ಕಾರಣದಿಂದ ಚಿತ್ರದ ಕಾಸ್ಟೂéಮ್‌ ಅನ್ನು ನೈಜವಾಗಿ ಸಿದ್ಧಪಡಸಲಾಗಿತ್ತು. ಅಷ್ಟೊಂದು ಭಾರದ ಕಾಸ್ಟ್ಯೂಮ್‌ ಹಾಕಿ ಚಿತ್ರೀಕರಣ ಮಾಡೋದು ಕಷ್ಟ. ದುಪ್ಪಟವನ್ನು ತಲೆ ಮೇಲೆ ಹಾಕಿಕೊಂಡಾಗ ಎರಡು ದಿನ ತಲೆನೋವು ಬರುತ್ತಿತ್ತು. ಅಷ್ಟೊಂದು ಭಾರವಿತ್ತು. ಚಿತ್ರದಲ್ಲಿ ಅಷ್ಟೊಂದು ತೂಕದ ಕಾಸ್ಟೂéಮ್‌ ಹಾಕಿಕೊಂಡು ಡ್ಯಾನ್ಸ್‌ ಮಾಡಿದ್ದು ಒಂದು ಸವಾಲು’ ಎನ್ನುವುದು ರಜಿನಿ ಮಾತು.

ಟೈಟಲ್‌ ರೋಲ್‌ ಖುಷಿ:

ಮೊದಲ ಚಿತ್ರದಲ್ಲೇ ಟೈಟಲ್‌ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಖುಷಿ ರಜಿನಿ ಅವರದು. “ಇವತ್ತು ಮಹಿಳಾ ಪ್ರಧಾನ ಚಿತ್ರಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ನನಗೆ ಟೈಟಲ್‌ ರೋಲ್‌ ಸಿಕ್ಕಿರೋದು ನಿಜಕ್ಕೂ ತುಂಬಾ ಖುಷಿಯಾಗಿದೆ. ನನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಲು ನಾನು ಪ್ರಯತ್ನಿಸಿದ್ದೇನೆ. ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎನ್ನುವ ರಜಿನಿ ಕೈಯಲ್ಲಿ ಇನ್ನೊಂದಿಷ್ಟು ಸಿನಿಮಾಗಳಿವೆ. ಎಲ್ಲವೂ ನಟನೆಗೆ ಅವಕಾಶವಿರುವ ಪಾತ್ರಗಳೇ. “ನನಗೆ ಸಣ್ಣಪಾತ್ರವಾದರೂ ಸರಿ, ಅದನ್ನು ಜನ ಗುರುತಿಸುವಂತಿರಬೇಕು. ಇವತ್ತು ಲೀಡ್‌ರೋಲ್‌, ಹೀರೋಯಿನ್‌ ಎನ್ನುವುದಕ್ಕಿಂತ ಪಾತ್ರದ ತೂಕ ಮುಖ್ಯವಾಗುತ್ತಿದೆ. ನಾನು ಕೂಡಾ ಅಂತಹ ಪಾತ್ರಗಳನ್ನು ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ.

ಟಾಪ್ ನ್ಯೂಸ್

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ

3

La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?

1-dog

Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ

Train

Train; ದೀಪಾವಳಿಗೆ ಬೆಂಗಳೂರು- ಕಾರವಾರ ವಿಶೇಷ ರೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Producer K Manju Teams Up With Director Smile Sreenu

Sandalwood: ಸ್ಮೈಲ್‌ ಶ್ರೀನು ಚಿತ್ರಕ್ಕೆ ಕೆ.ಮಂಜು ಸಾಥ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Bagheera movie song out

Bagheera ರುಧಿರ ಗಾನ…; ಶ್ರೀಮುರಳಿ ಸಿನಿಮಾದ ಹಾಡು ಬಂತು

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ವಂಚನೆ ಪ್ರಕರಣ: ಅ.21ಕ್ಕೆ ಜಾಮೀನು ಅರ್ಜಿ ವಿಚಾರಣೆ

Udupi: ವಂಚನೆ ಪ್ರಕರಣ: ಅ.21ಕ್ಕೆ ಜಾಮೀನು ಅರ್ಜಿ ವಿಚಾರಣೆ

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.