ನಟ ಸಂಜಯ್ ದತ್ ಗೆ 3ನೇ ಹಂತದ ಶ್ವಾಸಕೋಶ ಕ್ಯಾನ್ಸರ್: ಚಿಕಿತ್ಸೆಗಾಗಿ ಯುಎಸ್ ಗೆ ಪ್ರಯಾಣ ?
Team Udayavani, Aug 12, 2020, 8:03 AM IST
ಮುಂಬೈ: ಬಾಲಿವುಡ್ ಹಿರಿಯ ನಟ ಸಂಜಯ್ ದತ್ 3ನೇ ಹಂತದ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಉಸಿರಾಟದ ತೊಂದರೆಯಿಂದ ಕಳೆದ ಶನಿವಾರ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಸಂಜಯ್ ದತ್ ಸೋಮವಾರ ಡಿಸ ಚಾರ್ಜ್ ಆಗಿದ್ದರು. ಮಂಗಳವಾರ ವೈದ್ಯಕೀಯ ಚಿಕಿತ್ಸೆಗಾಗಿ ನಟನೆಯಿಂದ ಕೆಲಕಾಲ ಬಿಡುವು ಪಡೆಯುವುದಾಗಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದರು. ಕೋವಿಡ್ ವರದಿಯಲ್ಲಿ ಕೂಡ ನೆಗೆಟಿವ್ ಬಂದಿತ್ತು.
ಸಂಜಯ್ ದತ್ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ. ಸಿನಿಮಾ ವಿಮರ್ಶಕ ಕೋಮಲ್ ನಹ್ತಾ ಅವರು ಕೂಡ ‘ಸಂಜಯ್ ದತ್ ಅವರು ಲಂಗ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರು ಬೇಗ ಹುಷಾರಾಗಲಿ ಎಂದು ಪ್ರಾರ್ಥಿಸಿ’ ಎಂದು ಟ್ವೀಟ್ ಮಾಡಿದ್ದಾರೆ
Sanju sir diagnosed with lung cancer 🙁 #sanjaydutt get well soon sir ? this year why u doing this ?
— adhyayan summan (@AdhyayanSsuman) August 11, 2020
ಇದರ ಬಗ್ಗೆ ಸ್ವತಃ ಸಂಜಯ್ ದತ್ ಯಾವುದೇ ಮಾಹಿತಿ ನೀಡಿಲ್ಲವಾಗಿದ್ದು. ಇವರ ಮಕ್ಕಳು ಹಾಗೂ ಪತ್ನಿ ದುಬೈನಲ್ಲಿ ನೆಲೆಸಿದ್ದಾರೆ.
ಸಿನಿಮಾದಿಂದ ನಾನು ಸಣ್ಣ ಬ್ರೇಕ್ ಪಡೆಯುತ್ತಿದ್ದು, ನನಗೆ ಚಿಕಿತ್ಸೆ ಮಾಡಿಸಿಕೊಳ್ಳಬೇಕಿದೆ. ನನ್ನ ಸ್ನೇಹಿತರು, ಕುಟುಂಬದವರು ನನ್ನ ಜೊತೆಗಿದ್ದಾರೆ. ಅಭಿಮಾನಿಗಳು ಯಾವುದೇ ವದಂತಿಗಳಿಗೆ ಕಿಗೊಡಬೇಡಿ. ನಿಮ್ಮೆಲ್ಲರ ಹಾರೈಕೆಯಿಂದ ನಾನು ಬೇಗ ಹುಷಾರಾಗುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ಸಂಜಯ್ ದತ್ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಕೆಜಿಎಫ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಅಧೀರ ಎಂಬ ಪಾತ್ರ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಹಿಂದಿಯಲ್ಲೂ ಕೆಲವು ಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Chhaava trailer: ʼಮರಾಠʼ ಸಾಮ್ರಾಟನಾಗಿ ಅಬ್ಬರಿಸಿದ ವಿಕ್ಕಿ ಕೌಶಲ್; ʼಛಾವಾʼ ಟ್ರೇಲರ್ ಔಟ್
Chhaava Movie: ಮರಾಠ ರಾಣಿಯಾಗಿ ರಶ್ಮಿಕಾ; ಚಾವಾ ಚಿತ್ರದ ಫಸ್ಟ್‌ಲುಕ್ ರಿಲೀಸ್
Saif Ali Khan;ಸಂಕಷ್ಟದಲ್ಲಿ ನೆರವಾದ ಆಟೋ ಚಾಲಕನಿಗೆ ಧನ್ಯವಾದ ಹೇಳಲು ಮರೆಯದ ನಟ
Actress: ʼನೀವು ಹಿಂದುವೋ- ಮುಸಲ್ಮಾನರೋ..” ಧರ್ಮದ ಪ್ರಶ್ನೆಯಿಂದ ಮನೆ ಹುಡುಕಲು ಪರದಾಡಿದ ನಟಿ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್