ಬಾಲಿವುಡ್ ನಶೆ ಜಾಲದಲ್ಲಿ ಸಾರಾ ಆಲಿಖಾನ್, ರಾಕುಲ್ ಪ್ರೀತ್, ಮುಖೇಶ್ ಚಾಬ್ರಾ!ಬಾಯ್ಬಿಟ್ಟ ರಿಯಾ
ಬಾಲಿವುಡ್‌ನ 25 ಪ್ರಮುಖ ತಾರೆಯರನ್ನು ವಿಚಾರಣೆಗೆ ಕರೆಸಲು ಸಜ್ಜಾಗಿದೆ ಎನ್‌ಸಿಬಿ
Team Udayavani, Sep 12, 2020, 10:13 AM IST
ಮುಂಬೈ: ನಟ ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ಮಾದಕ ದ್ರವ್ಯ ನಶೆ ನಂಟು ಹಾಕಿರುವ ಕಾರಣ ಬಾಲಿವುಡ್ ನ ಡ್ರಗ್ ಪ್ರಕರಣದ ತನಿಖೆಯನ್ನು ಎನ್ ಸಿಬಿ ತೀವ್ರಗೊಳಿಸಿದೆ. ಸುಶಾಂತ್ ಮಾಜಿ ಗೆಳತಿ ರಿಯಾ ಚಕ್ರವರ್ತಿಯನ್ನು ಬಂಧಿಸಿರುವ ಎನ್ ಸಿಬಿ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ಈ ವೇಳೆ ನಟಿ ರಿಯಾ ಹಲವು ಬಾಲಿವುಡ್ ಸೆಲೆಬ್ರೆಟಿಗಳ ಹೆಸರು ಹೇಳಿದ್ದಾರೆ ಎಂದು ವರದಿಯಾಗಿದೆ.
ಎನ್‌ಸಿಬಿ ನಡೆಸಿದ ವಿಚಾರಣೆಯ ಸಮಯದಲ್ಲಿ, ರಿಯಾ ಕೆಲವು ಬಾಲಿವುಡ್ ಸೆಲೆಬ್ರಿಟಿಗಳ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ. ಸುಮಾರು 15 ಬಿ-ಟೌನ್ ಸೆಲೆಬ್ರೆಟಿಗಳು ಈಗ ಎನ್‌ಸಿಬಿ ರಾಡಾರ್‌ನಲ್ಲಿದ್ದಾರೆ ಎನ್ನಲಾಗಿದೆ.
ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್, ಡಿಸೈನರ್ ಸಿಮೋನೆ ಖಂಬತ್ತ, ಸುಶಾಂತ್ ಸಿಂಗ್ ಅವರ ಸ್ನೇಹಿತೆ ಮತ್ತು ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಮತ್ತು ಚಲನಚಿತ್ರ ನಿರ್ಮಾಪಕ ಮುಖೇಶ್ ಛಾಬ್ರಾ ಮಾದಕ ದ್ರವ್ಯವನ್ನು ಸೇವಿಸಿದ್ದಾರೆ ಎಂದು ರಿಯಾ ಚಕ್ರವರ್ತಿ ಕೇಂದ್ರ ತನಿಖಾ ಸಂಸ್ಥೆಯ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಜೀ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ: ಸುಶಾಂತ್ ಸಾವು ಪ್ರಕರಣ: ಮುಂಬೈ- ಗೋವಾದ ಏಳು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ ಎನ್ ಸಿಬಿ
ಪ್ರಸಿದ್ಧ ನಟ ಸೈಫ್ ಆಲಿ ಖಾನ್ ಪುತ್ರಿಯಾಗಿರುವ ಸಾರಾ ಆಲಿ ಖಾನ್ 2018ರಲ್ಲಿ ಸುಶಾಂತ್ ಸಿಂಗ್ ಅವರ ‘ಕೇದಾರನಾಥ’ ಚಿತ್ರದಲ್ಲಿ ನಟಿಸಿದ್ದರು. ಸಾರಾ ಮತ್ತು ಸುಶಾಂತ್ ಥಾಯ್ಲೆಂಡ್ ನಲ್ಲಿ ಡ್ರಗ್ ಸೇವಿಸಿದ್ದರು ಎಂದು ರಿಯಾ ಎನ್ ಸಿಬಿ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.
ಬಾಲಿವುಡ್‌ನ 80% ತಾರೆಗಳು ಮಾದಕ ವಸ್ತು ಸೇವಿಸುತ್ತಾರೆ ಎಂದು ರಿಯಾ ತನಿಖೆ ವೇಳೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾದಕವಸ್ತು ತನಿಖೆಯಲ್ಲಿ ಎನ್‌ಸಿಬಿ ಬಾಲಿವುಡ್‌ನ 25 ಪ್ರಮುಖ ತಾರೆಯರನ್ನು ವಿಚಾರಣೆಗೆ ಕರೆಸಲು ಸಜ್ಜಾಗಿದೆ ಎಂಬ ವರದಿಗಳಿವೆ.
ಇದನ್ನೂ ಓದಿ: ಮುಗಿಯದ ಮಹಾರಾಷ್ಟ್ರ ಸರಕಾರ – ಬಾಲಿವುಡ್ ನಟಿ ಜಟಾಪಟಿ: ಸೋನಿಯಾ ಮಧ್ಯ ಪ್ರವೇಶಕ್ಕೆ ಆಗ್ರಹ
ಮಾದಕ ದ್ರವ್ಯ ಪೂರೈಕೆ ಮತ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಿಯಾ ಜೊತೆಗೆ ಆಕೆಯ ಸಹೋದರ ಶೋವಿಕ್ ಚಕ್ರವರ್ತಿ, ಸುಶಾಂತ್ ಮ್ಯಾನೇಜರ್ ನನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.