ಫೆ.11ರಂದು ಎರಡನೇ ಮದುವೆ; ದೃಢಪಡಿಸಿದ ಸೌಂದರ್ಯಾ ರಜನಿಕಾಂತ್
Team Udayavani, Feb 4, 2019, 10:39 AM IST
ಹೊಸದಿಲ್ಲಿ : ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯಾ ರಜನಿಕಾಂತ್ ತಾನು ಈ ತಿಂಗಳಲ್ಲಿ ಚಿತ್ರನಟ-ಉದ್ಯಮಿ ವಿಶಾಖನ್ ವನಂಗಮುಡಿ ಅವರನ್ನು ಮದುವೆಯಾಗಲಿರುವುದನ್ನು ದೃಢಪಡಿಸಿದ್ದಾರೆ. ಅಂದ ಹಾಗೆ ಇದು ಸೌಂದರ್ಯಾ ಅವರಿಗೆ ಎರಡನೇ ಮದುವೆ !
ಇದೇ ಫೆ.11ರಂದು ಚೆನ್ನೈನಲ್ಲಿ ಸೌಂದರ್ಯಾ – ವಿಶಾಖನ್ ಮದುವೆ ಕಾರ್ಯಕ್ರಮ ನಡೆಯಲಿದೆ. ಮದುವೆಪೂರ್ವದ ಎರಡು ದಿನಗಳ ಸಂಭ್ರಮೋಲ್ಲಾಸದ ಕಾರ್ಯಕ್ರಮಗಳು ಫೆ.9ರಂದೇ ಆರಂಭವಾಗಲಿವೆ.
ಸೌಂದರ್ಯಾ ಅವರು ಟ್ವಿಟರ್ ಮೂಲಕ ತನ್ನ ಎರಡನೇ ಮದುವೆ ಸುದ್ದಿಯನ್ನು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. “ವಿಶಾಖನ್ ಜತೆ ಮದುವೆಗೆ ಇನ್ನೊಂದೇ ವಾರ ಇದೆ – ಸೌಂದರ್ಯಾ’ ಎಂದಾಕೆ ಸಂಕ್ಷಿಪ್ತವಾಗಿ ಟ್ವೀಟ್ ಮಾಡಿದ್ದಾಳೆ.
ಸೌಂದರ್ಯಾಗೆ ಈ ಮೊದಲು ಕೈಗಾರಿಕೋದ್ಯಮಿ ಅಶ್ವಿನ್ ರಾಮ್ ಕುಮಾರ್ ಜತೆಗೆ ಮದುವೆಯಾಗಿತ್ತು. ಈ ದಂಪತಿ ಏಳು ವರ್ಷ ಜತೆಗೂಡಿ ಬಾಳ್ವೆ ನಡೆಸಿ, 2016ರಲ್ಲಿ ವಿಚ್ಛೇದನೆ ಪಡೆದುಕೊಂಡಿತ್ತು. ಈ ದಂಪತಿಗೆ ಆರು ವರ್ಷದ ಪುತ್ರ, ವೇದ ಕೃಷ್ಣ, ಇದ್ದು ಆತನು ತಾಯಿ ಸೌಂದರ್ಯಾ ಜತೆಗೆ ಇದ್ದಾನೆ.
ರಜನಿಕಾಂತ್ ಅವರ ಕೊಚ್ಚದಯಾನ್ ಮತ್ತು ವಿಐಪಿ-2 ಸಿನಿಮಾ ನಿರ್ಮಾಣ ಕಾರ್ಯದಲ್ಲಿ ಸೌಂದರ್ಯಾ, ಪೂರ್ಣ ಪ್ರಮಾಣದ ಜವಾಬ್ದಾರಿ ವಹಿಸಿದ್ದಳು.
ಸೌಂದರ್ಯಾ ಮದುವೆಯಾಗಲಿರುವ ವಿಶಾಖನ್ 2018ರಲ್ಲಿ ತಮಿಳು ಥ್ರಿಲ್ಲರ್ ವಂಜಗಾರ್ ಉಳಗಂ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದರು. ಈತ ಫಾಮಾಸುಟಿಕಲ್ ಕಂಪೆನಿಯೊಂದರ ಮಾಲಕ.
ಸೌಂದರ್ಯಾ ಈಚೆಗೆ ತನ್ನ ತಾಯಿ ಲತಾ ರಜನಿಕಾಂತ್ ಜತೆಗೆ ತಿರುಪತಿಯ ಬಾಲಾಜಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಅಲ್ಲಿ ತನ್ನ ಮದುವೆ ಕರೆಯೋಲೆ ಪತ್ರವನ್ನು ದೇವರ ಮುಂದಿಟ್ಟು ಪೂಜಿಸಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.