Jawan ತಂಡದಿಂದ ಪ್ರೇಕ್ಷಕರಿಗೆ ʼಬೈ1 ಗೆಟ್ 1 ಫ್ರೀʼ ಟಿಕೆಟ್ ಆಫರ್ ಘೋಷಿಸಿದ ಶಾರುಖ್ ಖಾನ್
Team Udayavani, Sep 28, 2023, 10:59 AM IST
ಮುಂಬಯಿ: ಕಿಂಗ್ ಖಾನ್ ಬ್ಯಾಕ್ ಟು ಬ್ಯಾಕ್ ಬಿಗ್ ಹಿಟ್ ಕೊಟ್ಟಿದ್ದಾರೆ. ʼಜವಾನ್ʼ ಸಿನಿಮಾ ಈ ವರ್ಷದ ಮತ್ತೊಂದು ದೊಡ್ಡ ಯಶಸ್ಸಾಗುವ ಮೂಲಕ ಶಾರುಖ್ ಖಾನ್ ಅವರು ಫುಲ್ ಖುಷ್ ಆಗಿದ್ದಾರೆ. ಈ ಖುಷಿಗೆ ಎಲ್ಲರೂ ಜೊತೆಯಾಗಬೇಕೆಂದು ʼಜವಾನ್ʼ ಚಿತ್ರತಂಡ ಪ್ರೇಕ್ಷಕರಿಗೆ ವಿಶೇಷ ಆಫರ್ ವೊಂದನ್ನು ಘೋಷಿಸಿದೆ.
ಇತ್ತೀಚೆಗಷ್ಟೇ ಅಟ್ಲಿ ನಿರ್ದೇಶನದ ʼಜವಾನ್ʼ ಸಿನಿಮಾ 1000 ಕೋಟಿ ಕ್ಲಬ್ ಸೇರಿದೆ. ಆ ಮೂಲಕ ʼಪಠಾಣ್ʼ ಬಳಿಕ ಇದೇ ವರ್ಷ ಮತ್ತೊಂದು ದೊಡ್ಡ ಹಿಟ್ ಕೊಟ್ಟಿದ್ದಾರೆ. ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ 576.23 ಕೋಟಿ ರೂ.ಗಳಿಸಿದೆ. ವರ್ಲ್ಡ್ ವೈಡ್ ಸೇರಿ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನು ಕೂಡ ʼಜವಾನ್ʼ ವಿಜಯ ಯಾತ್ರೆ ಮುಂದುವರೆದಿದೆ.
ಬ್ಲಾಕ್ ಬಸ್ಟರ್ ಸಕ್ಸಸ್ ಆದ ಬೆನ್ನಲ್ಲೇ ಸಿನಿಮಾ ತಂಡ ʼಬೈ1 ಗೆಟ್ 1 ಫ್ರೀʼ ಟಿಕೆಟ್ ಆಫರ್ ನ್ನು ಘೋಷಿಸಿದೆ. ಈ ಬಗ್ಗೆ ಟ್ವಿಟರ್ (ಎಕ್ಸ್) ನಲ್ಲಿ ಬರೆದುಕೊಂಡಿರುವ ಶಾರುಖ್ ಖಾನ್ “ಅಣ್ಣ – ತಂಗಿ, ಶತ್ರುವಿಗೆ, ಸ್ನೇಹಿತರಿಗೆ ಹಾಗೂ ಮುಖ್ಯವಾಗಿ ನಿಮ್ಮನ್ನು ಪ್ರೀತಿಸುವವರಿಗೆ ʼಜವಾನ್ʼ (ಸೆ.28 ರಂದು) ತೋರಿಸಿ. ದೊಡ್ಡಪ್ಪ – ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಮಾಮ – ಮಾಮಿ ಒಟ್ಟಿನಲ್ಲಿ ಎಲ್ಲ ಕುಟುಂಬದವರಿಗೆ ಒಂದು ಟಿಕೆಟ್ ಕೊಂಡರೆ ಒಂದು ಟಿಕೆಟ್ ಫ್ರೀ. ಕೇವಲ 1 ಟಿಕೆಟ್ ಖರೀದಿಸಿ ಒಂದು ಟಿಕೆಟ್ ಫ್ರೀ ಪಡೆದು, ಇಡೀ ಕುಟುಂಬದೊಂದಿಗೆ ಮನರಂಜನೆ ಅನುಭವಿಸಿ” ಎಂದು ಶಾರುಖ್ ಟ್ವೀಟ್ ಮಾಡಿದ್ದಾರೆ.
ಇಂಟರ್ ನೆಟ್ ನಲ್ಲಿ( ಬುಕ್ ಮೈ ಶೋ, ಪೇಟಿಎಂ ಮೂವೀಸ್, ಪಿವಿಆರ್ ಐನಾಕ್ಸ್..) ಮೂಲಕ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಈ ಆಫರ್ ದೊರೆಯಲಿದೆ. ಗುರುವಾರ, ಶುಕ್ರವಾರ ಹಾಗೂ ಶನಿವಾರ ಟಿಕೆಟ್ ಬುಕ್ ಮಾಡಬೇಕೆಂದು ಚಿತ್ರತಂಡ ಪೋಸ್ಟರ್ ನಲ್ಲಿ ಹೇಳಿದೆ.
‘ಜವಾನ್’ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ವಿಜಯ್ ಸೇತುಪತಿ, ನಯನತಾರಾ, ಸನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Bhai ko, behen ko…
Dushman ko, Yaar ko…
And of course, apne Pyaar ko…
Kal Jawan dikhaaiyega!Chacha-Chachi, Phoopha-Phoophi, Maama-Maami…
Yaani Poore Parivaar ko.
Sab ke liye ek ke saath ek free ticket!!!Toh kal se… Parivaar, yaar aur pyaar… Just Buy 1 ticket and get the… pic.twitter.com/Qr9gI4ihcO
— Shah Rukh Khan (@iamsrk) September 27, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.