

Team Udayavani, Aug 17, 2024, 9:34 PM IST
ನವದೆಹಲಿ: ದಿನದಲ್ಲಿ ಒಂದೇ ಬಾರಿ ಉಟ ಮಾಡುತ್ತೇನೆ ಎಂದು ಬಾಲಿವುಡ್ ದಿಗ್ಗಜ ನಟ ಶಾರುಖ್ ಖಾನ್ ಹೇಳಿದ್ದಾರೆ.
ಶಾರುಖ್ ಅವರು ದಿ ಗಾರ್ಡಿಯನ್‌ಗೆ(The Guardian)ಗೆ ನೀಡಿದ ಸಂದರ್ಶನದಲ್ಲಿ ‘ದಿನಕ್ಕೆ ಒಂದು ಊಟವನ್ನು ಮಾತ್ರ ಮಾಡುತ್ತೇನೆ. ಇದು ಯಾವುದೇ ಪಥ್ಯಕ್ಕಾಗಿ ಅಲ್ಲ, ಬದಲಿಗೆ ಇದು ನನ್ನ ಆಯ್ಕೆ’ ಎಂದಿದ್ದಾರೆ.
ಮುಂಜಾನೆ ವರೆಗೂ ಎಚ್ಚರ ಇರುವ ಬಗ್ಗೆ ಹೇಳಿಕೊಂಡಿದ್ದ ಬಾಲಿವುಡ್ ನಟ, ಈಗ ಆಹಾರ ಪದ್ಧತಿ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ದಿನಚರಿ ಬಗ್ಗೆ ಹೇಳಿರುವ ಶಾರುಖ್ ಖಾನ್, “ನಿತ್ಯ ನಾನು ಬೆಳಗ್ಗೆ 5 ಗಂಟೆಗೆ ಮಲಗುತ್ತೇನೆ. ಮಾರ್ಕ್ ವಾಲ್ಬರ್ಗ್ (American actor) ಎದ್ದಾಗ, ನಾನು ಮಲಗಲು ಹೋಗುತ್ತೇನೆ. ಶೂಟಿಂಗ್ ವೇಳೆ ಒಂಬತ್ತು ಅಥವಾ 10 ಗಂಟೆಗೆ ಎಚ್ಚರಗೊಳ್ಳುತ್ತೇನೆ. ಆದರೆ ನಾನು ರಾತ್ರಿ 2 ಗಂಟೆಗೆ ಮನೆಗೆ ಬಂದು ಸ್ನಾನ ಮಾಡಿ ಮಲಗುವ ಮೊದಲು ವ್ಯಾಯಾಮ ಮಾಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.
55 ರ ಹರೆಯದ ನಟ ‘ಚಿತ್ರರಂಗಕ್ಕೆ ಪ್ರವೇಶಿಸುವ ವೇಳೆ “ಕ್ರೀಡಾಪಟು” ಆಗಬೇಕೆಂದುಕೊಂಡಿದ್ದೆ. ನಟನೆಯ ಆರಂಭದ ದಿನಗಳಲ್ಲಿ ಆಕ್ಷನ್ ಹೀರೋ ಆಗುವ ಕನಸನ್ನು ಸಹ ಹೊಂದಿದ್ದೆ. ಚಿತ್ರರಂಗಕ್ಕೆ ಪ್ರವೇಶಿಸುವ ವೇಳೆ ನಾನು ಅತ್ಲೀಟ್ ಆಗಿದ್ದೆ. ನನ್ನ ಜೀವನದ ಕನಸು ಸಿಕ್ಸ್ ಪ್ಯಾಕ್ ಹೊಂದುವುದು, ಬಿಳಿಯ ಬಟ್ಟೆಗಳನ್ನು ಧರಿಸುವುದು, ಪಕ್ಕದಲ್ಲಿ ಯುವತಿಯ ಮೇಲೆ ನನ್ನ ತೋಳಿಟ್ಟು ಕುಳಿತುಕೊಳ್ಳುವುದು, ನನ್ನ ಮುಖದ ಮೇಲೆ ರಕ್ತ, ಕೈಯಲ್ಲಿ ಗನ್ ಇರಬೇಕು. ಕೋಣೆಗೆ ಪ್ರವೇಶಿಸಿದಾಗ ನೀವು ಯಾರು ಎಂದು ಯಾರೋ ಹೇಳುತ್ತಾರೆ, ಆಗ ನಾನು ಅವರನ್ನು ಶೂಟ್ ಮಾಡುವುದು ನನ್ನ ಕನಸಾಗಿತ್ತು”ಎಂದು ಹೇಳಿದ್ದಾರೆ.
Bollywood: ʼಛಾವಾʼ ಕ್ರೇಜ್.. ಸಂಭಾಜಿ ಮಹಾರಾಜನಂತೆ ಕುದುರೆ ಏರಿ ಥಿಯೇಟರ್‌ಗೆ ಬಂದ ವ್ಯಕ್ತಿ
Bollywood: ರಿಷಬ್ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್ ಅಪ್ಡೇಟ್
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Bollywood: ರೀ-ರಿಲೀಸ್ ಗಳಿಕೆಯಲ್ಲಿ ʼತುಂಬಾಡ್ʼ ಮೀರಿಸಿದ ʼಸನಮ್ ತೇರಿ ಕಸಮ್ʼ
Karan Johar : ರಾಜಮೌಳಿ ಸಿನಿಮಾದಲ್ಲಿ ಲಾಜಿಕ್ ಇರಲ್ಲ – ನಿರ್ಮಾಪಕ ಕರಣ್ ಜೋಹರ್
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.