

Team Udayavani, Nov 7, 2024, 1:05 PM IST
ಮುಂಬಯಿ: ಸಿನಿಮಾ ಮಂದಿಗೆ ಅಪಾರ ಅಭಿಮಾನಿಗಳಿರುತ್ತಾರೆ. ತನ್ನ ನೆಚ್ಚಿನ ನಟ, ನಟಿಯರನ್ನು ಭೇಟಿಯಾಗಿ ಅವರೊಂದಿಗೆ ಕನಿಷ್ಠ ಒಂದು ಫೋಟೋವನ್ನಾದರೂ ಕ್ಲಿಕ್ಕಿಸಿಕೊಳ್ಳಬೇಕೆನ್ನುವ ಆಸೆ ಬಹುತೇಕ ಅಭಿಮಾನಿಗಳಿಗಿರುತ್ತದೆ.
ರೊಮ್ಯಾನ್ಸ್ ಕಿಂಗ್ ಶಾರುಖ್ ಖಾನ್ (Shahrukh Khan) ತನ್ನ ಮನೆಯ ಹೊರಗೆ ನಿಂತಿದ್ದ ಅಭಿಮಾನಿಯೊಬ್ಬರನ್ನು ಭೇಟಿ ಆಗಿ ಅವರನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸಿ ಫೋಟೋ ಕ್ಲಿಕ್ಕಿಸಿ ಖುಷಿ ಆಗಿಸಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಾರ್ಖಂಡ್ ಮೂಲದ ಶೇರ್ ಮೊಹಮ್ಮದ್ ಎಂಬಾತ ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ. ಶಾರುಖ್ ಅವರನ್ನು ಭೇಟಿ ಆಗಲು ಅವರ ನಿವಾಸ ʼಮನ್ನತ್ʼ ಎದುರು ಕಳೆದ 95 ದಿನಗಳಿಂದ ಶೇರ್ ಮೊಹಮ್ಮದ್ ಕಾಯುತ್ತಿದ್ದರು. ಆದರೆ ಶಾರುಖ್ ಖಾನ್ ಅವರನ್ನು ಭೇಟಿ ಆಗಲು ಸಾಧ್ಯವಾಗಿರಲಿಲ್ಲ. ನವೆಂಬರ್ 2 ರಂದು ಶಾರುಖ್ ಖಾನ್ ತಮ್ಮ 59ನೇ ಹುಟ್ಟುಹಬ್ಬದ ದಿನದಂದು ಶೇರ್ ಮೊಹಮ್ಮದ್ ನನ್ನು ತಮ್ಮ ಮನೆಯೊಳಗೆ ಕರೆಸಿ ಅವನೊಂದಿಗೆ ಮಾತನಾಡಿ ಊಟ, ಉಪಚಾರವನ್ನು ಮಾಡಿ ಕೈಕುಲುಕಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಇದು ಅಭಿಮಾನಿ ಆಗಿರುವ ಶೇರ್ ಅವರ ಕನಸು ನನಸಾಗುವಂತೆ ಮಾಡಿದೆ. ಶಾರುಖ್ ಬರೀ ಭೇಟಿ ಮಾತ್ರ ಆಗದೆ “ಶಾರುಖ್ ನನಗೆ 10,000 ರೂಪಾಯಿಗಳನ್ನು ನೀಡಿದರು. ಅವರು 4,700 ರೂಪಾಯಿಯ ಪೆಟ್ರೋಲ್ ನನ್ನ ವಾಹನಕ್ಕೆ ಹಾಕಿದ್ದಾರೆ” ಎಂದು ವಿಡಿಯೋವೊಂದರಲ್ಲಿ ಶೇರ್ ಅವರು ಖುಷಿಯ ಕ್ಷಣವನ್ನು ಹಂಚಿಕೊಂಡಿದ್ದಾರೆ.
View this post on Instagram
“ನನಗೆ ಕುಡಿಯಲು ನೀರು, ತಿನ್ನಲು ಆಹಾರವನ್ನು ಕೊಟ್ಟು ಅತ್ಯಂತ ಗೌರವದಿಂದ ನಡೆಸಿಕೊಂಡರು. ಅವರು ತುಂಬಾ ಒಳ್ಳೆಯವರು” ಎಂದು ಅಭಿಮಾನಿ ಹೇಳಿದ್ದಾರೆ.
ಶಾರುಖ್ ಅವರ ಈ ವ್ಯಕ್ತಿತ್ವವನ್ನು ನೋಡಿ ಫ್ಯಾನ್ಸ್ ಅವರನ್ನು ಕೊಂಡಾಡಿದ್ದಾರೆ. ಸದ್ಯ ಅಭಿಮಾನಿಯ ಈ ಫೋಟೋ, ವಿಡಿಯೋ ವೈರಲ್ ಆಗುತ್ತಿದೆ.
Bollywood: ʼಛಾವಾʼ ಕ್ರೇಜ್.. ಸಂಭಾಜಿ ಮಹಾರಾಜನಂತೆ ಕುದುರೆ ಏರಿ ಥಿಯೇಟರ್‌ಗೆ ಬಂದ ವ್ಯಕ್ತಿ
Bollywood: ರಿಷಬ್ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್ ಅಪ್ಡೇಟ್
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Bollywood: ರೀ-ರಿಲೀಸ್ ಗಳಿಕೆಯಲ್ಲಿ ʼತುಂಬಾಡ್ʼ ಮೀರಿಸಿದ ʼಸನಮ್ ತೇರಿ ಕಸಮ್ʼ
Karan Johar : ರಾಜಮೌಳಿ ಸಿನಿಮಾದಲ್ಲಿ ಲಾಜಿಕ್ ಇರಲ್ಲ – ನಿರ್ಮಾಪಕ ಕರಣ್ ಜೋಹರ್
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.