![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Sep 10, 2023, 1:14 PM IST
ಮುಂಬಯಿ: ಕಿಂಗ್ ಖಾನ್ ಶಾರುಖ್ ಖಾನ್ ಅವರ ʼಜವಾನ್ʼ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಬಹುತೇಕ ಕಡೆ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ರಿಲೀಸ್ ಆದ ಮೂರೇ ದಿನದಲ್ಲಿ ಜವಾನ್ ವರ್ಲ್ಡ್ ವೈಡ್ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದೆ. ಅಟ್ಲಿ ಹಾಗೂ ಶಾರುಖ್ ಕಾಂಬಿನೇಷನ್ ನ ʼಜವಾನ್ʼ ಕಿಕ್ ಎಲ್ಲೆಡೆ ಜೋರಾಗಿದೆ. ಥಿಯೇಟರ್ ಮುಂದೆ ಸಿನಿಮಾ ನೋಡಲು ಜನ ಮುಗಿಬಿದ್ದಿದ್ದಾರೆ. ವೀಕೆಂಡ್ ನಲ್ಲಿ ʼಜವಾನ್ʼ ಅಬ್ಬರ ಮತ್ತಷ್ಟು ಹೆಚ್ಚಾಗಿದೆ.
ಟ್ವಿಟರ್(ಎಕ್ಸ್) ನಲ್ಲಿ ಶಾರುಖ್ ಖಾನ್ ಆ್ಯಕ್ಟಿವ್ ಆಗಿರುತ್ತಾರೆ. ಆಗಾಗ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಅಭಿಮಾನಿಯೊಬ್ಬರು ವಿಜಯ್ ಸೇತುಪತಿ ಅವರ ಬಗ್ಗೆ ಹೇಳಿದಾಗ ಶಾರುಖ್ ಖಾನ್ ಕೊಟ್ಟ ರಿಪ್ಲೈ ವೈರಲ್ ಆಗಿದೆ.
ಟ್ವಿಟರ್ ಬಳಕೆದಾರರೊಬ್ಬರು “ಸರ್, ಕಾಳಿ(ಸಿನಿಮಾದಲ್ಲಿ ಸೇತುಪತಿ ಪಾತ್ರದ ಹೆಸರು) ಜೊತೆ ಯಾಕೆ ಒಪ್ಪಂದ ಮಾಡಿಕೊಳ್ಳುತ್ತಿಲ್ಲ? ನಾನು ಸೇತುಪತಿ ಅವರ ದೊಡ್ಡ ಅಭಿಮಾನಿ” ಎಂದು ಶಾರುಖ್ ಬಳಿ ಕೇಳಿದ್ದಾರೆ.
ಇದಕ್ಕೆ ಶಾರುಖ್ ಖಾನ್ “ನಾನು ಕೂಡ ಸೇತುಪತಿ ಅವರ ದೊಡ್ಡ ಅಭಿಮಾನಿಯೇ. ಆದರೆ ನಾನು ಈಗಾಗಲೇ ಕಾಳಿಯ ಕಪ್ಪು ಹಣವನ್ನು ತೆಗೆದುಕೊಂಡಿದ್ದೇನೆ, ಈಗ ನಾನು ಇತರ ಜನರ ಸ್ವಿಸ್ ಬ್ಯಾಂಕ್‌ಗಳಿಂದ ತೆಗೆದುಕೊಳ್ಳುತ್ತೇನೆ” ಎಂದು ರಿಪ್ಲೈ ಕೊಟ್ಟಿದ್ದಾರೆ.
ಈ ಪ್ರತಿಕ್ರಿಯೆಯನ್ನು ಶಾರುಖ್ ಖಾನ್ ಅವರು ʼಜವಾನ್-2ʼ ಕಥೆಯ ಬಗ್ಗೆ ಸುಳಿವು ಕೊಟ್ಟಿದ್ದಾರೆ ಎಂದು ನೆಟ್ಟಿಗರು ಊಹಿಸಿಕೊಂಡಿದ್ದಾರೆ. ʼಜವಾನ್-2ʼ ಬರ್ತಾ ಇದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಶಾರುಖ್ ಖಾನ್ ದ್ವಿಪಾತ್ರದಲ್ಲಿ ಮಾಜಿ ಕಮಾಂಡೋ ವಿಕ್ರಮ್ ರಾಥೋರ್ ಮತ್ತು ಅವರ ಮಗ ಆಜಾದ್ ರಾಥೋರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ನಟಿಸಿದ್ದಾರೆ, ಇದರಲ್ಲಿ ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾ ಮಣಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು, ಸುನಿಲ್ ಗ್ರೋವರ್, ರಿದ್ಧಿ ಡೋಗ್ರಾ ಮತ್ತು ಇತರ ಅನೇಕರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
I am a big fan of Vijay sir too… par Kaali ka kaala dhan toh le liya ab dekho doosron ke bhi Swiss banks se lekar aata hoon… Buss visa ka hi wait kar raha hoon. Ha ha!!! https://t.co/bgrzn77VVD
— Shah Rukh Khan (@iamsrk) September 9, 2023
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.