![Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣUdupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ](https://www.udayavani.com/wp-content/uploads/2025/02/ga-1-415x216.jpg)
![Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣUdupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ](https://www.udayavani.com/wp-content/uploads/2025/02/ga-1-415x216.jpg)
Team Udayavani, Jul 15, 2024, 6:38 PM IST
ಮುಂಬಯಿ: ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟು ಬಾಲಿವುಡ್ ಗ್ರ್ಯಾಂಡ್ ಆಗಿಯೇ ಕಂಬ್ಯಾಕ್ ಮಾಡಿರುವ ಶಾರುಖ್ ಖಾನ್ (Shah Rukh Khan) ಅವರ ಮುಂದಿನ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.
‘ಪಠಾಣ್ʼ, ʼಜವಾನ್ʼ ಹಾಗೂ ʼಡಂಕಿʼ ಸಿನಿಮಾದ ಬಳಿಕ ಶಾರುಖ್ ಖಾನ್ ಮತ್ತೊಂದು ಭರಪೂರ ಆ್ಯಕ್ಷನ್ ಇರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʼಕಹಾನಿʼ ಖ್ಯಾತಿಯ ಸುಜೋಯ್ ಘೋಷ್ (Sujoy Ghosh) ನಿರ್ದೇಶನದ ʼಕಿಂಗ್ʼ ಸಿನಿಮಾದಲ್ಲಿ ಶಾರುಖ್ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಈ ಸಿನಿಮಾದಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ (Suhana Khan) ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವಿಚಾರದಿಂದ ʼಕಿಂಗ್ʼ (King Movie) ಸೆಟ್ಟೇರುವ ಮುನ್ನವೇ ಸುದ್ದಿಯಾಗಿದೆ.
ʼಕಿಂಗ್ʼ ಬಗ್ಗೆ ಲೇಟೆಸ್ಟ್ ಅಪ್ಡೇಟ್ ಹೊರಬಿದ್ದಿದೆ. ಸಿನಿಮಾದಲ್ಲಿ ಶಾರುಖ್ ಖಾನ್ ಅವರಿಗೆ ಎದುರಾಳಿಯಾಗಿ, ನೆಗೆಟಿವ್ ರೋಲ್ ನಲ್ಲಿ ಅಭಿಷೇಕ್ ಬಚ್ಚನ್ (Abhishek Bachchan) ಅವರು ಅಬ್ಬರಿಸಲಿದ್ದಾರೆ ಎಂದು ʼಪೀಪಿಂಗ್ ಮೂನ್ʼ ವರದಿ ಮಾಡಿದೆ.
ಅಭಿಷೇಕ್ ಬಚ್ಚನ್ ಅವರು ಔಟ್ & ಔಟ್ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಹಾನಾ ಖಾನ್ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ವರದಿ ತಿಳಿಸಿದೆ.
ಅಭಿಷೇಕ್ ಹಾಗೂ ಶಾರುಖ್ ಅವರು ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ʼಕಭಿ ಅಲ್ವಿದಾ ನಾ ಕೆಹನಾʼ, ʼಹ್ಯಾಪಿ ನ್ಯೂ ಇಯರ್ʼ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು.
ಸದ್ಯ ಪ್ರೀ- ಪ್ರೊಡಕ್ಷನ್ ಹಂತದಲ್ಲಿರುವ ʼಕಿಂಗ್ʼ ಈ ವರ್ಷದ ಅಕ್ಟೋಬರ್ – ನವೆಂಬರ್ ನಲ್ಲಿ ಸೆಟ್ಟೇರುವ ಸಾಧ್ಯತೆಯಿದೆ. 2025ರ ಅಂತ್ಯದಲ್ಲಿ ಅಥವಾ 2026ರ ಆರಂಭದಲ್ಲಿ ಚಿತ್ರ ತೆರೆಕಾಣುವ ಸಾಧ್ಯತೆಯಿದೆ.
ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಹಯೋಗದೊಂದಿಗೆ ಸಿದ್ಧಾರ್ಥ್ ಆನಂದ್ ಅವರ ಮಾರ್ಫ್ಲಿಕ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ.
Bollywood: ʼಛಾವಾʼ ಕ್ರೇಜ್.. ಸಂಭಾಜಿ ಮಹಾರಾಜನಂತೆ ಕುದುರೆ ಏರಿ ಥಿಯೇಟರ್‌ಗೆ ಬಂದ ವ್ಯಕ್ತಿ
Bollywood: ರಿಷಬ್ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್ ಅಪ್ಡೇಟ್
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Bollywood: ರೀ-ರಿಲೀಸ್ ಗಳಿಕೆಯಲ್ಲಿ ʼತುಂಬಾಡ್ʼ ಮೀರಿಸಿದ ʼಸನಮ್ ತೇರಿ ಕಸಮ್ʼ
Karan Johar : ರಾಜಮೌಳಿ ಸಿನಿಮಾದಲ್ಲಿ ಲಾಜಿಕ್ ಇರಲ್ಲ – ನಿರ್ಮಾಪಕ ಕರಣ್ ಜೋಹರ್
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.