ಜಪಾನ್‌ನಲ್ಲಿ ರಿಲೀಸ್ ಆಗಲಿದೆ ʼಜವಾನ್ʼ: 4 ತಿಂಗಳ ಮೊದಲೇ ಅಡ್ವಾನ್ಸ್ ಬುಕಿಂಗ್ ಶುರು
Team Udayavani, Jul 3, 2024, 3:22 PM IST
ಮುಂಬಯಿ: ಶಾರುಖ್ ಖಾನ್ (Shah Rukh Khan) – ಅಟ್ಲಿ ಕುಮಾರ್ ಅವರ ʼಜವಾನ್ʼ (Jawan) ಸಿನಿಮಾ ಥಿಯೇಟರ್ ನಲ್ಲಿ ಮೋಡಿ ಮಾಡಿದ್ದು ಗೊತ್ತೇ ಇದೆ. ʼಪಠಾಣ್ʼ ,ʼಜವಾನ್ʼ ಹಾಗೂ ʼಡಂಕಿʼ ಶಾರುಖ್ ಅವರಿಗೆ ಕಂಬ್ಯಾಕ್ ಮಾಡಿಕೊಟ್ಟ ಸಿನಿಮಾಗಳೆಂದರೆ ತಪ್ಪಾಗದು.
2023ರ ಸೆ.7 ರಂದು ʼಜವಾನ್ʼ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಬಾಲಿವುಡ್ ನಲ್ಲಿ ಆ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ʼಜವಾನ್ʼ ಹೊರಹೊಮ್ಮಿತ್ತು. ಇದೀಗ ಮತ್ತೆ ಶಾರುಖ್ ಖಾನ್ ʼಜವಾನ್ʼ ಆಗಿ ಬಿಗ್ ಸ್ಕ್ರೀನ್ ನಲ್ಲಿ ಅಬ್ಬರಿಸಲಿದ್ದಾರೆ.
ಭಾರತದ ಸಿನಿಮಾಗಳಿಗೆ ವಿದೇಶದಲ್ಲೂ ಪ್ರೇಕ್ಷಕರಿದ್ದಾರೆ. ಜಪಾನ್ ನಲ್ಲಿ ಈ ಹಿಂದೆ ‘ಆರ್ ಆರ್ ಆರ್ʼ ಚಿತ್ರ ಜಪಾನ್ ನಲ್ಲಿ ರಿಲೀಸ್ ಆಗಿತ್ತು. ಇದೀಗ ಶಾರುಖ್ ಅವರ ʼಜವಾನ್ʼ ಚಿತ್ರ ಜಪಾನ್ ನಲ್ಲಿ ರಿಲೀಸ್ ಆಗಲಿದೆ.
ಇದನ್ನೂ ಓದಿ: SSMB29: ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್
ಈ ವರ್ಷದ ನವೆಂಬರ್ 29ರಂದು ʼಜವಾನ್ʼ ಜಪಾನ್ ನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಜಪಾನ್ ನಲ್ಲಿ ಭಾರತೀಯ ಸಿನಿಮಾಗಳನ್ನು ವಿತರಣೆ ಮಾಡಲು ಖ್ಯಾತಿ ಆಗಿರುವ ʼಟ್ವಿನ್ʼ ಜಪಾನ್ ನಲ್ಲಿ ʼಜವಾನ್ʼ ಸಿನಿಮಾವನ್ನು ವಿತರಣೆ ಮಾಡಲಿದೆ.
ಇದೇ ಜು.5 ರಿಂದ ಅಂದರೆ ಸಿನಿಮಾ ರಿಲೀಸ್ ಆಗುವ ನಾಲ್ಕು ತಿಂಗಳ ಮೊದಲೇ ಅಡ್ವಾನ್ಸ್ ಬುಕಿಂಗ್ ಆರಂಭಗೊಳ್ಳಲಿದೆ. ಮುಂಗಡವಾಗಿ ಟಿಕೆಟ್ ಖರೀದಿಸುವವರು ʼಚಲೇಯʼ ಹಾಡಿನ ಶಾರುಖ್ ಖಾನ್ ಅವರ ಪೋಸ್ಟರ್‌ಗಳನ್ನು ಸ್ವೀಕರಿಸಲಿದ್ದಾರೆ.
300ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ʼಜವಾನ್ʼ ವರ್ಲ್ಡ್ ವೈಡ್ 1000 ಕೋಟಿ ರೂ.ಗಳಿಕೆ ಮಾಡಿತ್ತು.
ಚಿತ್ರದಲ್ಲಿ ಶಾರುಖ್ ಜೊತೆ ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ನಯನತಾರಾ, ಸುನಿಲ್ ಗ್ರೋವರ್, ರಿಧಿ ಡೋಗ್ರಾ, ಐಜಾಜ್ ಖಾನ್, ಲೆಹರ್ ಖಾನ್, ಆಲಿಯಾ ಖುರೇಷಿ, ಸಂಜೀತಾ ಭಟ್ಟಾಚಾರ್ಯ ಮುಂತಾದವರು ನಟಿಸಿದ್ದಾರೆ.
Bollywood Industry Hit & Highest Grosser of 2023 #Jawan to release in Japan on 29th November 2024. pic.twitter.com/LXXz2PVqZq
— Nishit Shaw (@NishitShawHere) July 3, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.