

Team Udayavani, May 23, 2024, 7:25 PM IST
ಅಹಮದಾಬಾದ್: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ಆದ ಒಂದು ದಿನದ ನಂತರ ಕ್ಷೇಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರ ಮ್ಯಾನೇಜರ್ ಪೂಜಾ ದಾದ್ಲಾನಿ ಗುರುವಾರ ಹೇಳಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಮ್ಮ ತಂಡ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯದಲ್ಲಿ ಭಾಗವಹಿಸಿದ್ದ ಶಾರುಖ್ ಅವರನ್ನು ಬುಧವಾರ ಹೀಟ್ ಸ್ಟ್ರೋಕ್‌ನಿಂದಾಗಿ ಅಹಮದಾಬಾದ್‌ನ ಮಲ್ಟಿ-ಸ್ಪೆಷಾಲಿಟಿ ಕೆ ಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಖಾನ್ ಅವರ ಎಲ್ಲಾ ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗಾಗಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಮ್ಮ ಪ್ರೀತಿ, ಪ್ರಾರ್ಥನೆ ಮತ್ತು ಕಾಳಜಿಗೆ ಧನ್ಯವಾದಗಳು’ ಎಂದು ದಾದ್ಲಾನಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಹಮದಾಬಾದ್‌ನಲ್ಲಿ ಮಂಗಳವಾರ ಗರಿಷ್ಠ ತಾಪಮಾನ 45.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಬುಧವಾರ 45.9 ಡಿಗ್ರಿಗೆ ಏರಿಕೆಯಾಗಿತ್ತು. ಕ್ವಾಲಿಫೈಯರ್ 1 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ಎಂಟು ವಿಕೆಟ್ ಗಳ ಭರ್ಜರಿ ಜಯದೊಂದಿಗೆ ನಾಲ್ಕನೇ ಐಪಿಎಲ್ ಫೈನಲ್ ಪ್ರವೇಶಿಸಿತ್ತು. ತಂಡದ ವಿಜಯೋತ್ಸವವನ್ನು ಮಕ್ಕಳಾದ ಸುಹಾನಾ ಖಾನ್ ಮತ್ತು ಅಬ್‌ರಾಮ್ ಖಾನ್ ಅವರ ಜತೆಯಲ್ಲಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಮತ್ತು ಆಟಗಾರರಿಗೆ ಶುಭಾಶಯ ಕೋರಿ ಸಂಭ್ರಮಿಸಿದ್ದರು.
Bollywood: ʼಛಾವಾʼ ಕ್ರೇಜ್.. ಸಂಭಾಜಿ ಮಹಾರಾಜನಂತೆ ಕುದುರೆ ಏರಿ ಥಿಯೇಟರ್‌ಗೆ ಬಂದ ವ್ಯಕ್ತಿ
Bollywood: ರಿಷಬ್ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್ ಅಪ್ಡೇಟ್
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Bollywood: ರೀ-ರಿಲೀಸ್ ಗಳಿಕೆಯಲ್ಲಿ ʼತುಂಬಾಡ್ʼ ಮೀರಿಸಿದ ʼಸನಮ್ ತೇರಿ ಕಸಮ್ʼ
Karan Johar : ರಾಜಮೌಳಿ ಸಿನಿಮಾದಲ್ಲಿ ಲಾಜಿಕ್ ಇರಲ್ಲ – ನಿರ್ಮಾಪಕ ಕರಣ್ ಜೋಹರ್
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.