ದುಬಾರಿ ವಾಚ್ ಸಾಗಾಟ: ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ಗಂಟೆಗಳ ಕಾಲ ವಿಚಾರಣೆ
Team Udayavani, Nov 12, 2022, 4:40 PM IST
ಮುಂಬೈ: ಕಳೆದ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ನಟ ಶಾರುಖ್ ಖಾನ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದ ಘಟನೆ ನಡೆದಿದೆ.
ಕೆಲವು ದುಬಾರಿ ವಾಚ್ ಗಳ ಬಗ್ಗೆ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಶಾರುಖ್ ತಂಡವನ್ನು ಗಂಟೆಗಳ ಕಾಲ ತಡೆದರು. ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡುವ ಮೊದಲು ಅವರು 6.83 ಲಕ್ಷ ರೂ ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕಾಗಿತ್ತು ಎಂದು ಮೂಲಗಳು ತಿಳಿಸಿವೆ.
ಶಾರ್ಜಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಶಾರುಖ್ ಖಾನ್ ಹಿಂತಿರುಗುತ್ತಿದ್ದರು. ಖಾಸಗಿ ಜೆಟ್ ನಲ್ಲಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ಬಂದಿಳಿದಿದ್ದರು.
ಶಾರುಖ್ ಖಾನ್ ಮತ್ತು ಅವರ ಜೊತೆಗಿದ್ದವರು ಟರ್ಮಿನಲ್ ನಿಂದ ಹೊರಡುವಾಗ ಲಗೇಜ್ ನಲ್ಲಿ ಐಷಾರಾಮಿ ಕೈಗಡಿಯಾರಗಳು ಕಂಡುಬಂದಿವೆ.
ಇದನ್ನೂ ಓದಿ:ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಎರಡನೇ ಸ್ಥಾನದಲ್ಲಿ ಕರ್ನಾಟಕ: ಸಚಿವ ಸುಧಾಕರ್
ವರದಿಗಳ ಪ್ರಕಾರ, ಶಾರುಖ್ ಮತ್ತು ಅವರ ಮ್ಯಾನೇಜರ್ ಅವರನ್ನು ಅಧಿಕಾರಿಗಳು ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ಬಳಿಕ ಹೊರಡಲು ಅನುಮತಿ ನೀಡಿದ್ದರು. ಆದರೆ ಅವರ ಅಂಗರಕ್ಷಕ ಸೇರಿದಂತೆ ಕೆಲವು ಸದಸ್ಯರನ್ನು ಇಡೀ ರಾತ್ರಿ ವಿಚಾರಣೆಗಾಗಿ ಇರಿಸಲಾಗಿತ್ತು. ಅವರನ್ನು ಹೊರಡಲು ಬೆಳಿಗ್ಗೆ ಅನುಮತಿ ನೀಡಲಾಯಿತು.
ಸುಮಾರು 18 ಲಕ್ಷ ರೂ ಮೌಲ್ಯದ ಆರು ದುಬಾರಿ ವಾಚ್ ಗಳ ಪ್ಯಾಕೇಜಿಂಗ್ ಗಳು ಶಾರುಖ್ ಮತ್ತು ಅವರ ಜೊತೆಯಲ್ಲಿದ್ದವರ ಬ್ಯಾಗ್ ನಲ್ಲಿ ಕಂಡುಬಂದಿವೆ ಎಂದು ವರದಿಗಳು ತಿಳಿಸಿವೆ.
ಶಾರುಖ್ ಖಾನ್ ಅವರು ನಿನ್ನೆ ಶಾರ್ಜಾ ಇಂಟರ್ ನ್ಯಾಶನಲ್ ಬುಕ್ ಫೇರ್ 2022 ರಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Suniel Shetty: ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಅವಘಡ; ಸುನಿಲ್ ಶೆಟ್ಟಿಗೆ ಗಂಭೀರ ಗಾಯ
Threat Call: ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೂ ಜೀವ ಬೆದರಿಕೆ
SRK: ಶಾರುಖ್ ಭೇಟಿಗೆ 95 ದಿನ ಮನೆ ಹೊರಗೆ ಕಾದು ಕೂತ ಅಭಿಮಾನಿ; ನಟ ಕೊಟ್ಟ ಉಡುಗೊರೆ ಏನು?
BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್ ʼಛಾವಾʼ; ರಿಲೀಸ್ ಡೇಟ್ ಮುಂದೂಡಿಕೆ?
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.