Jawan ಬಿಡುಗಡೆಗೂ ಮುನ್ನ ವೈಷ್ಣೋ ದೇವಿ ದರ್ಶನ ಪಡೆದ ಶಾರುಖ್ ಖಾನ್
Team Udayavani, Aug 30, 2023, 4:36 PM IST
ಹೊಸದಿಲ್ಲಿ: ಶಾರುಖ್ ಖಾನ್ ಅವರ ಬಹುನಿರೀಕ್ಷಿತ ‘ಜವಾನ್’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು,ಇದಕ್ಕೂ ಮುನ್ನ ಬಾಲಿವುಡ್ ನ ಕಿಂಗ್ ಖಾನ್ ಜಮ್ಮುವಿನ ಕತ್ರಾದಲ್ಲಿರುವ ವೈಷ್ಣೋದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಚಿತ್ರ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕಂಡುಬಂದಂತೆ ಶಾರುಖ್ ಖಾನ್ ಬಿಳಿ ಬಣ್ಣದ ಟೀ ಶರ್ಟ್ ಮೇಲೆ ನೀಲಿ ಬಣ್ಣದ ಹೂಡಿ ಧರಿಸಿದ್ದಾರೆ. ಅವರು ಮುಖವನ್ನು ಹೂಡಿ ಕ್ಯಾಪ್ ಮತ್ತು ಮಾಸ್ಕ್ ನಿಂದ ಮುಚ್ಚಿಕೊಂಡಿದ್ದರು.ಸುತ್ತಲೂ ಸಾಕಷ್ಟು ಭದ್ರತಾ ಸಿಬಂದಿ ಇದ್ದರೂ ಸುತ್ತಮುತ್ತಲಿದ್ದ ಜನರು ಅವರನ್ನು ಗುರುತಿಸಲು ಪ್ರಯತ್ನಿಸಿದ್ದು,ಅನೇಕರು ಯಶಸ್ವಿಯೂ ಆಗಿದ್ದಾರೆ. ಶಾರುಖ್ ಮಂಗಳವಾರ ರಾತ್ರಿ ಮಾತಾ ವೈಷ್ಣೋ ದೇವಿಯ ದರ್ಶನಕ್ಕೆ ಬಂದಿದ್ದರು ಎಂದು ಹೇಳಲಾಗುತ್ತಿದೆ.
‘ಜವಾನ್’ ಚಿತ್ರ ಸೆ 7 ರಂದು ಬಿಡುಗಡೆಯಾಗಲಿದ್ದು, ನಯನತಾರಾ, ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ ಸೇರಿದಂತೆ ಹಲವು ತಾರೆಯರಿದ್ದಾರೆ. ಇದನ್ನು ದಕ್ಷಿಣದ ನಿರ್ದೇಶಕ ಅಟ್ಲಿ ಕುಮಾರ್ ನಿರ್ದೇಶಿಸಿದ್ದಾರೆ. ಶಾರುಖ್ ಅಭಿನಯದ ‘ಪಠಾಣ್’ ಚಿತ್ರ ಬಿಡುಗಡೆಯಾಗಿ ಭಾರೀ ಹಿಟ್ ಆಗಿರುವ ಬೆನ್ನಲ್ಲೇ ಈ ಚಿತ್ರ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.
ಶಾರುಖ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ವೈಷ್ಣೋದೇವಿಗೆ ಭೇಟಿ ನೀಡಿದ್ದರು ಮತ್ತು ಅದಕ್ಕೂ ಮೊದಲು ಅವರು ಉಮ್ರಾ ಯಾತ್ರೆಗೂ ಹೋಗಿದ್ದರು.
This is India’s biggest Movie star Shahrukh Khan visiting one of the most holy places for hindus.
SRK is a Muslim, has a Hindu wife and teaches his children the values of both Hinduism and Islam.
SRKs visit to Vaishno Devi was personal, he did not even bring Cameramen for PR,… pic.twitter.com/GaOupqBFUO
— Roshan Rai (@RoshanKrRaii) August 30, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.