Tollywood: ಪ್ಯಾನ್ ಇಂಡಿಯಾ ʼಕಣ್ಣಪ್ಪʼ ಸಿನಿಮಾದಲ್ಲಿ ಶಿವಣ್ಣ?; ಹೆಚ್ಚಾಯಿತು ಕುತೂಹಲ
Team Udayavani, Oct 12, 2023, 1:42 PM IST
ಹೈದರಾಬಾದ್: ಟಾಲಿವುಡ್ ನಟ ವಿಷ್ಣು ಮಂಚು ಅಭಿನಯದ ʼಕಣ್ಣಪ್ಪʼ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದು. ಸಿನಿಮಾದ ಮುಹೂರ್ತ ನಡೆದ ದಿನದಿಂದ ಒಂದಲ್ಲ ಒಂದು ಕಾರಣದಿಂದ ʼಕಣ್ಣಪ್ಪʼ ಸುದ್ದಿಯಾಗುತ್ತಿದೆ.
ವಿಷ್ಣು ಮಂಚು ಅವರ ಈ ಸಿನಿಮಾದಲ್ಲಿ ಬಹು ತಾರಾಂಗಣವಿರಲಿದೆ ಎನ್ನಲಾಗಿದೆ. ಅದರಂತೆ ಇದರಲ್ಲಿ ಮೊದಲ ಹೆಸರು ಕೇಳಿ ಬಂದಿರುವುದು ಡಾರ್ಲಿಂಗ್ ಪ್ರಭಾಸ್ ಅವರದು. ಡಾರ್ಲಿಂಗ್ ಪ್ರಭಾಸ್ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಪ್ರಭಾಸ್ ʼಶಿವʼನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ನಯನತಾರಾ ಪಾರ್ವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಇದೀಗ ʼಕಣ್ಣಪ್ಪʼತಂಡಕ್ಕೆ ಮತ್ತಿಬ್ಬರು ದಿಗ್ಗಜ ನಟರು ಎಂಟ್ರಿ ಆಗಲಿದ್ದಾರೆ. ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ. ಇದೀಗ ಅದು ಅಧಿಕೃತವಾಗಿದೆ ಎಂದು ವರದಿಯೊಂದು ತಿಳಿಸಿದೆ.
ಇದರ ಜೊತೆ ಸಿಕ್ಕಿರುವ ಮತ್ತೊಂದು ಅಪ್ಡೇಟ್ ಎಂದರೆ,ಈಗಾಗಲೇ ʼಜೈಲರ್ʼ ಮೂಲಕ ʼನರಸಿಂಹʼ ನಾಗಿ ಪ್ಯಾನ್ ಇಂಡಿಯಾದಲ್ಲಿ ಮಿಂಚಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ʼಕಣ್ಣಪ್ಪʼ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಶಿವರಾಜ್ ಕುಮಾರ್ ʼಕಣ್ಣಪ್ಪʼನ ಆಧಾರಿತ ʼಶಿವ ಮೆಚ್ಚಿದ ಕಣ್ಣಪ್ಪʼ ಸಿನಿಮಾದಲ್ಲಿ ನಟಿಸಿದ್ದರು.
ಇದೀಗ ಪ್ಯಾನ್ ಇಂಡಿಯಾ ʼಕಣ್ಣಪ್ಪʼ ನಲ್ಲಿ ಶಿವಣ್ಣ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
ಮುಕೇಶ್ ಸಿಂಗ್ ನಿರ್ದೇಶನದ ಈ ಚಿತ್ರಕ್ಕೆ ಪರುಚೂರಿ ಗೋಪಾಲಕೃಷ್ಣ, ಬುರ್ರಾ ಸಾಯಿ ಮಾಧವ್ ಮತ್ತು ತೋಟ ಪ್ರಾಸಾ ಕಥೆ ಬರೆದಿದ್ದಾರೆ. ಅವಾ ಎಂಟರ್ಟೈನ್ಮೆಂಟ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suniel Shetty: ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಅವಘಡ; ಸುನಿಲ್ ಶೆಟ್ಟಿಗೆ ಗಂಭೀರ ಗಾಯ
Threat Call: ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೂ ಜೀವ ಬೆದರಿಕೆ
SRK: ಶಾರುಖ್ ಭೇಟಿಗೆ 95 ದಿನ ಮನೆ ಹೊರಗೆ ಕಾದು ಕೂತ ಅಭಿಮಾನಿ; ನಟ ಕೊಟ್ಟ ಉಡುಗೊರೆ ಏನು?
BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್ ʼಛಾವಾʼ; ರಿಲೀಸ್ ಡೇಟ್ ಮುಂದೂಡಿಕೆ?
Ramayana: ಎರಡು ಭಾಗಗಳಾಗಿ ಬರಲಿದೆ ಬಿಗ್ ಬಜೆಟ್ ʼರಾಮಾಯಣʼ; ರಿಲೀಸ್ ಡೇಟ್ ಅನೌನ್ಸ್
MUST WATCH
ಹೊಸ ಸೇರ್ಪಡೆ
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.