![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 21, 2024, 6:10 PM IST
ಮುಂಬಯಿ: ಬಾಲಿವುಡ್ ನಟಿ(Bollywood actress) ಶ್ರದ್ಧಾ ಕಪೂರ್ (Shraddha Kapoor) ಸದ್ಯ ʼಸ್ತ್ರೀ-2ʼ (Stree 2) ಸಿನಿಮಾ ಸಕ್ಸಸ್ ಆದ ಖುಷಿಯಲ್ಲಿದ್ದಾರೆ.
ಬಿಟೌನ್‌ನಲ್ಲಿ ʼಆಶಿಕಿ 2ʼ, ʼಚಿಚೋರೆ, ʼಬಾಗಿʼ,ಯಂತಹ ಸಿನಿಮಾಗಳಲ್ಲಿ ನಟಿಸಿ ಯಶಸ್ಸಿನ ಉತ್ತುಂಗಕ್ಕೇರಿರುವ ಶ್ರದ್ಧಾ ಅವರಿಗೆ ʼಸ್ತ್ರೀ-2ʼ ಮತ್ತೊಂದು ಬಿಗ್ ಹಿಟ್ ಕೊಟ್ಟಿದೆ.
ಹಾರಾರ್ ಕಾಮಿಡಿ ಕಥಾಹಂದರದ ʼಸ್ತ್ರೀ-2ʼ ಬಾಕ್ಸ್ ಆಫೀಸ್‌ನಲ್ಲಿ ರಿಲೀಸ್ ಆದ ಕೆಲವೇ ದಿನಗಳಲ್ಲಿ 250 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇತ್ತ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲೂ ಶ್ರದ್ಧಾ ಅವರು ಟ್ರೆಂಡ್ ಆಗಿದ್ದಾರೆ.
ಶ್ರದ್ಧಾ ಕಪೂರ್ ಅವರಿಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ʼಸ್ತ್ರೀʼ ಸಿನಿಮಾದ ಸಕ್ಸ್ ಬೆನ್ನಲ್ಲೇ ಫಾಲೋವರ್ಸ್ ಹೆಚ್ಚಾಗಿದ್ದಾರೆ. 91.4 ಮಿಲಿಯನ್ ಅನುಯಾಯಿಗಳೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೂರನೇ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಆ ಮೂಲಕ ಅವರು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ 91.3 ಮಿಲಿಯನ್ ಫಾಲೋವರ್ಸ್ ಗಳಿಗಿಂತ ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ (Virat Kohli) 271 ಮಿಲಿಯನ್ ಫಾಲೋವರ್ಸ್ ಮತ್ತು ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಜೋನಾಸ್ (Priyanka Chopra) 91.8 ಮಿಲಿಯನ್ ಫಾಲೋವರ್ಸ್ ಗಳೊಂದಿಗೆ ಟಾಪ್ 2 ಸ್ಥಾನದಲ್ಲಿದ್ದಾರೆ.
ಕಾಂಗ್ರೆಸ್‌ನ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡನ್ ಸೇರಿದಂತೆ ವಿಶ್ವದ ನಾಯಕರಿಗಿಂತ ಪ್ರಧಾನಿ ಮೋದಿ ಅವರ ಫಾಲೋವರ್ಸ್ ಹೆಚ್ಚಿದ್ದಾರೆ.
ಅಮರ್ ಕೌಶಿಕ್ ನಿರ್ದೇಶನದ ʼಸ್ತ್ರೀ-2ʼನಲ್ಲಿ ಶ್ರದ್ಧಾ ಜೊತೆಗೆ ರಾಜ್‌ಕುಮಾರ್ ರಾವ್ ಮತ್ತು ಪಂಕಜ್ ತ್ರಿಪಾಠಿ ಮುಂತಾದವರು ನಟಿಸಿದ್ದು, ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ 250 ಕೋಟಿ ಗಳಿಸುವ ಮೂಲಕ ʼದೃಶ್ಯಂ 2ʼ , ʼಬ್ರಹ್ಮಾಸ್ತ್ರʼ ಗಳಿಕೆಯನ್ನು ಮೀರಿಸಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.