ಶ್ರದ್ಧಾ ವಾಕರ್ ಪ್ರಕರಣದ ಪರಿಣಾಮದಿಂದ ತುನಿಶಾಳಿಂದ ಬ್ರೇಕಪ್ ಮಾಡಿಕೊಂಡೆ; ಸಹ ನಟ ಶೀಜನ್
ಕೆಲ ದಿನಗಳ ಹಿಂದೆಯೂ ತುನಿಶಾ ಆತ್ಮಹತ್ಯೆಗೆ ಯತ್ನಿಸಿದ್ದಳು
Team Udayavani, Dec 26, 2022, 4:07 PM IST
ಮುಂಬಯಿ: ಕಿರುತೆರೆ ನಟಿ ತುನಿಶಾ ಪ್ರಕರಣಕ್ಕೆ ಸಂಬಂಧಿಸಿ, ಬಂಧಿತನಾಗಿರುವ ಸಹ ನಟ ಶೀಜನ್ ಮೊಹಮ್ಮದ್ ಖಾನ್ ಘಟನೆ ಸಂಬಂಧ ಪೊಲೀಸರ ತನಿಖೆಗೆ ಸಹಕರಿಸಿ, ಹಲವಾರು ವಿಷಯಗಳನ್ನು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಮಹಾರಾಷ್ಟ್ರ ಪೊಲೀಸ್ ಕಸ್ಟಡಿಯಲ್ಲಿ ಶೀಜನ್ ವಿಚಾರಣೆಯಲ್ಲಿ ತುನಿಶಾಳೊಂದಿಗೆ ಬ್ರೇಕಪ್ ಮಾಡಿಕೊಂಡ ಹಿಂದೆ ಶ್ರದ್ಧಾ ವಾಕರ್ ಘಟನೆ ಕಾರಣ. ಆ ಭೀಕರ ಘಟನೆ ನನ್ನ ಮೇಲೆ ಪರಿಣಾಮ ಬೀರಿತ್ತು. ನಾನು ತುನಿಶಾಳ ಬಳಿ ಶ್ರದ್ಧಾ ಪ್ರಕರಣದ ಬಗ್ಗೆ ಮಾತಾನಾಡಿ, ನಾನು ಬೇರೆ ಸಮುದಾಯಕ್ಕೆ ಸೇರಿದವ. ನಮ್ಮ ನಡುವೆ ವಯಸ್ಸಿನ ಅಂತರವೂ ಇದೆ ಎಂದು ಹೇಳಿದ್ದೆ. ಇದಲ್ಲದೆ ಕೆಲ ದಿನಗಳ ಹಿಂದೆಯೂ ತುನಿಶಾ ಆತ್ಮಹತ್ಯೆಗೆ ಯತ್ನಿಸಿದ್ದಳು, ಆಗ ನಾನು ಆಕೆಯನ್ನು ರಕ್ಷಿಸಿ, ಅವಳ ಅಮ್ಮನ ಬಳಿ ಆರೋಗ್ಯ ನೋಡಿಕೊಳ್ಳುವಂತೆ ಹೇಳಿದ್ದೆ ಎಂದು ಪೊಲೀಸರಿಗೆ ಶೀಜನ್ ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ಭೀತಿ: ಶಾಲಾ -ಕಾಲೇಜು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ; ಇಲ್ಲಿದೆ ಹೊಸ ಗೈಡ್ ಲೈನ್ಸ್
ತುನಿಶಾಳ ತಾಯಿ ಶೀಜನ್ ನನ್ನ ಮಗಳಿಗೆ ಮೋಸ ಮಾಡಿ, ಆಕೆಯನ್ನು ಬಳಸಿಕೊಂಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ತುನಿಶಾ ಹಾಗೂ ಶೀಜನ್ ಅವರ ಮೊಬೈಲ್ ಕಳುಹಿಸಲಾಗಿದ್ದು, ಇಬ್ಬರು ಏನೆಲ್ಲಾ ಚಾಟ್ ಮಾಡಿದ್ದರು ಎನ್ನುವುದು ಇದರಿಂದ ತಿಳಿದು ಬರಲಿದೆ.
ತುನಿಶಾ ಡಿ.24 ರಂದು ಟಿವಿ ಧಾರಾವಾಹಿಯ ಸೆಟ್‌ನಲ್ಲಿ ನೇಣು ಬಿಗಿದುಕೊಂಡಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್’
MUST WATCH
ಹೊಸ ಸೇರ್ಪಡೆ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.