SIIMA 2023: ಆರ್‌ಆರ್‌ಆರ್‌, ʼಕೆಜಿಎಫ್-2ʼ,ʼಕಾಂತಾರʼ..‌ ಇಲ್ಲಿದೆ ನಾಮಿನೇಷನ್ ಲಿಸ್ಟ್


Team Udayavani, Aug 2, 2023, 9:47 AM IST

SIIMA 2023: ಆರ್‌ಆರ್‌ಆರ್‌, ʼಕೆಜಿಎಫ್-2ʼ,ʼಕಾಂತಾರʼ..‌ ಇಲ್ಲಿದೆ ನಾಮಿನೇಷನ್ ಲಿಸ್ಟ್

ಬೆಂಗಳೂರು: ದಕ್ಷಿಣದ ಸಿನಿಮಾಗಳು ಅಂದರೆ ಪ್ರಮುಖವಾಗಿ ಪ್ರಾದೇಶಿಕ ಸಿನಿಮಾರಂಗದ ದೊಡ್ಡ ಇವೆಂಟ್‌ ಎಂದೇ ಖ್ಯಾತಿಯಾಗಿರುವ ಸೈಮಾ ಅವಾರ್ಡ್ಸ್‌ (ಸೌತ್ ಇಂಡಿಯನ್ ಇಂಟರ್​ನ್ಯಾಷನಲ್​ ಮೂವಿ ಅವಾರ್ಡ್ಸ್​) 2023ನೇ ಸಾಲಿನ ಪ್ರಶಸ್ತಿ ಸಮಾರಂಭಕ್ಕೆ ನಾಮಿನೇಟ್‌ ಆಗಿರುವ ಸಿನಿಮಾಗಳ ಪಟ್ಟಿ ಹೊರಬಿದ್ದಿದೆ.

ಸೈಮಾದಲ್ಲಿ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. 2023ನೇ ಸಾಲಿನಲ್ಲಿ ಕನ್ನಡದ ʼಕಾಂತಾರʼ,  ತೆಲುಗಿನ ʼಆರ್‌ ಆರ್‌ ಆರ್‌ʼ ಹಾಗೂ ತಮಿಳಿನ ‘ಪೊನ್ನಿಯಿನ್ ಸೆಲ್ವನ್: ಭಾಗ 1’ ಸಿನಿಮಾಗಳು ನಾಮಿನೇಟ್‌ ಪಟ್ಟಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ.

ಸೈಮಾ- 2023: ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿ:

ತೆಲುಗು: ಪ್ಯಾನ್‌ ಇಂಡಿಯಾ ಹಾಗೂ ವರ್ಲ್ಡ್‌ ವೈಡ್‌ ಅತೀ ಹೆಚ್ಚು ಸದ್ದು ಮಾಡಿದ ಸಿನಿಮಾಗಳಲ್ಲಿ ರಾಜಮೌಳಿ ಅವರ ʼಆರ್‌ ಆರ್‌ ಆರ್‌ʼ ಸಿನಿಮಾ ಕೂಡ ಒಂದು. ಈಗಾಗಲೇ ಗೋಲ್ಡನ್‌ ಗ್ಲೋಬ್‌, ಆಸ್ಕರ್‌ ನಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದು ಇತಿಹಾಸ ಬರೆದಿರುವ ʼಆರ್‌ ಆರ್‌ ಆರ್‌ʼ ಸೈಮಾದಲ್ಲಿ 11 ವಿಭಾಗದಲ್ಲಿ ನಾಮಿನೇಟ್‌ ಆಗಿದೆ. ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಅವರ ‘ಸೀತಾ ರಾಮಂ’ 10 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ಇನ್ನು ಕಳೆದ ವರ್ಷ ಸದ್ದು ಮಾಡಿದ ಟಾಲಿವುಡ್‌ ಸಿನಿಮಾಗಳಾದ ‘ಡಿಜೆ ಟಿಲ್ಲು’ ‘ಕಾರ್ತಿಕೇಯ 2’ ಮತ್ತು ‘ಮೇಜರ್’ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ನಾಮಿನೇಟ್‌ ಆಗಿದೆ.

ತಮಿಳು: ಕಾಲಿವುಡ್‌ನ ಪ್ಯಾನ್‌ ಇಂಡಿಯಾ ಸಿನಿಮಾ ಮಣಿರತ್ನಂ ಅವರ ʼ ಪೊನ್ನಿಯಿನ್ ಸೆಲ್ವನ್ -1ʼ 10 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ಇನ್ನು ಸೂಪರ್‌ ಹಿಟ್‌ ಆದ ಲೋಕೇಶ್‌ ಕನಕರಾಜ್‌ ಅವರ ʼವಿಕ್ರಮ್‌ʼ 9 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ರೊಮ್ಯಾಂಟಿಕ್‌ ಹಿಟ್‌ ʼಲವ್‌ ಟುಡೇʼ, ಧನುಷ್‌ ಅಭಿನಯದ ʼತಿರುಚಿತ್ರಾಂಬಲಂʼ,ʼರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾಗಳು ಅತ್ಯುತ್ತಮ ಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದೆ.

ಕನ್ನಡ: 2022 ರಲ್ಲಿ ಕನ್ನಡ ಸಿನಿಮಾರಂಗದಲ್ಲಿ ಮೋಡಿ ಮಾಡಿದ ಸಿನಿಮಾಗಳು ಬಂದಿದೆ. ಈ ಎಲ್ಲಾ ಸಿನಿಮಾಗಳು ಬಾಕ್ಸ್‌ ಆಫೀಸ್‌ ನಲ್ಲಿ ಸದ್ದು ಮಾಡಿರುವುದರ ಜೊತೆಗೆ ಜನರ ಮನದಲ್ಲೂ ಸ್ಥಾನ ಪಡೆದುಕೊಂಡಿದೆ. ಸೈಮಾದಲ್ಲಿ ಪ್ರಮುಖವಾಗಿ ರಿಷಬ್‌ ಶೆಟ್ಟಿ ಅವರ ಸೂಪರ್‌ ಹಿಟ್ ‘ಕಾಂತಾರ’ ಯಶ್ ಅವರ ಬಾಕ್ಸ್‌ ಆಫೀಸ್‌ ಹಿಟ್ ‘ಕೆಜಿಎಫ್: ಚಾಪ್ಟರ್-2’ ಸಿನಿಮಾಗಳು 11 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ಇನ್ನು ಸ್ಯಾಂಡಲ್‌ ವುಡ್‌ ನಲ್ಲಿ ಸದ್ದು ಮಾಡಿದ ಸಿನಿಮಾಗಳ ಸಾಲಿನಲ್ಲಿ ಬರುವ ರಕ್ಷಿತ್ ಶೆಟ್ಟಿ ಅವರ ‘777 ಚಾರ್ಲಿ’, ಡಾರ್ಲಿಂಗ್‌ ಕೃಷ್ಣ ಅವರ ‘ಲವ್ ಮಾಕ್‌ಟೇಲ್ 2’ ಮತ್ತು ಕಿಚ್ಚ ಸುದೀಪ್‌ ಅವರ ‘ವಿಕ್ರಾಂತ್ ರೋಣ’ ಅತ್ಯುತ್ತಮ ಚಿತ್ರಕ್ಕೆ ನಾಮನಿರ್ದೇಶನಗೊಂಡಿದೆ.

ಮಲಯಾಳಂ: ಕಳೆದ ವರ್ಷ ಮಾಲಿವುಡ್‌ ನಲ್ಲಿ ಗಮನ ಸೆಳೆದ ಅನೇಕ ಚಿತ್ರಗಳು ಬಂದಿದೆ. ಈ ಸಾಲಿನಲ್ಲಿ ಸೈಮಾ ಅವಾರ್ಡ್ಸ್‌ ಗಾಗಿ ನಾಮಿನೇಟ್‌ ಆಗಿರುವ ಪ್ರಮುಖ ಚಿತ್ರಗಳೆಂದರೆ, ಅಮಲ್ ನೀರದ್ ನಿರ್ದೇಶನದ ಮಮ್ಮುಟ್ಟಿ ಅವರ ʼಭೀಷ್ಮ ಪರ್ವಂʼ ಸಿನಿಮಾ 8 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ಇನ್ನು ಟೋವಿನೋ ಥಾಮಸ್ ಅಭಿನಯದ ‘ತಳ್ಳುಮಾಲ’ 7 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ಪ್ರೇಕ್ಷಕರ ಮನಗೆದ್ದ ‘ಹೃದಯಂ’, ‘ಜಯ ಜಯ ಜಯ ಜಯ ಹೇ’, ‘ನ್ನ ತಾನ್ ಕೇಸ್ ಕೊಡು’ ʼಜನ ಗಣ ಮನ’ ಚಿತ್ರಗಳು ಬೆಸ್ಟ್‌ ಫಿಲ್ಮ್ಸ್‌ಗಾಗಿ ನಾಮಿನೇಟ್‌ ಆಗಿವೆ.

11ನೇ ವರ್ಷದ ಸೈಮಾಆವೃತ್ತಿಯ ಪ್ರಶಸ್ತಿ ಕಾರ್ಯಕ್ರಮ ಸೆಪ್ಟೆಂಬರ್ 15 ಮತ್ತು 16 ರಂದು ವರ್ಲ್ಡ್ ಟ್ರೇಡ್ ಸೆಂಟರ್‌ ದುಬೈನಲ್ಲಿ ನಡೆಯಲಿದೆ.

ಟಾಪ್ ನ್ಯೂಸ್

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9

Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.