Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್ ಬಂಧನ? ಫೋಟೋ ವೈರಲ್
Team Udayavani, Jan 14, 2025, 3:06 PM IST
ಮುಂಬಯಿ: ಜನಪ್ರಿಯ ಗಾಯಕಿ ನೇಹಾ ಕಕ್ಕರ್ (Singer Neha Kakkar) ಅವರನ್ನು ಪೊಲೀಸರು ಬಂಧಿಸಿಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ರೇಡಿಂಗ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದಾರೆ ಎನ್ನುವ ಕ್ಯಾಪ್ಷನ್‌ನಲ್ಲಿ ಪೊಲೀಸರು ಅವರನ್ನು ಬಂಧಿಸಿಕೊಂಡು ಹೋಗಿರುವ ಫೋಟೋ ವೈರಲ್ ಆಗಿದೆ.
“ನೇಹಾ ಕಕ್ಕರ್ ಅವರ ವೃತ್ತಿಜೀವನಕ್ಕೆ ದುರಂತವಾಗಿ ಅಂತ್ಯವಾಗುತ್ತಿದೆ. ಇಂದು ಬೆಳಗಿನ ಸುದ್ದಿಯು ಎಲ್ಲಾ ಭಾರತೀಯರಿಗೆ ಆಘಾತವಾಗಿದೆ” ಎಂದು ಬಂಧಿಸಿಕೊಂಡು ಹೋಗಿದ್ದಾರೆ ಎಂದು ಫೋಟೋ ಮೇಲ್ಗಡೆ ಬರೆಯಲಾಗಿದೆ. ಈ ಫೋಟೋದಲ್ಲಿ ನೇಹಾ ಅವರು ಅಳುತ್ತಿರುವುದನ್ನು ಕಾಣಬಹುದಾಗಿದೆ.
ಫೋಟೋ ವೈರಲ್ ಆಗುತ್ತಿದ್ದಂತೆ ಒಮ್ಮೆಗೆ ಫ್ಯಾನ್ಸ್‌ಗಳು ಶಾಕ್‌ಗೆ ಒಳಗಾಗಿದ್ದಾರೆ. ಇದರ ಸತ್ಯಾಸತ್ಯತೆ ಏನು ಎನ್ನುವುದರ ಬಗ್ಗೆ ಹುಡುಕಾಡಲು ಶುರು ಮಾಡಿದ್ದಾರೆ.
ಫೋಟೋಗಳು ಲಿಂಕ್‌ನೊಂದಿಗೆ ಹೊರಬಿದ್ದಿದ್ದು, ಈ ಲಿಂಕ್ ಕ್ಲಿಕ್ ಮಾಡಿದಾಗ ಇದರಲ್ಲಿ ನೇಹಾ ಅವರ ಹೆಸರನ್ನು ಬಳಸಿಕೊಂಡು ‘ಎಮರ್ಲಾಡೋ’ ಎಂಬ ಆ್ಯಪ್ ನ ಚಿತ್ರಣ ಕಾಣುತ್ತದೆ.
ನೇಹಾ ಅವರು ಬಂಧನವಾಗಿರುವ ಫೋಟೋಗಳನ್ನು ʼಎಐʼನಿಂದ ಕ್ರಿಯೇಟ್ ಮಾಡಲಾಗಿದೆ. ಇಲ್ಲಿ ಬಂಧನವಾಗಿರುವ ಫೋಟೋದಲ್ಲಿರುವುದು ಬೇರೆಯೇ ಮಹಿಳೆ ಆಗಿದ್ದು, ನೇಹಾ ಅವರ ಮುಖವನ್ನು ಆ ಫೋಟೋಗೆ ಹಾಕಲಾಗಿದೆ.
ಈ ಹಿಂದೆ ಅಮಿತಾಬ್ ಬಚ್ಚನ್, ರಣವೀರ್ ಸಿಂಗ್ ಅವರ ಫೋಟೋಗಳನ್ನು ಕೂಡ ಇದೇ ರೀತಿ ಬಳಸಿಕೊಂಡು ದಾರಿ ತಪ್ಪಿಸುವ ಟ್ರೇಡಿಂಗ್ ಆ್ಯಪ್ ನ ಪ್ರಚಾರ ಮಾಡಲಾಗಿತ್ತು.
ಸದ್ಯ ನೇಹಾ ಈ ಬಗ್ಗೆ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rasha Thadani: ರವೀನಾ ಟಂಡನ್ ಮಗಳ ಬಿಟೌನ್ ಎಂಟ್ರಿ
ಹೊಟೇಲ್ ಧ್ವಂಸ: ನಟ ವೆಂಕಟೇಶ್, ರಾಣಾ ದಗ್ಗುಬಾಟಿ ವಿರುದ್ಧ ಕೇಸ್
Bollywood; ಆಲಿಯಾ ಭಟ್ ನಟನೆ ಚಿತ್ರದಲ್ಲಿ ನಟಿಸಲು ಒಪ್ಪದ ಶಾರೂಕ್!
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.