![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 21, 2024, 12:12 PM IST
ಮುಂಬಯಿ: ಇತ್ತೀಚೆಗೆ ಪ್ರಿಯಕರ ಜಹೀರ್ ಇಕ್ಬಾಲ್(Zaheer Iqbal) ಜತೆ ಕೋರ್ಟ್ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸೋನಾಕ್ಷಿ ಸಿನ್ಹಾ(Sonakshi Sinha) ತಮ್ಮ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ರಿಯಲ್ ಎಸ್ಟೇಟ್ ಪೇಜ್‌ವೊಂದು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಮನೆ ಮಾರಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಈ ವಿಡಿಯೋ ನೋಡಿ ಇದು ನಟಿ ಸೋನಾಕ್ಷಿ ಸಿನ್ಹಾ ಅವರ ಬಾಂದ್ರಾ ಅಪಾರ್ಟ್ಮೆಂಟ್ ಎಂದು ಕಮೆಂಟ್ ಮಾಡಿದ್ದಾರೆ.
ಈ ಮನೆಯಲ್ಲಿನ ವಿಶೇಷ ಹಾಗೂ ಸೌಲಭ್ಯಗಳನ್ನು ಹೇಳುತ್ತಾ ವಿಡಿಯೋ ಕೊನೆಯಲ್ಲಿ 25 ಕೋಟಿ ರೂ. ಮಾರಾಟ ಮಾಡುವುದಾಗಿ ಹೇಳಲಾಗಿದೆ.
ಯಾವ ಮನೆ ಇದು?:
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ನಟಿ ಸೋನಾಕ್ಷಿ ಬಾಂದ್ರಾ ವೆಸ್ಟ್‌ನ ಬಾಂದ್ರಾ ರಿಕ್ಲಮೇಶನ್‌ನಲ್ಲಿರುವ 81 ಓರೆಟ್‌ನ 26 ನೇ ಮಹಡಿಯಲ್ಲಿ ಅಪಾರ್ಟ್ಮೆಂಟ್ ನ್ನು 11 ಕೋಟಿ ರೂಪಾಯಿಗೆ ಖರೀದಿಸಿದ್ದರು. ಮನೆ ಖರೀದಿಯ ಒಪ್ಪಂದಕ್ಕೆ ಅವರ ತಾಯಿ ಪೂನಂ ಸಿನ್ಹಾ ಸಹಿ ಹಾಕಿದ್ದರು. ಇದು ಐಷಾರಾಮಿ ಮನೆಯಾಗಿದ್ದು ಮನೆಯಿಂದಲೇ ಸುಂದರವಾಗಿ ಸಮುದ್ರ ನೋಟ ಕಾಣುತ್ತದೆ.
View this post on Instagram
ಮದುವೆ ಬಳಿಕ ಮಾರಾಟ..; ಈ ಮನೆಯಲ್ಲಿ ಸೋನಾಕ್ಷಿ ಅವರ ತಂದೆ – ತಾಯಿ ಮೊದಲು ವಾಸಿಸುತ್ತಿದ್ದರು. ಮದುವೆಯ ನಂತರ ಸೋನಾಕ್ಷಿ ತನ್ನ ಪತಿ ಜಹೀರ್ ಜತೆ ಇಲ್ಲಿ ವಾಸಿಸುತ್ತಿದ್ದರು. ಮನೆಯನ್ನು ಅಲಂಕಾರ ಮಾಡುವ ಹಾಗೂ ಮನೆಯನ್ನು ಪರಿಚಯಿಸುವ ವಿಡಿಯೋವನ್ನು ಸೋನಾಕ್ಷಿ ಇತ್ತೀಚೆಗೆ ಹಂಚಿಕೊಂಡಿದ್ದರು.
ಜೂನ್.23 ರಂದು ಜಹೀರ್ ಜತೆ ಮದುವೆಯ ಬಳಿಕ ಸೋನಾಕ್ಷಿ ಈ ಮನೆಯಲ್ಲೇ ವಾಸಿಸುತ್ತಿದ್ದರು. ಇದೀಗ ಮದುವೆಯಾಗಿ ಎರಡು ತಿಂಗಳೊಳಗೆಯೇ ಈ ಮನೆಯನ್ನು ಮಾರಾಟಕ್ಕೆ ಮುಂದಾಗಿದ್ದಾರೆ. ಇದೇ ಮನೆಯಲ್ಲಿ ಸೋನಾಕ್ಷಿ – ಜಹೀರ್ ತನ್ನ ಆತ್ಮೀಯರಿಗೆ ಮದುವೆಯ ಹಿನ್ನೆಲೆಯಲ್ಲಿ ಪಾರ್ಟಿಯನ್ನು ಆಯೋಜಿಸಿದ್ದರು.
ಮನೆಯ ವಿಶೇಷತೆ ಏನು?: ಸೋನಾಕ್ಷಿ ಅವರ ಈ ಮನೆ ಐಷಾರಾಮಿಯಾಗಿದ್ದು, 4 ಬಿಎಚ್‌ಕೆಯ ಸೀ ಫೇಸಿಂಗ್ ಅಪಾರ್ಟ್‌ಮೆಂಟ್ ಇದಾಗಿದೆ. ಇದು 42000 ಚದರ ಅಡಿಗಳಲ್ಲಿ ಹರಡಿದೆ. ಅಗತ್ಯಕ್ಕೆ ಅನುಗುಣವಾಗಿ ಇದನ್ನು 2BHK ಆಗಿ ಪರಿವರ್ತಿಸಿಕೊಳ್ಳಬಹುದು. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯೂ ಇದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ರಿಯಲ್ ಎಸ್ಟೇಟ್ ಪೇಜ್ ಹಂಚಿಕೊಂಡಿರುವ ಈ ಪೋಸ್ಟ್‌ನ್ನು ನಟಿ ಸೋನಾಕ್ಷಿ ಅವರು ಲೈಕ್ ಮಾಡಿದ್ದಾರೆ.
ಇಷ್ಟು ಅವಸರ ಯಾಕೆ.. ನೆಟ್ಟಿಗರ ಪ್ರಶ್ನೆ; ಸೋನಾಕ್ಷಿ ಅವರ ಮದುವೆ ನೆನಪುಗಳು ಈ ಮನೆಯಲ್ಲಿದೆ. ಗಂಡನ ಜತೆ ಇಲ್ಲಿ ನೆಲೆಸಿ ಎರಡೂ ತಿಂಗಳು ಪೂರ್ತಿ ಆಗಿಲ್ಲ ಇಷ್ಟು ಬೇಗ ಈ ಮನೆಯನ್ನು ಮಾರಾಟ ಮಾಡುತ್ತಿರುವುದು ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ.
“ಸೋನಾಕ್ಷಿ ಸಿನ್ಹಾ ತನ್ನ ಮನೆಯನ್ನು ಏಕೆ ಮಾರುತ್ತಿದ್ದಾರೆ? ಅವರು ಸ್ವಲ್ಪ ಸಮಯದ ಹಿಂದಷ್ಟೇ ಇದನ್ನು ಖರೀದಿಸಿದ್ದರು” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. “ಇದು ಸೋನಾಕ್ಷಿ ಅವರ ಮನೆಯಾಗಿದೆ. ಅವರು ಇಷ್ಟು ಬೇಗ ಇಲ್ಲಿಂದ ಹೋಗುವುದು ಯಾಕೆ?” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.