![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 21, 2017, 10:24 AM IST
ಪಣಜಿ: ಇಲ್ಲಿನ ವರ್ಣರಂಜಿತ ಪರಿಸರದಲ್ಲಿ ಸೋಮವಾರ 48ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (ಇಫಿ)ಕ್ಕೆ ಭವ್ಯವಾದ ಚಾಲನೆ ನೀಡಲಾಯಿತು. ಕರ್ನಾಟಕದ ಡೊಳ್ಳು ಕುಣಿತದ ಕಲರವ ವೇದಿಕೆಯನ್ನು ಆವರಿಸಿತು. ಈ ಮೂಲಕ 9 ದಿನಗಳ (ನ.20-28) ಉತ್ಸವಕ್ಕೆ ಸಾಂಸ್ಕೃತಿಕ ಮುನ್ನುಡಿ ಬರೆಯಿತು.
ಡಾ. ಶ್ಯಾಮ್ ಪ್ರಸಾದ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಾಲಿವುಡ್ ನಟ ಶಾರುಖ್ ಖಾನ್, ಸಿನಿಮಾವೆಂದರೆ ಪರಸ್ಪರ ಪ್ರೀತಿಸುವುದು. ಒಂದು ಕನಸು ನೂರಾರು ಜನರ ಪರಿಶ್ರಮದಿಂದ ನನಸಾಗುವ ಪ್ರಕ್ರಿ ಯೆ
ಯೇ ಚೆಂದ. ಕಥೆ ಹೇಳುವವರು ಮತ್ತು ಕಥೆ ಕೇಳುವವರು ಒಂದು ಕುಟುಂಬವಿದ್ದಂತೆ ಎಂದರು.
ಸಮಾರಂಭದಲ್ಲಿ ಹಾಜರಿದ್ದ ಕೇಂದ್ರ ಜವಳಿ, ವಾರ್ತಾ ಮತ್ತು ಪ್ರಚಾರ ಸಚಿವೆ ಸ್ಮತಿ ಇರಾನಿ, ಹಲವು ಸಂಸ್ಕೃತಿಗಳು ಒಗ್ಗೂಡುವ ತಾಣವಿದು ಎಂದರು. ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್, 2019ರಲ್ಲಿ 50ನೇ ಚಿತ್ರೋತ್ಸವವನ್ನು ಆಚರಿಸಲು ಗೋವಾ ವಿಶೇಷವಾಗಿ
ಸಿದ್ಧಗೊಳ್ಳುತ್ತಿದೆ ಎಂದು ಪ್ರಕಟಿಸಿದರು.
ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ನಟಿ ಶ್ರೀದೇವಿ, ನಟರಾದ ನಾನಾ ಪಾಟೇಕರ್, ಶಾಹಿದ್ ಕಪೂರ್ ಮತ್ತಿತರರು ಭಾಗವಹಿಸಿದ್ದರು. ಚಿತ್ರೋತ್ಸವ ಉದ್ಘಾಟನೆಗೆ ಡೊಳ್ಳು ಕುಣಿತ ವಿಶೇಷವಾಗಿ ಸಂಭ್ರಮವನ್ನು ತುಂಬಿತು. ಡೊಳ್ಳು ಕುಣಿತ, ಕಥಕ್ಕಳಿ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳನ್ನು ಒಳಗೊಂಡ ನೃತ್ಯವು ಭಾರತೀಯ ಸಾಂಸ್ಕೃತಿಕ ವೈವಿಧ್ಯವನ್ನು ಅನಾವರಣಗೊಳಿಸಿತು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.