Mushtaq Khan: ಕಾರ್ಯಕ್ರಮಕ್ಕೆ ಆಹ್ವಾನಿಸಿ ಖ್ಯಾತ ನಟನ ಅಪಹರಣ.. 12 ಗಂಟೆ ಚಿತ್ರಹಿಂಸೆ 

ಅಪಹರಣಕಾರರಿಂದ ನಟ ಎಸ್ಕೇಪ್‌ ಆಗಿ ಬಂದದ್ದೇಗೆ?

Team Udayavani, Dec 11, 2024, 1:05 PM IST

Mushtaq Khan: ಕಾರ್ಯಕ್ರಮಕ್ಕೆ ಆಹ್ವಾನಿಸಿ ಖ್ಯಾತ ನಟನ ಅಪಹರಣ.. 12 ಗಂಟೆ ಚಿತ್ರಹಿಂಸೆ 

ಮುಂಬಯಿ: ಇತ್ತೀಚೆಗೆ ಬಾಲಿವುಡ್‌ (Bollywood) ಹಾಸ್ಯ ನಟ ಸುನೀಲ್‌ ಪಾಲ್‌ನನ್ನು ಕೆಲ ಅಪರಿಚಿರು ಅಪಹರಣ ಮಾಡಿರುವ ಘಟನೆಯ ಕುರಿತು ಸುದ್ದಿಯಾಗಿತ್ತು. ಇದೀಗ ಅಂಥದ್ದೇ ಘಟನೆ ಮತ್ತೊಬ್ಬ ನಟನ ಜತೆ ಆಗಿದೆ.

ಬಾಲಿವುಡ್‌ ನಟ ಮುಷ್ತಾಕ್ ಖಾನ್ (Actor Mushtaq Khan) ಅವರನ್ನು ಕೆಲ ಅಪರಿಚಿತರ ತಂಡವೊಂದು ಅಪಹರಣ ಮಾಡಿ ಹಿಂಸೆ ನೀಡಿರುವ ಘಟನೆ ಕುರಿತು ವರದಿಯಾಗಿದೆ.

ಏನಿದು ಘಟನೆ?: ನಟ ಅಪಹರಣವಾದ ಕುರಿತು ಅವರ ಸ್ನೇಹಿತ ಶಿವಂ ಯಾದವ್ ʼಇಂಡಿಯಾ ಟುಡೇʼ ಜತೆ ಮಾತನಾಡಿದ್ದಾರೆ.

ಅವಾರ್ಡ್‌ ಕಾರ್ಯಕ್ರವವಿದೆ ಎಂದು ಮುಸ್ತಾಕ್‌ ಅವರಿಗೆ ನವೆಂಬರ್‌ 20ಕ್ಕೆ ಕರೆಯೊಂದು ಬಂದಿತ್ತು. ಸಂಘಟಕರು ಮುಂಗಡ ಹಣವನ್ನು ಅವರ ಖಾತೆಗೆ ವರ್ಗಾಯಿಸಿ, ವಿಮಾನ ಟಿಕೆಟ್‌ಗಳನ್ನು ಸಹ ನೀಡಿದ್ದರು. ಅವರು ದೆಹಲಿ ತಲುಪಿದಾಗ ಅವರನ್ನು ಕಾರಿನೊಳಗೆ ಕೂರಲು ಹೇಳಲಾಯಿತು. ಆ ಬಳಿಕ ಅವರನ್ನು ದೆಹಲಿಯ ಬಿಜ್ನೋರ್ ಬಳಿ ಕರೆದುಕೊಂಡು ಹೋಗಿದ್ದರು.

ಇದನ್ನೂ ಓದಿ: Most Searched Movies‌& Shows:ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ಸಿನಿಮಾ ‍ಹಾಗೂ ಶೋಗಳಿವು

ಅಲ್ಲಿಂದ ಅಪಹರಣಕಾರರು ಮುಸ್ತಾಕ್‌ ಅವರನ್ನು ಬೆದರಿಸಿ, ಹಿಂಸೆ ನೀಡಿದರು. 12 ಗಂಟೆಗಳ ಕಾಲ ಚಿತ್ರಹಿಂಸೆ ನೀಡಲಾಯಿತು. ನಟ ಮತ್ತು ಅವರ ಮಗನ ಖಾತೆಯಿಂದ 2 ಲಕ್ಷಕ್ಕೂ ಹೆಚ್ಚಿನ ಹಣವನ್ನು ಸುಲಿಗೆ ಮಾಡಿದ್ದಾರೆ. ಅಪಹರಣಕಾರರು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ.

ಮುಂಜಾನೆ ಮಸೀದಿಯೊಂದರ ಅಜಾನ್‌ (ಬಾಂಗ್)‌ ಕೇಳಿದಾಗ, ಪಕ್ಕದಲ್ಲಿ ಮಸೀದಿ ಇದೆ ಎಂದು ಅಪಹರಣಕಾರರ ಕಣ್ತಪ್ಪಿಸಿ ನಿಗೂಢ ಸ್ಥಳದಿಂದ ಓಡಿಹೋಗಿ ಮಸೀದಿ ತಲುಪಿ ಅಲ್ಲಿನ ಸ್ಥಳೀಯರ ಸಹಾಯ ಪಡೆದು ಪೊಲೀಸ್‌ ಠಾಣೆಗೆ ತಲುಪುತ್ತಾರೆ. ಅಲ್ಲಿಂದ ಮನೆಗೆ ಬಂದಿದ್ದಾರೆ ಎಂದು ಶಿವಂ ಹೇಳಿದ್ದಾರೆ.

ಶಿವಂ ಬಿಜ್ನೋರ್‌ಗೆ ತೆರಳಿ ಮುಷ್ತಾಕ್ ಪರವಾಗಿ ಎಫ್‌ಐಆರ್ ದಾಖಲಿಸಿದ್ದಾರೆ.. ವಿಮಾನ ಟಿಕೆಟ್‌ಗಳು, ಬ್ಯಾಂಕ್ ವಹಿವಾಟಿನ ವಿವರಗಳು ಮತ್ತು ವಿಮಾನ ನಿಲ್ದಾಣದ ಸಮೀಪವಿರುವ ಸಿಸಿಟಿವಿ ದೃಶ್ಯಗಳು ಸೇರಿದಂತೆ ಕೆಲ ಸಾಕ್ಷ್ಯಗಳೊಂದಿಗೆ ಅವರು ದೂರು ನೀಡಿದ್ದಾರೆ.

ಸದ್ಯ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟ ಸುನೀಲ್‌ ಪಾಲ್‌ ಅವರನ್ನು ಕೂಡ ಇದೇ ರೀತಿಯಾಗಿ ಅಪಹರಣ ಮಾಡಲಾಗಿತ್ತು.

ಸದ್ಯಮುಸ್ತಾಕ್‌ ಅವರು ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿದ್ದು, ಚೇತರಿಸಿಕೊಂಡ ಬಳಿಕ ಮಾಧ್ಯಮದೊಂದಿಗೆ ಮಾತನಾಡಲಿದ್ದಾರೆ ಎನ್ನಲಾಗಿದೆ.

ʼವೆಲ್‌ ಕಂʼ , ʼಸ್ತ್ರೀ 2ʼ, ʼಗದರ್: ಏಕ್ ಪ್ರೇಮ್ ಕಥಾʼ ಸೇರಿದಂತೆ ಹಲವು ಬಾಲಿವುಡ್‌ ಸಿನಿಮಾಗಳಲ್ಲಿ ಮುಸ್ತಾಕ್‌ ನಟಿಸಿದ್ದಾರೆ.

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-shaa

Bollywood; ಆಲಿಯಾ ಭಟ್‌ ನಟನೆ ಚಿತ್ರದಲ್ಲಿ ನಟಿಸಲು ಒಪ್ಪದ ಶಾರೂಕ್‌!

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್‌ ಶೇಕ್‌ ಗ್ಯಾರೆಂಟಿ

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.