“ಹೊಟೇಲ್‌ನಲ್ಲಿ ಒಂದು ರಾತ್ರಿ ನನ್ನ ಜೊತೆ ಇರು..” ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ನಟಿ
Team Udayavani, Jul 13, 2023, 1:52 PM IST
ಮುಂಬಯಿ: ಬಣ್ಣದ ಲೋಕದಲ್ಲಿ ʼ ಕಾಸ್ಟಿಂಗ್ ಕೌಚ್ʼ ನಂತಹ ಕರಾಳ ಘಟನೆಯ ಬಗ್ಗೆ ಅನೇಕ ಕಲಾವಿದರು ಮಾತನಾಡಿದ್ದಾರೆ. ಆದರೆ ಕೆಲವರು ಮಾತ್ರ ಹಿಂಜರಿಕೆಯಿಂದ ಈ ಕುರಿತು ಮಾತನಾಡುವುದಿಲ್ಲ.
ಶಾರುಖ್ ಖಾನ್ ಅವರ “ಕಭಿ ಹಾಂ ಕಭಿ ನಾ” ಸಿನಿಮಾದ ಮೂಲಕ ಬಿಟೌನ್ ಗೆ ಕಾಲಿಟ್ಟ ನಟಿ ಸುಚಿತ್ರಾ ಕೃಷ್ಣಮೂರ್ತಿ ಸಂದರ್ಶನವೊಂದರಲ್ಲಿ ತನ್ನ ʼಕಾಸ್ಟಿಂಗ್ ಕೌಚ್ʼ ಅನುಭವದ ಬಗ್ಗೆ ಮಾತನಾಡಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, “ಅಂದು ತುಂಬಾ ಮೀಟಿಂಗ್ ಗಳಿದ್ದವು. ಆ ಸಮಯದಲ್ಲಿ ಅದು ನನಗೆ ಸಾಮಾನ್ಯವಾಗಿತ್ತು. ಹೊಟೇಲ್ ವೊಂದರಲ್ಲಿ ನಿರ್ಮಾಪಕ-ನಿರ್ದೇಶಕನನ್ನು ಭೇಟಿಯಾಗಿದ್ದೆ. ನನ್ನ ತಂದೆ ಇಲ್ಲೇ ಪಕ್ಕದಲ್ಲೇ ಇದ್ದೇನೆ ಎಂದು ಅವರ ಬಳಿ ನಾನು ಹೇಳಿದೆ. ಆದರೆ ಆ ನಿರ್ಮಾಪಕ “ಹಾಗಾದರೆ ಪರವಾಗಿಲ್ಲ, ನೀನು ನಿನ್ನ ತಂದೆಗೆ ಕರೆ ಮಾಡಿ ನಾಳೆ ಬೆಳಗ್ಗೆ ನಿಮ್ಮನ್ನು ಮನಗೆ ಬಿಡುತ್ತೇನೆ ಎಂದು ಹೇಳಿ” ಎಂದರು. ಆ ಕ್ಷಣದಲ್ಲಿ ಅವರು ಏನು ಹೇಳುತ್ತಿದ್ದಾರೆ ಎಂದು ಮೊದಲಿಗೆ ನನಗೆ ಅರ್ಥವಾಗಲಿಲ್ಲ. ನಿರ್ಮಪಕರು ಒಂದು ರಾತ್ರಿ ಅವರೊಂದಿಗೆ ಇರಲು ಹೇಳಿದ್ದರು. ಆಗ ಸಮಯ ಸಂಜೆ 4-5 ಗಂಟೆ ಆಗಿತ್ತು, ಇವರ ಬಳಿ ಮುಂಜಾನೆವರೆಗೆ ಏನು ಮಾಡುವುದು ಅಂದುಕೊಂಡೆ. ನಂತರ ಅವರ ಉದ್ದೇಶ ಏನಿರಬಹುದು ಎಂದು ನನಗೆ ಗೊತ್ತಾಯಿತು. ಆ ದಿನಗಳಲ್ಲಿ ಇದೆಲ್ಲ ಸಾಮಾನ್ಯವಾಗಿತ್ತು ಎಂದು ಕರಾಳ ಘಟನೆಯ ಬಗ್ಗೆ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: Bollywood: ರಿಮೇಕ್ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್ ಸಿನಿಮಾಗಳು
“ಚುನೌಟಿ” ಟಿವಿ ಸರಣಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಸುಚಿತ್ರಾ ಕೃಷ್ಣಮೂರ್ತಿ ಅವರು 1994 ರಲ್ಲಿ ಬಂದ “ಕಭಿ ಹಾನ್ ಕಭಿ ನಾ” ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಕಾಣಿಸಿಕೊಂಡ ನಂತರ ಖ್ಯಾತಿಯನ್ನು ಪಡೆದರು.
ನಿರ್ಮಾಪಕ ಶೇಖರ್ ಕಪೂರ್ ಅವರನ್ನು ವಿವಾಹವಾಗಿದ್ದ ಅವರು 12 ವರ್ಷಗಳ ಬಳಿಕ ಅಂದರೆ 2017 ರಲ್ಲಿ ವಿಚ್ಚೇದನ ಪಡೆದರು. ನನ್ನ ಮದುವೆಗೆ ನನ್ನ ತಾಯಿ ವಿರೋಧವಾಗಿದ್ದರು ಎಂದು ನಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Pegasus spyware ಬಗ್ಗೆ ಸುಪ್ರೀಂಕೋರ್ಟ್ ತನಿಖೆ ನಡೆಸಲಿ: ಸುರ್ಜೇವಾಲಾ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.