Bollywood: 2026ರ ಗಣರಾಜ್ಯೋತ್ಸವಕ್ಕೆ ಸನ್ನಿ ಡಿಯೋಲ್ ʼಬಾರ್ಡರ್ -2ʼ ರಿಲೀಸ್?
Team Udayavani, May 11, 2024, 4:40 PM IST
ಮುಂಬಯಿ: 1997 ರಲ್ಲಿ ಬಂದ ʼಬಾರ್ಡರ್ʼ ಬಾಲಿವುಡ್ ನಲ್ಲಿ ಆ ಕಾಲದಲ್ಲಿ ದೊಡ್ಡ ಹಿಟ್ ಆದ ಸಿನಿಮಾವಾಗಿತ್ತು. 1971 ರ ಇಂಡೋ – ಪಾಕ್ ಕದನದ ಕಥೆಯನ್ನು ಆಧಾರಿಸಿ ಬಂದ ಕಥೆಯನ್ನು ಸ್ಪೂರ್ತಿದಾಯಕವಾಗಿ ತೆರೆಮೇಲರ ತರಲಾಗಿತ್ತು.
ಈ ಸಿನಿಮಾದ ಸೀಕ್ವೆಲ್ ಬರುವುದಾಗಿ ಕೆಲ ಸಮಯದ ಹಿಂದೆ ಬಿಟೌನ್ ನಲಿ ಸುದ್ದಿಗಳು ಹರಿದಾಡಿತ್ತು. ʼಬಾರ್ಡರ್-2ʼ ಬರುವುದು ಅಧಿಕೃತವಾಗಿದ್ದು, ಸಿನಿಮಾಕ್ಕಾಗಿ ಈಗಿನಿಂದಲೇ ಸಾಕಷ್ಟು ತಯಾರಿಗಳು ಆರಂಭವಾಗಿವೆ.
ಅಂದು ʼಬಾರ್ಡರ್ʼ ನಲ್ಲಿ ಯೋಧನಾಗಿ ಕಾಣಿಸಿಕೊಂಡಿದ್ದ ಸನ್ನಿ ಡಿಯೋಲ್ ಈ ಬಾರಿ ಮೇಜರ್ ಕುಲದೀಪ್ ಸಿಂಗ್ ಚಂದೂರಿ ಅವರ ಪಾತ್ರವನ್ನು ಮಾಡಲಿದ್ದಾರೆ. ಈ ಸಿನಿಮಾದಲ್ಲಿ ನಟ ಆಯುಷ್ಮಾನ್ ಖುರಾನಾ ಅವರು ಕೂಡ ಕಾಣಿಸಿಕೊಳ್ಳಲಿದ್ದಾರೆ.
ಅನುರಾಗ್ ಸಿಂಗ್ ʼಬಾರ್ಡರ್ -2ʼ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಭೂಷಣ್ ಕುಮಾರ್, ಜೆಪಿ ದತ್ತಾ ಮತ್ತು ನಿಧಿ ದತ್ತಾ ಸಿನಿಮಾಕ್ಕೆ ಜಂಟಿಯಾಗಿ ಬಂಡವಾಳ ಹಾಕಲಿದ್ದಾರೆ.
ʼಬಾರ್ಡರ್ -2ʼ ಕಳೆದ ಒಂದು ವರ್ಷದಿಂದ ಬರವಣಿಗೆಯ ಹಂತದಲ್ಲಿದೆ. ʼಬಾರ್ಡರ್ʼ ಬಗೆಗೆ ಜನರಿಗಿದ್ದ ನಿರೀಕ್ಷೆಗೆ ತಕ್ಕಹಾಗೆ ಸೀಕ್ವೆಲ್ ಇರಬೇಕೆನ್ನುವ ಕಾರಣದಿಂದ ಸ್ಕ್ರಿಪ್ಟ್ ಗಾಗಿ ಸಾಕಷ್ಟು ತಯಾರಿ ನಡೆಸಿಕೊಂಡಿದೆ ಎಂದು ಮೂಲಗಳು ಹೇಳಿರುವುದಾಗಿ ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
2026 ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಗೆ ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿರುವುದಾಗಿ ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಜನವರಿ 23, 2026 ರಂದು ಸಿನಿಮಾ ರಿಲೀಸ್ ಮಾಡುವ ಯೋಜನೆಯಿದೆ. ʼಬಾರ್ಡರ್ʼ ಕೇವಲ ಒಂದು ಚಿತ್ರವಲ್ಲ ಇದೊಂದು ಭಾವನೆಯಾಗಿದೆ. ಇದು ಭಾರತದ ಅತಿದೊಡ್ಡ ಯುದ್ಧದ ಚಿತ್ರವಾಗಲಿದೆ, ”ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಈ ವರ್ಷದ ಅಂತ್ಯದ ವೇಳೆಗೆ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.