Sunny Deol: ಪ್ರತಿಬಾರಿ ಸಿನಿಮಾ ನಿರ್ಮಾಣ ಮಾಡಿದಾಗ ದಿವಾಳಿ ಆಗುತ್ತೇನೆ.. ಸನ್ನಿ ಡಿಯೋಲ್
Team Udayavani, Aug 29, 2023, 11:45 AM IST
ಮುಂಬಯಿ: ಬಾಲಿವುಡ್ ನಟ ಸನ್ನಿ ಡಿಯೋಲ್ ಸದ್ಯ ʼಗದರ್-2ʼ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಬಾಲಿವುಡ್ ನಲ್ಲಿ ಈ ವರ್ಷ ಬಿಗೆಸ್ಟ್ ಹಿಟ್ ಸಾಲಿಗೆ ಅವರ ಸಿನಿಮಾ ಸೇರಿದೆ.
ʼಗದರ್-2ʼ ಬಾಕ್ಸ್ ಆಫೀಸ್‌ನಲ್ಲಿ 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆ ಮೂಲಕ ತಾರಾ ಸಿಂಗ್ ರಗಡ್ ಅವತಾರಕ್ಕೆ ಮತ್ತೊಮ್ಮೆ ಸಿನಿಮಂದಿ ಜೈ ಎಂದಿದ್ದಾರೆ.
ತಾನು ಸಿನಿಮಾ ಮಾಡಿದಾಗ ಪ್ರತಿಸಲಿಯೂ ದಿವಾಳಿ ಆಗುತ್ತೇನೆಂದು ನಟ ಸನ್ನಿ ಡಿಯೋಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಸನ್ನಿ ಡಿಯೋಲ್ ಕೊನೆಯ ಬಾರಿ ತಮ್ಮ ಮಗ ಕರಣ್ ಡಿಯೋಲ್ ಅವರ ‘ಪಲ್ ಪಲ್ ದಿಲ್ ಕೆ ಪಾಸ್’ ಸಿನಿಮಾವನ್ನು ನಿರ್ಮಿಸಿದ್ದರು. ಇದೀಗ ಅವರು ಯಾವುದೇ ಸಿನಿಮಾವನ್ನು ನಿರ್ಮಾಣ ಮಾಡದಿರಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: Naga Chaitanya: ಮಾಜಿ ಪತ್ನಿ ಸಮಂತಾರ ʼಖುಷಿʼ ಟ್ರೇಲರ್ ನೋಡಿ ಥಿಯೇಟರ್‌ನಿಂದ ಹೊರನಡೆದ ಚೇ?
ಈ ಬಗ್ಗೆ ಮಾತನಾಡುವ ಅವರು, “ಪ್ರತಿಬಾರಿಯೂ ನಾನು ಯಾವುದಾದರೂ ಸಿನಿಮಾವನ್ನು ನಿರ್ಮಾಣ ಮಾಡಿದರೆ ದಿವಾಳಿ ಆಗುತ್ತೇನೆ. ಈಗ ಜಗತ್ತು ತುಂಬಾ ಕಷ್ಟಕರವಾಗಿದೆ. ಈ ಹಿಂದೆ ಸಿನಿಮಾ ವಿತರಣೆ ಎನ್ನುವುದು ಸಾಮಾನ್ಯವಾಗಿತ್ತು. ಆ ಕಾಲದಲ್ಲಿ ನಾನು ವಿಷಯಗಳನ್ನು ನಿಯಂತ್ರಿಸುತ್ತಿದ್ದೆ. ಆಗ ಸಂವಹನ ನಡೆಸುವ ಜನರಿದ್ದರು. ಅವರೊಂದಿಗೆ ಉತ್ತಮ ಸಂಪರ್ಕವಿತ್ತು. ಈಗ ಕಾರ್ಪೊರೇಟ್ ಕಾಲದಿಂದ ಅದು ಸಾಧ್ಯವಾಗುತ್ತಿಲ್ಲ. ಇಲ್ಲೊಬ್ಬ ವ್ಯಕ್ತಿಗೆ ಎತ್ತರವಾಗಿ ನಿಲ್ಲುವುದು ಕಷ್ಟ ಸಾವರ್ಜನಿಕ ಸಂಪರ್ಕಕ್ಕಾಗಿ ನೀವು ಸುತ್ತಲೂ ಓಡಾಡಬೇಕು. ನಿಮಗೆ ನಿಮ್ಮ ಥಿಯೇಟರ್‌ಗಳ ಸಂಖ್ಯೆಯನ್ನು ನೀಡುವುದಿಲ್ಲ. ವ್ಯಕ್ತಿಗಳು ಅಲ್ಲಿರಲು ಅವರು ಬಯಸುವುದಿಲ್ಲ. ಕಳೆದ ಒಂದು ದಶಕದಲ್ಲಿ ನಾನು ನನ್ನ ಚಲನಚಿತ್ರಗಳೊಂದಿಗೆ ಕಠಿಣ ಸಮಯವನ್ನು ಹೊಂದಿದ್ದೆ. ನೀವು ಒಂದು ನಿರ್ದಿಷ್ಟ ರೀತಿಯ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದೀರಿ, ಆದರೆ ಅದು ಅಷ್ಟು ಸುಲಭವಲ್ಲ” ಎಂದು ಸನ್ನಿ ಡಿಯೋಲ್ ಹೇಳುತ್ತಾರೆ.
ಅನಿಲ್ ಶರ್ಮಾ ನಿರ್ದೇಶಿಸಿದ ʼಗದರ್-2ʼ ನಲ್ಲಿ ಅಮೀಶಾ ಪಟೇಲ್ ,ಉತ್ಕರ್ಷ್ ಶರ್ಮಾ ಮತ್ತು ಸಿಮ್ರತ್ ಕೌರ್ ಕೂಡ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.