“ಭಯವಾಗುತ್ತಿದೆ, ನನ್ನನ್ನು ಕೊಲ್ಲುತ್ತಾರೆ’
ಸಾವಿಗೂ 5 ದಿನ ಮುನ್ನ ಸುಶಾಂತ್ ಕಳುಹಿಸಿದ್ದ ಸಂದೇಶ?
Team Udayavani, Sep 22, 2020, 6:25 AM IST
ಮುಂಬಯಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಸಾವಿಗೂ 5 ದಿನ ಮೊದಲು ಸುಶಾಂತ್ ತಮ್ಮ ಸಹೋದರಿಗೆ ಕಳುಹಿಸಿದ ಸಂದೇಶವೊಂದು ಈಗ ಬಹಿರಂಗವಾಗಿದೆ. ಅದರಲ್ಲಿ ಅವರು ತಮ್ಮ ಸುರಕ್ಷತೆಯ ಬಗ್ಗೆಯೇ ಆತಂಕ ವ್ಯಕ್ತಪಡಿಸಿದ್ದು, “ನನಗೆ ಭಯವಾಗುತ್ತಿದೆ. ನನ್ನನ್ನು ಕೊಲ್ಲುತ್ತಾರೆ’ ಎಂದು ಬರೆದಿರುವು ದಾಗಿ ಟೈಮ್ಸ್ ನೌ ವರದಿ ಮಾಡಿದೆ.
ಸಹೋದರಿ ಮೀಟು ಸಿಂಗ್‌ಗೆ ಜೂ.9 ರಂದು ಸುಶಾಂತ್ ಈ ಸಂದೇಶ ಕಳುಹಿಸಿ ದ್ದರು. ಜೂ.14ರಂದು ಸುಶಾಂತ್ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಫ್ಲ್ಯಾಟ್‌ನಲ್ಲೇ ಪತ್ತೆಯಾಗಿತ್ತು. ಈ ಸಂದೇಶ ದಲ್ಲಿ ಸುಶಾಂತ್, “ತಾನು ರಿಯಾಳನ್ನು ಸಂಪ ರ್ಕಿಸಲು ಯತ್ನಿಸುತ್ತಿದ್ದು, ಆಕೆ ಕರೆ ಸ್ವೀಕರಿಸು ತ್ತಿಲ್ಲ. ನಾನು ತುರ್ತಾಗಿ ಆಕೆ ಯೊಂದಿಗೆ ಮಾತನಾಡಬೇಕಿದೆ. ಆ ಜನರು ನನ್ನನ್ನು ಸಿಲುಕಿಸಲು ಯತ್ನಿಸುತ್ತಾರೆಂಬ ಭೀತಿ ಶುರು ವಾಗಿದೆ’ ಎಂದು ಬರೆದಿದ್ದರು ಎನ್ನಲಾಗಿದೆ.
ಪಾಯಲ್ ವಿರುದ್ಧ ಕಾನೂನು ಹೋರಾಟ: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ನಟಿ ಪಾಯಲ್ ಘೋಷ್ ವಿರುದ್ಧ ಮತ್ತೂಬ್ಬ ನಟಿ ರಿಚಾ ಛಡ್ಡಾ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿ ದ್ದಾರೆ. ಪಾಯಲ್ ಅವರು, “ನಟಿ ರಿಚಾ ಸೇರಿದಂತೆ ಇನ್ನೂ ಅನೇಕ ನಟಿಯ ರೊಂದಿಗೆ ಕಶ್ಯಪ್ ಸಂಬಂಧ ಹೊಂದಿದ್ದರು’ ಎಂದು ಹೇಳಿದ್ದರು. ಈ ಪ್ರಕರಣದಲ್ಲಿ ನನ್ನನ್ನು ಅವಹೇಳನಕಾರಿಯಾಗಿ ಎಳೆದು ತರಲಾಗಿದೆ ಎಂದು ರಿಚಾ ಆರೋಪಿಸಿದ್ದು, ಪಾಯಲ್ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.
ಶ್ರದ್ಧಾ ಕಪೂರ್, ಸಾರಾಗೂ ಸಮನ್ಸ್?
ಬಾಲಿವುಡ್ ಡ್ರಗ್ ಪ್ರಕರಣ ಸಂಬಂಧ ಸುಮಾರು 12 ಮಂದಿಯನ್ನು ಬಂಧಿಸಿರುವ ಎನ್‌ಸಿಬಿ, ಸದ್ಯದಲ್ಲೇ ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಸೇರಿದಂತೆ ಕೆಲವು ಸೆಲೆಬ್ರಿಟಿಗಳಿಗೆ ಸಮನ್ಸ್ ಜಾರಿ ಮಾಡುವ ಸಾಧ್ಯತೆಯಿದೆ. ಬಾಲಿವುಡ್‌ನ ಟಾಪ್ 5 ಸೆಲೆಬ್ರಿಟಿಗಳ ಹೆಸರನ್ನೂ ಎನ್‌ಸಿಬಿ ಪಟ್ಟಿ ಮಾಡಿದೆ. ಡಿ, ಕೆ, ಎನ್, ಜೆ, ಎಸ್ ಎಂಬ ಇನೀಷಿಯಲ್‌ಗಳಿರುವ ಸೆಲೆಬ್ರಿಟಿಗಳು ಡ್ರಗ್ ಕುರಿತು ವಾಟ್ಸ್‌ಆ್ಯಪ್ ಚಾಟ್ ಮಾಡಿರುವ ಮಾಹಿತಿ ಸಿಕ್ಕಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suniel Shetty: ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಅವಘಡ; ಸುನಿಲ್ ಶೆಟ್ಟಿಗೆ ಗಂಭೀರ ಗಾಯ
Threat Call: ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೂ ಜೀವ ಬೆದರಿಕೆ
SRK: ಶಾರುಖ್ ಭೇಟಿಗೆ 95 ದಿನ ಮನೆ ಹೊರಗೆ ಕಾದು ಕೂತ ಅಭಿಮಾನಿ; ನಟ ಕೊಟ್ಟ ಉಡುಗೊರೆ ಏನು?
BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್ ʼಛಾವಾʼ; ರಿಲೀಸ್ ಡೇಟ್ ಮುಂದೂಡಿಕೆ?
Ramayana: ಎರಡು ಭಾಗಗಳಾಗಿ ಬರಲಿದೆ ಬಿಗ್ ಬಜೆಟ್ ʼರಾಮಾಯಣʼ; ರಿಲೀಸ್ ಡೇಟ್ ಅನೌನ್ಸ್
MUST WATCH
ಹೊಸ ಸೇರ್ಪಡೆ
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.