ನಟ ಸುಶಾಂತ್ ಸಿಂಗ್ ಸಾವಿಗೂ ಮುನ್ನ ವಿಷಪ್ರಾಶನ ಮಾಡಿಸಲಾಗಿತ್ತು: ಸ್ವಾಮಿ ಆರೋಪ
ಸಂದೀಪ್ ಎಷ್ಟು ಬಾರಿ ದುಬೈಗೆ ಪ್ರಯಾಣ ಬೆಳೆಸಿದ್ದಾನೆ ಮತ್ತು ಯಾಕೆ ಎಂಬ ಬಗ್ಗೆ ವಿಚಾರಿಸಬೇಕು
Team Udayavani, Aug 25, 2020, 4:51 PM IST
ನವದೆಹಲಿ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಸತ್ಯಾಂಶ ಬಯಲಿಗೆಳೆಯಲು ಸಿಬಿಐ ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರತಿದಿನ ಹೊಸ ಬೆಳವಣಿಗೆ ನಡೆಯುತ್ತಿದೆ. ಏತನ್ಮಧ್ಯೆ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಸುಶಾಂತ್ ಸಾವಿನ ಪ್ರಕರಣದ ಬಗ್ಗೆ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದು, ಇದೀಗ ಸುಶಾಂತ್ ಸಾವಿಗೂ ಮುನ್ನ ವಿಷ ಪ್ರಾಶನ ಮಾಡಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಸ್ವಾಮಿ ಅವರ ಟ್ವೀಟ್ ನಲ್ಲಿ, ಈಗ ಸುಶಾಂತ್ ಹಂತಕರ ಪೈಶಾಚಿಕ ಮನಸ್ಥಿತಿ ಮತ್ತು ಅವರ ಉದ್ದೇಶ ನಿಧಾನಕ್ಕೆ ಬಹಿರಂಗವಾಗತೊಡಗಿದೆ. ಸುಶಾಂತ್ ಹೊಟ್ಟೆಯಲ್ಲಿದ್ದ ವಿಷ ಪತ್ತೆ ಹಚ್ಚಲು ಸಾಧ್ಯವಾಗಬಾರದು ಎಂಬ ಉದ್ದೇಶದಿಂದ ಬಲವಂತವಾಗಿ ಮರಣೋತ್ತರ ಪರೀಕ್ಷೆಯನ್ನು ವಿಳಂಬವಾಗಿ ಮಾಡಲಾಗಿತ್ತು. ಆದರೆ ಇದಕ್ಕೆ ಯಾರು ಹೊಣೆಗಾರರು ಎಂಬುದನ್ನು ಸಮಯ ಬಂದಾಗ ಬಹಿರಂಗವಾಗಲಿದೆ” ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ ಸಿನಿಮಾ ನಿರ್ಮಾಪಕ ಹಾಗೂ ಸುಶಾಂತ್ ಸಿಂಗ್ ಸ್ವಯಂ ಘೋಷಿತ ಗೆಳೆಯ ಸಂದೀಪ್ ಎಸ್ ಸಿಂಗ್ ಬಗ್ಗೆಯೂ ಸ್ವಾಮಿ ಪ್ರಶ್ನಿಸಿದ್ದಾರೆ. ಶಂಕಿತ ಸಂದೀಪ್ ಎಷ್ಟು ಬಾರಿ ದುಬೈಗೆ ಪ್ರಯಾಣ ಬೆಳೆಸಿದ್ದಾನೆ ಮತ್ತು ಯಾಕೆ ಎಂಬ ಬಗ್ಗೆ ವಿಚಾರಿಸಬೇಕು ಎಂದು ಹೇಳಿದ್ದಾರೆ.
Now the diabolical mentality of the killers and their reach is being slowly revealed: autopsy was deliberately forcibly delayed so that the poisons in SSR’s stomach dissolves beyond recognition by the digestive fluids in the stomach . Time to nail those who are responsible
— Subramanian Swamy (@Swamy39) August 25, 2020
2020ರ ಜೂನ್ 14ರಂದು ಬಾಂದ್ರಾ ನಿವಾಸದಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಹೇಳಲಾಗಿತ್ತು. ಇದೀಗ ಸಿಬಿಐ ಸುಶಾಂತ್ ಸಾವಿನ ಪ್ರಕರಣವನ್ನು ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸುತ್ತಿದೆ. ಈಗಾಗಲೇ ಸುಶಾಂತ್ ಗೆಳೆಯ ಸಿದ್ದಾರ್ಥ ಪಿಥಾನಿ, ಅಡುಗೆಯಾತ ನೀರಜ್, ಸಹಾಯಕ ದೀಪೇಶ್ ಸಾವಂತ್ ಬಳಿ ಸಿಬಿಐ ಕ್ರೈಂ ಘಟನೆಯನ್ನು ಮರುಸೃಷ್ಟಿಸಿ ವಿವರ ಪಡೆದಿದೆ. ಸುಶಾಂತ್ ನಿಧನದ ದಿನ ಈ ಮೂವರು ಮನೆಯಲ್ಲಿದ್ದರು ಎಂದು ವರದಿ ತಿಳಿಸಿದೆ.
ಶೀಘ್ರದಲ್ಲಿಯೇ ಸಿಬಿಐ ಗೆಳತಿ ರಿಯಾ ಚಕ್ರವರ್ತಿಗೆ ವಿಚಾರಣೆಗೊಳಗಾಗಲು ಸಮನ್ಸ್ ನೀಡುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.