ತಾಪ್ಸಿಯ ‘ಥಪ್ಪಡ್’ ಫರ್ಸ್ಟ್ ಲುಕ್ ರಿಲೀಸ್ ; ಕ್ಯಾಚಿಯಾಗಿದೆ ಪನ್ನು ಎಕ್ಸ್ ಪ್ರೆಶನ್
Team Udayavani, Jan 30, 2020, 4:37 PM IST
ಮುಂಬಯಿ: ಪ್ರತಿಭಾವಂತ ನಟಿ ತಾಪ್ಸಿ ಪನ್ನು ಅವರ ಮುಂಬರುವ ಚಿತ್ರ ‘ಥಪ್ಪಡ್’ನ ಮೊದಲ ಪೋಸ್ಟರ್ ಇಂದು ರಿಲೀಸ್ ಆಗಿದೆ. ಅದರಲ್ಲಿ ತಾಪ್ಸಿ ಅವರ ‘ಎಕ್ಸ್ ಪ್ರೆಶನ್’ ಚಿತ್ರಪ್ರೇಮಿಗಳ ಗಮನ ಸೆಳೆಯುವಂತಿದೆ.
ಈ ಚಿತ್ರವನ್ನು ‘ಆರ್ಟಿಕಲ್ 15’ ಚಿತ್ರವನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಅನುಭವ್ ಸಿನ್ಹಾ ಅವರು ನಿರ್ದೇಶಿಸುತ್ತಿದ್ದಾರೆ. ತಾಪ್ಸಿ ಈ ಹಿಂದೆ ಅನುಭವ್ ಜೊತೆ ‘ಮುಲ್ಕ್’ ಚಿತ್ರದಲ್ಲಿ ಕೆಲಸ ಮಾಡಿದ್ದರು.
ತಾಪ್ಸಿ ಪನ್ನು ಅವರ ಕ್ಲೋಸಪ್ ಹೊಂದಿರುವ ಮತ್ತು ಎಡ ಕೆನ್ನೆ ಮೇಲೆ ಕೈ ಏಟಿನ ಗುರುತಿರುವ ಈ ಫರ್ಸ್ಟ್ ಲುಕ್ ‘ಥಪ್ಪಡ್’ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚುವಂತೆ ಮಾಡಿದೆ. ಥಪ್ಪಡ್ ಅಂದರೆ ಕನ್ನಡದಲ್ಲಿ ‘ಪೆಟ್ಟು’, ‘ಏಟು’ ಎಂದರ್ಥ.
ಥಪ್ಪಡ್ ಚಿತ್ರದ ಫರ್ಸ್ಟ್ ಲುಕ್ ಅನ್ನು ಚಿತ್ರ ವಿಮರ್ಶಕ ಮತ್ತು ವ್ಯವಹಾರ ವಿಶ್ಲೇಷಕ ತರಣ್ ಆದರ್ಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಥಪ್ಪಡ್ ಚಿತ್ರದ ಟ್ರೈಲರ್ ನಾಳೆ ಬಿಡುಗಡೆಯಾಗಲಿದೆ. ತಾಪ್ಸಿ ಪನ್ನು ಹಾಗೂ ಪವೈಲ್ ಗುಲ್ಹಾಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಫೆಬ್ರವರಿ 28ಕ್ಕೆ ಈ ಚಿತ್ರ ತೆರೆಕಾಣಲಿದೆ.
ಈ ಚಿತ್ರವನ್ನು ಭೂಶಣ್ ಕುಮಾರ್, ಕೃಶಣ್ ಕುಮಾರ್ ಮತ್ತು ಅನುಭವ್ ಸಿನ್ಹಾ ಅವರು ನಿರ್ಮಿಸಿದ್ದಾರೆ.
Trailer out tomorrow… #TaapseePannu… First look poster of Anubhav Sinha’s new film #Thappad… Produced by Bhushan Kumar, Krishan Kumar and Anubhav Sinha… 28 Feb 2020 release. pic.twitter.com/hYPGedRka6
— taran adarsh (@taran_adarsh) January 30, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.