B’town: ನಾನಿನ್ನೂ ಗರ್ಭಿಣಿಯಾಗಿಲ್ಲ.. ಮದುವೆ ಪ್ರಶ್ನೆಗೆ ನಟಿ ತಾಪ್ಸಿ ಕೊಟ್ಟ ಉತ್ತರ ವೈರಲ್
Team Udayavani, Jul 18, 2023, 11:42 AM IST
ಮುಂಬಯಿ: ತನ್ನ ನೇರ ನುಡಿಗಳಿಂದಲೇ ಗುರುತಿಸಿಕೊಂಡಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು ಮದುವೆ ಬಗ್ಗೆ ಹೇಳಿರುವ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೋಮವಾರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ʼಆಸ್ಕ್ ಮಿ ಎನಿಥಿಂಗ್ʼ ನಲ್ಲಿ ಅಭಿಮಾನಿಗಳು ತಾಪ್ಸಿ ಅವರನ್ನು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ತಾಪ್ಸಿ ಅವರು ತನ್ನ ಮುಂದಿನ ಹಾಲಿಡೇ ಪ್ಲ್ಯಾನ್, ಮುಂದಿನ ಸಿನಿಮಾ ಪ್ರಾಜೆಕ್ಟ್ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಈ ವೇಳೆ ಬಳಕೆದಾರರೊಬ್ಬರು ತಾಪ್ಸಿ ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. “ನೀವು ಯಾವಾಗ ಮದುವೆಯಾಗಲಿದ್ದೀರಿ?” ಎಂದು ಕೇಳಿದ್ದಾರೆ.
ತನ್ನ ವೈಯಕ್ತಿಕ ಜೀವನದ ಬಗ್ಗೆ ಅಷ್ಟಾಗಿ ಎಲ್ಲೂ ಮಾತನಾಡದ ನಟಿ ತಾಪ್ಲಿ ಬಳಕೆದಾರರ ಪ್ರಶ್ನೆಗೆ ವಿಡಿಯೋ ಮಾಡಿ ಉತ್ತರಿಸಿದ್ದಾರೆ. “”ಹಾಗಾದರೆ ನಾನು ಯಾವಾಗ ಮದುವೆಯಾಗುತ್ತೇನೆ? ನಾನು ಇನ್ನೂ ಗರ್ಭಿಣಿಯಾಗಿಲ್ಲ. ಹಾಗಾಗಿ ಶೀಘ್ರದಲ್ಲಿ ಇಲ್ಲ. ಮದುವೆ ಬಗ್ಗೆ ನಾನು ನಿಮಗೆಲ್ಲರಿಗೂ ತಿಳಿಸುತ್ತೇನೆ” ಎಂದು ಹೇಳಿ ನಕ್ಕಿದ್ದಾರೆ.
ಇದನ್ನೂ ಓದಿ: ಅಪಘಾತದಲ್ಲಿ ಸತ್ತರೆ ಮಗನ ಕಾಲೇಜು ಶುಲ್ಕ ಸರ್ಕಾರ ಭರಿಸುತ್ತದೆಂದು ಬಸ್ಸಿನ ಮುಂದೆ ಹಾರಿದ ತಾಯಿ
ತಾಪ್ಸಿ ಪನ್ನು ತನ್ನ ಡೇಟಿಂಗ್ ಜೀವನದ ಬಗ್ಗೆ ಎಲ್ಲೂ ಕೂಡ ಹೇಳಿಕೊಳಿಲ್ಲ. ಈ ಹಿಂದೆ ಅವರು ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿತ್ತು. ಅವರೊಂದಿಗಿನ ಕೆಲ ಫೋಟೋಗಳನ್ನು ಕೂಡ ತಾಪ್ಸಿ ಹಂಚಿಕೊಂಡಿದ್ದರು.
2013 ರಲ್ಲಿ ಬಂದ “ಚಶ್ಮೆ ಬದ್ದೂರ್” ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ತಾಪ್ಸಿ ಪನ್ನು “ಪಿಂಕ್”, “ನಾಮ್ ಶಬಾನಾ”, “ಸೂರ್ಮಾ”, “ಮುಲ್ಕ್”, “ಮನ್ಮರ್ಜಿಯಾನ್” ಮತ್ತು “ಥಪ್ಪಡ್”ನಂತಹ ಹಿಟ್ ಚಿತ್ರಗಳಲ್ಲಿನ ಅಭಿನಯಿಸಿದ್ದಾರೆ.
ಇದಲ್ಲದೇ “ಗೇಮ್ ಓವರ್”, “ಬದ್ಲಾ”, “ಸಾಂಡ್ ಕಿ ಆಂಖ್” ಮತ್ತು “ಮಿಷನ್ ಮಂಗಲ್” ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ರಾಜ್‌ಕುಮಾರ್ ಹಿರಾನಿಯವರ “ಡುಂಕಿ” ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
Raj Kapoor: ಪಾಕಿಸ್ತಾನದಲ್ಲಿ ಬಾಲಿವುಡ್ ನಟ ದಿ. ರಾಜ್ ಕಪೂರ್100ನೇ ಜನ್ಮದಿನ ಆಚರಣೆ
MUST WATCH
ಹೊಸ ಸೇರ್ಪಡೆ
Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.