Tamil actor: ಹೃದಯ ಸ್ತಂಭನದಿಂದ ಖ್ಯಾತ ಕಾಲಿವುಡ್ ನಟ ಆರ್ ಎಸ್ ಶಿವಾಜಿ ನಿಧನ
Team Udayavani, Sep 2, 2023, 6:14 PM IST
ಚೆನ್ನೈ: ಹೃದಯ ಸ್ತಂಭನದಿಂದ ಕಾಲಿವುಡ್ ಸಿನಿಮಾರಂಗದ ಖ್ಯಾತ ಹಿರಿಯ ನಟ ಆರ್ ಎಸ್ ಶಿವಾಜಿ (66) ಅವರು ಶನಿವಾರ(ಸೆ.2 ರಂದು) ನಿಧನರಾಗಿದ್ದಾರೆ.
ನಟನ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಅವರ ಮಗ ನಿಧನದ ಸುದ್ದಿಯನ್ನು ಅಧಿಕೃತವಾಗಿ ಹೇಳಿದ್ದಾರೆ.
“ನನ್ನ ಅಪ್ಪ ಆರ್.ಎಸ್.ಶಿವಾಜಿ ಅವರಿಗೆ ಹೃದಯ ಸ್ತಂಭನವಾಗಿದ್ದು, ಹಠಾತ್ ನಿಧನರಾಗಿದ್ದಾರೆ. ಈ ಸಮಯದಲ್ಲಿ ನಿಮ್ಮೆಲ್ಲರ ಬೆಂಬಲ ನಮಗೆ ಅಗತ್ಯವಿದೆ” ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
ಸನ್ ಪಿಕ್ಚರ್ಸ್, ಲೈಕಾ ಪ್ರೊಡಕ್ಷನ್ಸ್ ಮತ್ತು ಇತರ ಹಲವಾರು ನಿರ್ಮಾಣ ಸಂಸ್ಥೆಗಳು ಸೇರಿದಂತೆ ಕಲಾವಿದರು ಶಿವಾಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.
ಹಾಸ್ಯ ಪಾತ್ರಗಳಿಗಾಗಿ ತಮಿಳು ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದ ಅವರು 1980 ರ ಆರಂಭದಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದರು. ಸತ್ಯ, ಅಪೂರ್ವ ಸಾಗೋಧರಂಗಲ್, ಮೈಕೆಲ್ ಮದನ ಕಾಮ ರಾಜನ್, ಅಂಬೆ ಶಿವಂ, ಆಯುತ ಎಳುತ್ತು, ಸೂರರೈ ಪೊಟ್ರು, ಕೋಲಮಾವು ಕೋಕಿಲಾ ಮತ್ತು ಗಾರ್ಗಿ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು.
ಆರ್‌ಎಸ್ ಶಿವಾಜಿ ಅವರು ಕಮಲ್ ಹಾಸನ್ ಮತ್ತು ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ನಿರ್ಮಾಣದ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ವಿಕ್ರಮ್ (1986), ಸತ್ಯ, ಮೈಕೆಲ್ ಮದನ ಕಾಮರಾಜನ್ ಮುಂತಾದ ಸಿನಿಮಾದಲ್ಲಿ ನಟಿಸಿದ್ದು,” “ಸರ್! ನೀಂಗ ಎಂಗೆಯೋ ಪೋಯೀತೀಂಗ, ಸಾರ್” ಕಾಮಿಡಿ ಡೈಲಾಗ್ ನಿಂದ ಅವರು ಖ್ಯಾತರಾಗಿದ್ದರು.
ನಟನೆ ಮಾತ್ರವಲ್ಲದೆ ಸಹಾಯಕ ನಿರ್ದೇಶನ, ಧ್ವನಿ ವಿನ್ಯಾಸ ಮತ್ತು ಲೈನ್ ಪ್ರೊಡಕ್ಷನ್ ನಾಗಿ ಅನೇಕ ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಅವರು ಸಾಯಿಪಲ್ಲವಿ ಅವರ ʼ ಗಾರ್ಗಿʼ ಸಿನಿಮಾದಲ್ಲಿನ ನಟನೆಯಿಂದ ಗಮನ ಸೆಳೆದಿದ್ದರು. ʼಕೋಲಮಾವು ಕೋಕಿಲʼ ಚಿತ್ರದಲ್ಲಿ ನಯನತಾರಾ ತಂದೆಯಾಗಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಕಳೆದ ಶುಕ್ರವಾರ ಬಿಡುಗಡೆಯಾದ ಯೋಗಿ ಬಾಬು ಅವರʼ ಲಕ್ಕಿ ಮ್ಯಾನ್ʼ ನಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.