Actress: ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಖ್ಯಾತ ನಟಿ ನಿಧನ; 42ರ ವಯಸ್ಸಿನಲ್ಲಿ ವಿಧಿವಶ
14ರ ವಯಸ್ಸಿನಲ್ಲಿ ವಿವಾಹ, ಬಡತನದಿಂದಲೇ ಬೆಳೆದ ನಟಿ..
Team Udayavani, Aug 7, 2023, 5:32 PM IST
ಚೆನ್ನೈ: ಕಳೆದ ಕೆಲ ಸಮಯದಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಟಾಲಿವುಡ್ ಸಿನಿರಂಗದ ಕಲಾವಿದೆ ಸಿಂಧು ಸೋಮವಾರ (ಆ.7 ರಂದು) ನಿಧನರಾಗಿದ್ದಾರೆ.
ಅವರ ನಿಧನದ ಸುದ್ದಿಯನ್ನು ನಟ ಕೊಟ್ಟಾಚಿ ಸಾಮಾಜಿಕಾ ಜಾಲತಾಣದಲ್ಲಿ ಹೇಳಿದ್ದಾರೆ. ನಟಿಯ ಫೋಟೋವೊಂದನ್ನು ಹಂಚಿಕೊಂಡು ಸೋಮವಾರ ಮುಂಜಾನೆ 2:15 ಕ್ಕೆ ಟಾಲಿವುಡ್ ನಟಿ ʼಅಂಗಡಿ ತೇರುʼ ಸಿಂಧು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ..
ಕಳೆದ ಕೆಲ ಸಮಯದಿಂದ ನಟಿ ಸಿಂಧು ಅವರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಈ ಸಂಬಂಧ ಅವರು ಕಿಲ್ಪಾಕ್‌ನ ಖಾಸಗಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ಕಡೆಯಿಂದ ಕ್ಯಾನ್ಸರ್ ಕಾಯಿಲೆಯ ನೋವು, ಇನ್ನೊಂದೆಡೆ ಚಿಕಿತ್ಸೆಗೆ ಹಣವಿಲ್ಲದೆ ಅವರು ಪರದಾಡಿದ್ದರು. ಆಸ್ಪತ್ರೆಯಿಂದಲೇ ಅವರು ಚಿಕಿತ್ಸೆಗೆ ಸಹಾಯ ಮಾಡಿಯೆಂದು ವಿಡಿಯೋ ಮೂಲಕ ಭಾವುಕರಾಗಿ ಹೇಳಿದ್ದರು.
ಇದಕ್ಕೆ ಕಾರ್ತಿ, ಇಸರಿ ಗಣೇಶ್, ಸತೀಶ್ ಕುಮಾರ್ ಹಾಗೂ ಇತರ ಕಲಾವಿದರು ಸ್ಪಂದಿಸಿ ಆಸ್ಪತ್ರೆ ವೆಚ್ಚಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದರು.
ಈ ಹಿಂದೆ ಸಂದರ್ಶನವೊಂದರಲ್ಲಿ ಅವರು ತನ್ನ ಸ್ತನ ಕ್ಯಾನ್ಸರ್ ಬಗ್ಗೆ ಮಾತನಾಡಿದ್ದರು. ವೈದ್ಯರು ನನ್ನ ಒಂದು ಸ್ತನವನ್ನು ಕತ್ತರಿಸಿದ್ದಾರೆ. ಇಂತಹ ನೋವು ಮತ್ತು ಸಂಕಟದಿಂದ ಬದುಕಲು ನಾನು ಬಯಸುವುದಿಲ್ಲ. ನನಗೆ ದಯಾಮರಣ ಪಾಲಿಸಿ ಎಂದು ಅವರು ಭಾವುಕರಾಗಿ, ನೋವಿನಲ್ಲಿ ನುಡಿದಿದ್ದರು.
ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಬಂದಿದ್ದ ಸಿಂಧು.. ಬಾಲ್ಯದಿಂದಲೇ ನಟನಾ ವೃತ್ತಿಗೆ ಕಾಲಿಟ್ಟ ಸಿಂಧು, ಮನೆಯ ಬಡತನದಲ್ಲೂ ಬಣ್ಣದ ಲೋಕದಲ್ಲಿ ಮಿಂಚಿದವರು. ಇದಲ್ಲದೇ ಅವರಿಗೆ 14ನೇ ವಯಸ್ಸಿನಲ್ಲಿ ಮದುವೆಯಾಗಿತ್ತು. ತಾಯಿಯಾದ ಬಳಿಕ ಅವರ ವೈವಾಹಿಕ ಜೀವನ ಅತ್ಯಂತ ಕಷ್ಟದಿಂದ ಸಾಗಿತ್ತು. ಸಿಂಧು ಅವರ ಪತಿ ಒಳ್ಳೆಯ ವ್ಯಕ್ತಿಯಾಗಿರಲಿಲ್ಲ. ಸಿಂಧು ತನ್ನ ಮಗುವನ್ನು ಬೆಳೆಸಲು ಸಾಕಷ್ಟು ಕಷ್ಟಪಟ್ಟಿದ್ದರು ಎಂದು ವರದಿ ತಿಳಿಸಿದೆ.
ಸಿಂಧು ನಟನೆಯಲ್ಲಿ ಮಿಂಚಿದ್ದು 2010 ರಲ್ಲಿ ತೆರೆಗೆ ಬಂದ ʼ ಅಂಗಡಿ ತೇರುʼ ಸಿನಿಮಾದಲ್ಲಿ ಸಹನಟಿಯಾಗಿ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು. ʼನಾಡೋಡಿಗಲ್ʼ, ʼನಾನ್ ಮಹಾನ್ ಆಲʼ, ʼತೇನವಟ್ಟುʼ,ʼಕರುಪ್ಪುಸಾಮಿ ಕುತಗೈತರರ್ʼ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
Raj Kapoor: ಪಾಕಿಸ್ತಾನದಲ್ಲಿ ಬಾಲಿವುಡ್ ನಟ ದಿ. ರಾಜ್ ಕಪೂರ್100ನೇ ಜನ್ಮದಿನ ಆಚರಣೆ
UI Movie: ಉಪ್ಪಿ ʼಯುಐʼ ಟ್ರೇಲರ್ ನೋಡಿ ಬಾಲಿವುಡ್ ನಟ ಆಮಿರ್ ಖಾನ್ ಶಾಕ್.!
Year Ender: 10 ಗೆಲುವು.., ಒಂದಷ್ಟು ಸೋಲು..: ಇಲ್ಲಿದೆ ಬಾಲಿವುಡ್ ಬಾಕ್ಸಾಫೀಸ್ ರಿಪೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.