![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Apr 18, 2023, 4:27 PM IST
ಹೈದರಾಬಾದ್: ಬಹುಭಾಷಾ ನಟಿ ಸಮಂತಾ ಅಭಿನಯದ ನಿರೀಕ್ಷೆ ಹುಟ್ಟಿಸಿದ್ದ ʼ ಶಾಕುಂತಲಂʼ ಸಿನಿಮಾ ರಿಲೀಸ್ ಆಗಿದೆ. ನಿರೀಕ್ಷೆ ಹುಟ್ಟಿಸಿದ್ದಷ್ಟು ಸಿನಿಮಾ ಆರಂಭಿಕ ದಿನಗಳಲ್ಲಿ ಅಷ್ಟಾಗಿ ಕಮಾಲ್ ಮಾಡುತ್ತಿಲ್ಲ.
ಶಾಕುಂತಲಾ ಮತ್ತು ರಾಜ ದುಶ್ಯಂತ್ ಕಥೆಯ ಸಿನಿಮಾ 60 ಕೋಟಿ. ರೂ ನಿರ್ಮಾಣದಲ್ಲಿ ತಯಾರಿಗಿದೆ. ಆದರೆ ಸಿನಿಮಾ ಇದುವರೆಗೆ ಗಳಿಸಿದ್ದು ಬರೀ 10 ಕೋಟಿ ರೂ. ಅಂದುಕೊಂಡ ಮಟ್ಟದಲ್ಲಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಕಾಣುತ್ತಿಲ್ಲ. ಸಮಂತಾ ಅಭಿಮಾನಿಗಳಿಗಿದ್ದ ನಿರೀಕ್ಷೆ ಹುಸಿಯಾಗಿದೆ. ಸಿನಿಮಾ ಯಾವಾಗ ಗಳಿಕೆ ಕಂಡಿಲ್ಲವೂ ಟಾಲಿವುಡ್ ನಿರ್ಮಾಪಕರೊಬ್ಬರು ಸಮಂತಾ ಅವರ ಮೇಲೆ ಮುಗಿಬಿದ್ದು, ಅವರನ್ನು ಟೀಕಿಸಿದ್ದಾರೆ.
ಆನ್ಲೈನ್ ಮೀಡಿಯಾವೊಂದರಲ್ಲಿ ಮಾತನಾಡಿರುವ ಚಿಟ್ಟಿ ಬಾಬು ಎಂಬ ನಿರ್ಮಾಪಕ “ಸಮಂತಾಳ ಸಿನಿಮಾ ಕೆರಿಯರ್ ಮುಗಿಯಿತು. ಅವರು ವಿಚ್ಛೇದನದ ಬಳಿಕ ಪುಷ್ಪ ಸಿನಿಮಾದ ʼ ಊ ಅಂಟವಾʼ ಹಾಡನ್ನು ಮಾಡಿದರು, ಅದರಿಂದ ಬರುವ ಹಣ ಅವರ ಜೀವನ ನಿಭಾಯಿಸಲು ಬೇಕಿತ್ತು. ಅದಕ್ಕಾಗಿ ಆ ಹಾಡನ್ನು ಮಾಡಿದರು. ಅವರು ತಮ್ಮ ಸ್ಟಾರ್ ಹೀರೋಯಿನ್ ಪಟ್ಟ ಕಳೆದುಕೊಂಡ ನಂತರ ತನಗೆ ಬರುತ್ತಿರುವ ಆಫರ್ ಗಳನ್ನೆಲ್ಲ ಮಾಡುತ್ತಾ ಇದ್ದಾರೆ. ಅವರ ಕೆರಿಯರ್ ಮುಗಿಯಿತು ಅವರು ಮತ್ತೆ ಸ್ಟಾರ್ ನಟಿಯಾಗಲು ಸಾಧ್ಯವಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ನೆಟ್ಟಣ: ಕಾರು- ತೂಫನ್ ಅಪಘಾತ; ಮಗು ಸೇರಿದಂತೆ ನಾಲ್ವರು ಮೃತ್ಯು
ಮುಂದುವರೆದು ಮಾತನಾಡಿರುವ ಅವರು, ಪ್ರಚಾರದ ಸಂದರ್ಭದಲ್ಲಿ ಅವರು ಭಾವನಾತ್ಮಕವಾಗಿ ಮಾತನಾಡುತ್ತಾರೆ. ಬರೀ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಗೆಲಲ್ಲು ಆಗುವುದಿಲ್ಲ. ಯಶೋದಾ ಸಿನಿಮಾದ ಪ್ರಚಾರದ ವೇಳೆ ಎಮೋಷನಲ್ ಆದರು. ಈಗ ಈ ಸಿನಿಮಾದ ಪ್ರಚಾರದಲ್ಲೂ ಅದನ್ನೇ ಮಾಡುತ್ತಿದ್ದಾರೆ. ಸಾಯವ ಮುನ್ನ ಈ ಪಾತ್ರವನ್ನು ಮಾಡಬೇಕೆಂದಿದ್ದೆ ಎಂದು ಹೇಳಿ ಸಹಾನುಭೂತಿಯನ್ನು ಪಡೆಯಲು ಯತ್ನಿಸಿದ್ದಾರೆ. ಎಲ್ಲಾ ಸಂದರ್ಭದಲ್ಲೂ ಸೆಂಟಿಮೆಂಟ್ ನಿಂದ ಗೆಲ್ಲಲು ಆಗುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ ಜನ ಅದನ್ನು ನೋಡುತ್ತಾರೆ. ಈ ರೀತಿಯ ನಾಟಕ ಮಾಡುವುದು ಸರಿಯಲ್ಲ. ಹೀರೋಯಿನ್ ಪಟ್ಟವನ್ನು ಕಳೆದುಕೊಂಡ ಆಕೆ ʼಶಾಕುಂತಲಂʼ ಪಾತ್ರಕ್ಕೆ ಹೇಗೆ ಹೊಂದಿಕೊಂಡರು ಎನ್ನುವುದೇ ಅಚ್ಚರಿ” ಎಂದಿದ್ದಾರೆ.
ನಿರ್ಮಾಪಕ ಸಮಂತಾ ಅವರ ಬಗ್ಗೆ ಹೇಳಿರುವ ಮಾತಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ನೀನು ಅಕ್ಕಿನೇನಿ ಕುಟುಂಬದವ, ಅವರ ಚಪ್ಪಲಿ ನೆಕ್ಕುವವ, ನೀನು ಸಮಂತಾರ ಸ್ಟೇಟಸ್ ಬದಲಾಯಿಸಲು ಆಗುವುದಿಲ್ಲ ಎಂದು ಅಭಿಮಾನಿಯೊಬ್ಬರ ಆಕ್ರೋಶದಿಂದ ಟ್ವೀಟ್ ಮಾಡಿದ್ದಾರೆ. ʼಶಾಕುಂತಲಂʼ ಸೋಲಿಗೆ ಸಮಂತಾ ಕಾರಣವಲ್ಲ. ಅವರು ತಮ್ಮ 100% ಪರಿಶ್ರಮವನ್ನು ಹಾಕಿದ್ದಾರೆಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಸದ್ಯ ಸಮಂತಾ ಲಂಡನ್‌ನಲ್ಲಿ ರಾಜ್ ಮತ್ತು ಡಿಕೆ ಅವರ ʼಸಿಟಾಡೆಲ್ʼ ಚಿತ್ರೀಕರಣದಲ್ಲಿದ್ದಾರೆ.
#ChittiBabu babu barking against Samantha 🤣🤣🤣🤣🤣.. She is a superstar.. You chittibabu idiot.. Just because you are akkerlani pamily foot licker it will never change Samantha status… #Shaakunthalam #citadel
— Samantha family ❤ (@angelfernand21) April 18, 2023
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.