LEO: ʼಲಿಯೋʼ ಕನ್ನಡ ಪೋಸ್ಟರ್ ರಿಲೀಸ್; ಮಾಸ್ ಲುಕ್ ನಲ್ಲಿ ಮಿಂಚಿದ ದಳಪತಿ
Team Udayavani, Sep 18, 2023, 6:21 PM IST
ಚೆನ್ನೈ: ದಳಪತಿ ವಿಜಯ್ – ಲೋಕೇಶ್ ಕನಕರಾಜ್ ʼಲಿಯೋʼ ಸಿನಿಮಾ ರಿಲೀಸ್ ಗೂ ಮುನ್ನವೇ ಕುತೂಹಲ ಹೆಚ್ಚಿಸಿದೆ. ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಸಿನಿಮಾದ ಪೋಸ್ಟರ್ ಗಳನ್ನು ರಿಲೀಸ್ ಮಾಡುವ ಯೋಜನೆಯನ್ನು ಹಾಕಿಕೊಂಡಿರುವ ʼಲಿಯೋʼ ತಂಡ ತೆಲುಗು ಬಳಿಕ ಮತ್ತೊಂದು ಭಾಷೆಯಲ್ಲಿ ಹೊಸ ಪೋಸ್ಟರ್ ನ್ನು ರಿಲೀಸ್ ಮಾಡಿದೆ.
ಭಾನುವಾರ ತೆಲುಗು ಭಾಷೆಯಲ್ಲಿ ʼಲಿಯೋʼ ಪೋಸ್ಟರ್ ರಿಲೀಸ್ ಆಗಿತ್ತು. ಈ ಪೋಸ್ಟರ್ ಈಗಾಗಲೇ ಟಾಲಿವುಡ್ ವಲಯದಲ್ಲಿಯೂ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ಸೋಮವಾರ(ಸೆ.18 ರಂದು) ಕನ್ನಡದಲ್ಲಿ ʼಲಿಯೋʼ ಪೋಸ್ಟರ್ ನ್ನು ರಿವೀಲ್ ಮಾಡಲಾಗಿದೆ.
“KEEP CALM AND PLOT YOUR ESCAPE” ಎಂದ ಬರೆದುಕೊಂಡಿರುವ ಪೋಸ್ಟರ್ ನಲ್ಲಿ ಗನ್ ವೊಂದರ ಒಳಗೆ ದಳಪತಿ ವಿಜಯ್ ಕೂತಿರುವ ಹಾಗೆ ತೋರಿಸಲಾಗಿದೆ. ಈ ಪೋಸ್ಟರ್ ನೋಡಿ ಕನ್ನಡಿಗರು ಭೇಷ್ ಎಂದಿದ್ದು, ದಳಪತಿ ಸಿನಿಮಾವನ್ನು ಕನ್ನಡದಲ್ಲಿ ನೋಡಲು ಕಾಯುತ್ತಿದ್ದಾರೆ.
ಈಗಾಗಲೇ ಒಂದೊಂದೇ ಕ್ಯಾರೆಕ್ಟರ್ ಗಳ ಪೋಸ್ಟರ್ ನ್ನು ರಿಲೀಸ್ ಮಾಡಿ ಹೈಪ್ ಹೆಚ್ಚಿಸಿರುವ ʼಲಿಯೋʼ ಇದೇ ಅಕ್ಟೋಬರ್ 19 ರಂದು ಸಿನಿಮಾ ತೆರೆಗೆ ಬರಲಿದೆ.
ʼಲಿಯೋʼ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಅವರು ಮ್ಯೂಸಿಕ್ ನೀಡಿದ್ದು, ನಟಿ ತ್ರಿಷಾ ಕೃಷ್ಣನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ದತ್ ,ಅರ್ಜುನ್ ಸರ್ಜಾ, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಗೌತಮ್ ಮೆನನ್, ಪ್ರಿಯಾ ಆನಂದ್, ಮ್ಯಾಥ್ಯೂ ಥಾಮಸ್, ಸ್ಯಾಂಡಿ ಮಾಸ್ಟರ್ ಮುಂತಾದ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
Mumbai: ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ
Bollywood: ʼಸಿಂಗಂ ಎಗೇನ್ʼ ಬಳಿಕ ʼಗೋಲ್ ಮಾಲ್ -5ʼಗೆ ಜತೆಯಾಗಲಿದ್ದಾರೆ ಅಜಯ್- ರೋಹಿತ್
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.